ಇಂದಿನ(ಆಗಸ್ಟ್ 06) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಕಾಳುಮೆಣಸು, ರಬ್ಬರ್ ಹಾಗೂ ಕೊಬ್ಬರಿ ದರದಲ್ಲಿ ಏರಿಕೆ ; ಅಡಿಕೆ ಧಾರಣೆ ಸಂಪೂರ್ಣ ಸ್ಥಿರ! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ದಿನಾಂಕ : 06 ಆಗಸ್ಟ್ 2026
ವಾರ : ಗುರುವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಆಗಸ್ಟ್ 06) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 390 ರಿಂದ 475
ಹಳೆ ಅಡಿಕೆ : 390 ರಿಂದ 550
ಡಬಲ್ ಚೋಲ್ : 390 ರಿಂದ 550
ಫಟೋರಾ : 320 ರಿಂದ 375
ಉಳ್ಳಿ : 250 ರಿಂದ 270
ಕರಿಗೋಟು : 225 ರಿಂದ 255
ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ನಿರಂತರ ತಟಸ್ಥ ವಾತಾವರಣ ಮುಂದುವರಿದಿದ್ದು, ಪ್ರಮುಖ ತಳಿಗಳಾದ ಹೊಸ ಅಡಿಕೆ, ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಸೇರಿದಂತೆ ಉಪ ಉತ್ಪನ್ನಗಳಾದ ಫಟೋರಾ, ಉಳ್ಳಿ ಮತ್ತು ಕರಿಗೋಟು ಬೆಲೆಗಳು ನಿನ್ನೆಯ(ಆಗಸ್ಟ್ 05) ಮಟ್ಟದಲ್ಲೇ ಸಂಪೂರ್ಣ ಸ್ಥಿರವಾಗಿವೆ.
ಸ್ಥಿರತೆಯಲ್ಲಿ ಪ್ರಮುಖ ತಳಿಗಳು : ಹೊಸ ಅಡಿಕೆ ಗರಿಷ್ಠ ₹475 ರಲ್ಲಿದ್ದರೆ, ಹಳೆ ಅಡಿಕೆ ಮತ್ತು ಡಬಲ್ ಚೋಲ್ ವಿಭಾಗಗಳು ಪ್ರತಿ ಕೆಜಿಗೆ ಗರಿಷ್ಠ ₹550 ರ ಉತ್ತಮ ದರದಲ್ಲಿಯೇ ಸ್ಥಿರತೆಯನ್ನು ಕಾಯ್ದುಕೊಂಡಿವೆ.
ಬದಲಾಗದ ಉಪ ಉತ್ಪನ್ನಗಳು : ಫಟೋರಾ(ಗರಿಷ್ಠ ₹375), ಉಳ್ಳಿ(ಗರಿಷ್ಠ ₹270) ಹಾಗೂ ಕರಿಗೋಟು(ಗರಿಷ್ಠ ₹255) ಧಾರಣೆಗಳಲ್ಲಿ ಇಂದು ಯಾವುದೇ ಏರಿಳಿತ ಕಂಡುಬಂದಿಲ್ಲ.
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಆಧಾರದಲ್ಲಿ ದರವನ್ನು ನಿಗದಿಪಡಿಸಲಾಗುವುದು)

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 585 ರಿಂದ 685
ಹಸಿ ಕೊಕ್ಕೋ : 70 ರಿಂದ 100
ಒಣ ಕೊಕ್ಕೋ : 290 ರಿಂದ 320
ಕೊಬ್ಬರಿ : 140 ರಿಂದ 175
ನಿನ್ನೆಗೆ(ಆಗಸ್ಟ್ 05) ಹೋಲಿಸಿದರೆ ಇಂದಿನ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಗರಿಷ್ಠ ₹5 ರಷ್ಟು ಜಿಗಿತ ಕಂಡಿದ್ದರೆ, ಕಾಳುಮೆಣಸು ಧಾರಣೆಯಲ್ಲೂ ಗರಿಷ್ಠ ₹5 ರಷ್ಟು ಚೇತರಿಕೆ ಕಂಡುಬಂದಿದೆ. ಕೊಕ್ಕೋ ಮಾರುಕಟ್ಟೆಯು ನಿನ್ನೆಯ ದರದಲ್ಲೇ ಯಥಾಸ್ಥಿತಿ ಕಾಯ್ದುಕೊಂಡಿದೆ.
ಕೊಬ್ಬರಿ ಮತ್ತೆ ಜಿಗಿತ : ನಿನ್ನೆ ₹170 ರಲ್ಲಿದ್ದ ಕೊಬ್ಬರಿ ಗರಿಷ್ಠ ಧಾರಣೆಯು ಇಂದು ಮತ್ತೆ ಏರಿಕೆಯಾಗಿ ಪ್ರತಿ ಕೆಜಿಗೆ ₹175 ಕ್ಕೆ ತಲುಪಿದೆ. ಕನಿಷ್ಠ ಬೆಲೆಯೂ ₹130 ರಿಂದ ₹140 ಕ್ಕೆ ಏರಿದೆ.
ಕಾಳುಮೆಣಸಿನಲ್ಲಿ ಚೇತರಿಕೆ : ಕಳೆದ ಕೆಲವು ದಿನಗಳಿಂದ ಸ್ಥಿರವಾಗಿದ್ದ ಕಾಳುಮೆಣಸು ದರದಲ್ಲಿ ಇಂದು ಕೊಂಚ ಚೇತರಿಕೆ ಕಂಡುಬಂದಿದ್ದು, ಗರಿಷ್ಠ ಬೆಲೆ ₹685 ಕ್ಕೆ ತಲುಪಿದೆ.
ಕೊಕ್ಕೋ ಯಥಾಸ್ಥಿತಿ : ಹಸಿ ಕೊಕ್ಕೋ(ಗರಿಷ್ಠ ₹100) ಹಾಗೂ ಒಣ ಕೊಕ್ಕೋ(ಗರಿಷ್ಠ ₹320) ನಿನ್ನೆಯ ದರದಲ್ಲೇ ಸ್ಥಿರವಾಗಿ ವಹಿವಾಟು ಮುಂದುವರಿಸಿವೆ.
(ಕಾಳುಮೆಣಸಿನ ತೇವಾಂಶ ಮತ್ತು ಲೀಟರ್ ತೂಕದ ಆಧಾರದಲ್ಲಿ ದರದಲ್ಲಿ ವ್ಯತ್ಯಾಸವಾಗುವುದು)
(ಮಿಲ್ಲಿಂಗ್ ಕ್ವಾಲಿಟಿ ಕೊಬ್ಬರಿಯನ್ನು ಮಾತ್ರ ಖರೀದಿ ಮಾಡಲಾಗುವುದು)

ರಬ್ಬರ್ ಧಾರಣೆ
ಗ್ರೇಡ್ : 281.5
ಲಾಟ್ : 251
ಸ್ಕ್ರ್ಯಾಪ್ ಪ್ರಥಮ ದರ್ಜೆ : 171
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 161
ನಿನ್ನೆಗೆ(ಆಗಸ್ಟ್ 05) ಹೋಲಿಸಿದರೆ ಇಂದಿನ ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಗ್ರೇಡ್, ಲಾಟ್ ಹಾಗೂ ಸ್ಕ್ರ್ಯಾಪ್ ಪ್ರಥಮ ದರ್ಜೆ ರಬ್ಬರ್ ಧಾರಣೆಗಳು ಏರಿಕೆ ಕಾಣುವ ಮೂಲಕ ಉತ್ತಮ ಮಟ್ಟದತ್ತ ಸಾಗಿವೆ.
₹281.50 ಕ್ಕೆ ತಲುಪಿದ ಗ್ರೇಡ್ ರಬ್ಬರ್ : ಗ್ರೇಡ್ ರಬ್ಬರ್ ಮಾರುಕಟ್ಟೆಯಲ್ಲಿ ಏರಿಕೆ ಹಾದಿ ಮುಂದುವರಿದಿದ್ದು, ಇಂದು ಪ್ರತಿ ಕೆಜಿಗೆ ಅರ್ಧ ರೂಪಾಯಿ(50 ಪೈಸೆ) ಹೆಚ್ಚಳವಾಗಿ ₹281.50 ರ ಉತ್ತಮ ಮಟ್ಟ ತಲುಪಿದೆ.
₹251 ಕ್ಕೆ ಜಿಗಿದ ಲಾಟ್ ರಬ್ಬರ್ : ಲಾಟ್ ರಬ್ಬರ್ ಧಾರಣೆಯು ಇಂದು ಪ್ರತಿ ಕೆಜಿಗೆ ₹1 ರಷ್ಟು ಏರಿಕೆಯಾಗಿ ₹251 ರ ಗಡಿ ದಾಟಿದೆ.
ಸ್ಕ್ರ್ಯಾಪ್ ರಬ್ಬರ್‌ನಲ್ಲೂ ಚೇತರಿಕೆ : ಸ್ಕ್ರ್ಯಾಪ್ ಪ್ರಥಮ ದರ್ಜೆ ರಬ್ಬರ್ ಬೆಲೆಯಲ್ಲಿ ₹1 ಏರಿಕೆಯಾಗಿ ₹171 ತಲುಪಿದ್ದರೆ, ದ್ವಿತೀಯ ದರ್ಜೆ ಸ್ಕ್ರ್ಯಾಪ್ ರಬ್ಬರ್ ₹161 ರಲ್ಲೇ ಸ್ಥಿರವಾಗಿದೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading