ಕಂದಡ್ಕ ನೀರಬಿದಿರೆ ಭಾಗದಲ್ಲಿ ಬೀಡು ಬಿಟ್ಟ ಆನೆಗಳ ಹಿಂಡು; ಕೃಷಿ ಹಾನಿ | ಜನರಲ್ಲಿ ಭಯದ ವಾತಾವರಣ

ಕಂದಡ್ಕ ಪರಿಸರದಲ್ಲಿ ಕಳೆದೊಂದು ವಾರದಿಂದ ಬೀಡು ಬಿಟ್ಟ ಆನೆಗಳ ಹಿಂಡು ಈ ಭಾಗದಲ್ಲಿ ನಿರಂತರ ಕೃಷಿ ತೋಟಗಳಿಗೆ ದಾಳಿ ನಡೆಸಿ ಹಾನಿ ಮಾಡುತ್ತಿದೆ. ಹೇಮಂತ್ ಕಂದಡ್ಕ, ಅಜಯ್ ಕೃಷ್ಣ ಕಂದಡ್ಕ, ನೀರಬಿದಿರೆ, ಮದಕ ಭಾಗದ ಹಲವು ಕೃಷಿ ತೋಟಗಳಿಗೆ ಆನೆಗಳ ಹಿಂಡು ದಾಳಿ ನಡೆಸಿ ಕೃಷಿ ಹಾನಿ ಮಾಡುತ್ತಿದೆ. ಈ ಭಾಗದ ನಿವಾಸಿಗಳು ಭಯದಲ್ಲಿ ಬದುಕುವಂತಾಗಿದೆ.

. . . . . . . . .

ಆರಣ್ಯಾ ಇಲಾಖೆಯ ಅಧಿಕಾರಿಗಳು ಹಾಗೂ ಎಲಿಫೆಂಟ್ ಟಾಸ್ಕ್ ಫೋರ್ಸ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಆನೆಗಳನ್ನು ಪುನಃ ಕಾಡಿಗೆ ಅಟ್ಟಲು ಇಲಾಖೆ ವಿಫಲಗೊಂಡಿದೆಯೇ, ಹೊಳೆ ದಾಟಲು ಆನೆಗಳು ಭಯಗೊಂಡಿದೆಯೋ ಎಂಬ ಜಿಜ್ಞಾಸೆ ಮೂಡಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading