ಬೆಳ್ಳಾರೆಯಲ್ಲಿ ಬಿ.ಎಸ್.ಎನ್.ಎಲ್ 4G ನೆಟ್‌ವರ್ಕ್ ಇದ್ದರೂ ಸಿಮ್ ಸಿಗದೇ ಗ್ರಾಹಕರ ಪರದಾಟ..!!

ಬೆಳ್ಳಾರೆಯಲ್ಲಿ ಬಿ.ಎಸ್.ಎನ್.ಎಲ್ 4G ಸೇವೆ ಲಭ್ಯವಿದ್ದರೂ, ಹೊಸ ಬಿ.ಎಸ್.ಎನ್.ಎಲ್ ಸಿಮ್ ಕಾರ್ಡ್ ಪಡೆಯಲು ಸಾರ್ವಜನಿಕರು ಹಾಗೂ ಗ್ರಾಹಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

. . . . . . . . .

ಸ್ಥಳೀಯ ಮೊಬೈಲ್ ಅಂಗಡಿಗಳ ಮಾಹಿತಿಯಂತೆ, ಬಿ.ಎಸ್‌.ಎನ್.ಎಲ್ ಸಿಮ್ ಕಾರ್ಡ್‌ಗಳ ಸ್ಟಾಕ್ ದೀರ್ಘಕಾಲದಿಂದ ಲಭ್ಯವಾಗುತ್ತಿಲ್ಲ. ಈ ಕುರಿತು ವಿಚಾರಿಸಿದಾಗ, ಸ್ಥಳೀಯ ಬಿ.ಎಸ್.ಎನ್.ಎಲ್ ಡಿಸ್ಟ್ರಿಬ್ಯೂಟರ್ ಸಮರ್ಪಕವಾಗಿ ಸಿಮ್ ಪೂರೈಕೆ ಮಾಡುತ್ತಿಲ್ಲ ಎಂದು ಹಲವು ಮೊಬೈಲ್ ಏಜೆಂಟರು ಆರೋಪಿಸಿದ್ದಾರೆ.

. . . . . . .

ಈ ಸಮಸ್ಯೆಯನ್ನು ಸಂಬಂಧಪಟ್ಟ ಬಿ.ಎಸ್.ಎನ್.ಎಲ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಅಸಮಾಧಾನ ಸಾರ್ವಜನಿಕರು ಹಾಗೂ ಮೊಬೈಲ್ ವ್ಯಾಪಾರಿಗಳಲ್ಲಿ ವ್ಯಕ್ತವಾಗಿದೆ. ಒಂದೆಡೆ ಬಿ.ಎಸ್.ಎನ್.ಎಲ್ 4G ಸೇವೆಯನ್ನು ವಿಸ್ತರಿಸುತ್ತಿದ್ದರೆ, ಮತ್ತೊಂದೆಡೆ ಹೊಸ ಗ್ರಾಹಕರಿಗೆ ಸಿಮ್ ಕಾರ್ಡ್ ದೊರೆಯದಿರುವುದು ಇಲಾಖೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬೆಳ್ಳಾರೆಯಂತಹ ಪ್ರಮುಖ ವ್ಯಾಪಾರ ಕೇಂದ್ರದಲ್ಲಿ ಬಿ.ಎಸ್.ಎನ್.ಎಲ್ ಸಿಮ್ ಕಾರ್ಡ್‌ಗಳ ಲಭ್ಯತೆಯನ್ನು ಖಚಿತಪಡಿಸಿ, ಡಿಸ್ಟ್ರಿಬ್ಯೂಟರ್ ವ್ಯವಸ್ಥೆಯನ್ನು ಸುಧಾರಿಸಿ, ಗ್ರಾಹಕರ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಸಾರ್ವಜನಿಕರು ಮತ್ತು ಮೊಬೈಲ್ ವ್ಯಾಪಾರಿಗಳು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading