ಕೊಯಿಕುಳಿ ಭಾಗದಲ್ಲಿ ಬೀಡು ಬಿಟ್ಟ ಆನೆಗಳ ಹಿಂಡು – ಶಾಲೆಗೆ ರಜೆ

ಕಂದಡ್ಕ ನೀರಬಿದಿರೆ ಭಾಗದಲ್ಲಿ ಕಳೆದೆರಡು ವಾರಗಳಿಂದ ಆನೆಗಳ ಹಿಂಡು ಬೀಡುಬಿಟ್ಟಿದ್ದು ನಿರಂತರ ಕೃಷಿ ಮಾಡುತ್ತಿದ್ದು ಇದೀಕ ಕೊಯಿಕುಳಿ ಭಾಗದಲ್ಲಿ ಆನೆ ಸಂಚಾರ ಕಾಣಿಕೊಂಡಿದೆ. 

. . . . . . . . .

ಡಾ. ಗಣೇಶ್ ಶರ್ಮ ನೀರಬಿದಿರೆ ಇವರ ತೋಟಕ್ಕೆ ಕಾಡಾನೆ ಪುನಃ ದಾಳಿ ಮಾಡಿದೆ. ಅಲ್ಲಿಂದ ಕೊಯಿಕುಳಿ ಶಾಲೆಯ ಬಳಿಯ ತೋಟ, ಕೆದ್ಕಾನ ಭಾಗದ ತೋಟಕ್ಕೆ ಆನೆಗಳು ಹೋಗಿವೆ ಎನ್ನಲಾಗುತ್ತಿದ್ದು ಶಾಲೆಗೆ ಮಕ್ಕಳನ್ನು ಕಳಿಸಲು ಹೆದರುವಂತಾಗಿದೆ.

. . . . . . .

ಪೋಷಕರ ಒತ್ತಾಯದ ಹಿನ್ನೆಲೆಯಲ್ಲಿ ಕೊಯಿಕುಳಿ ಶಾಲಾ ಮುಖ್ಯಶಿಕ್ಷಕರು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ತಿಳಿಸಿ ಅವರ ಸೂಚನೆಯಂತೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಜೆ ನೀಡಿದ್ದಾರೆ. ಅರಣ್ಯ ಇಲಾಖೆ ಇನ್ನಾದರೂ ತುರ್ತು ಕ್ರಮ ಕೈಗೊಂಡು ಜೀವ ಹಾನಿ ಸಂಭವಿಸುವ ಮೊದಲು ಆನೆಗಳನ್ನು ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳಬೇಕಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading