ಸುಬ್ರಹ್ಮಣ್ಯ : ಕುಕ್ಕೆ ಸಂಜೀವಿನಿ ಸೇವಾ ಟ್ರಸ್ಟ್ ನಿಂದ ಬಹುಮಾನ ಕೊಡುಗೆ

ಸುಬ್ರಹ್ಮಣ್ಯ ಆಗಸ್ಟ್ 04 : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುಬ್ರಹ್ಮಣ್ಯ ಠಾಣೆಯ ವತಿಯಿಂದ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಷನಲ್ ಟ್ರಸ್ಟ್ ನ ಸಹಭಾಗಿತ್ವದಲ್ಲಿ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಇತ್ತೀಚೆಗೆ ಪೊಲೀಸ್ ಇಲಾಖೆಗೆ ಸೇರುವ ಅಭ್ಯರ್ಥಿಗಳಿಗಾಗಿ ಮಾದರಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏರ್ಪಡಿಸಿದ್ದರು.

. . . . . . . . .

ರಾಜ್ಯದ ವಿವಿದೆಡೆಗಳಿಂದ ಸುಮಾರು 300ಕ್ಕೂ ಮಿಕ್ಕಿ ಆಸಕ್ತ ಅಭ್ಯರ್ಥಿಗಳು ಮಾದರಿ ಪೊಲೀಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಿದ್ದರು. ಅದರಲ್ಲಿ ದ್ವಿತೀಯ ತೃತೀಯ ಹಾಗೂ ಚತುರ್ಥ ಬಹುಮಾನಗಳ ಪ್ರಾಯೋಜಕರಾಗಿ ಸುಬ್ರಹ್ಮಣ್ಯದ ಕುಕ್ಕೆ ಸಂಜೀವಿನಿ ಸೇವಾ ಟ್ರಸ್ಟ್ ನವರು ಸಹಕರಿಸಿದ್ದರು. ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಅವರು ಪರೀಕ್ಷೆಯ ಉಸ್ತುವಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಕುಕ್ಕೆ ಸಂಜೀವಿನಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಪವನ್ ಎಂಡಿ, ಉಪಾಧ್ಯಕ್ಷ ಮಹೇಶ್ ಕೂರ್ಗ್, ಕಾರ್ಯದರ್ಶಿ ಹರ್ಷಿತ್ ಡಿ.ವಿ, ಅವರು ಬಹುಮಾನಕ್ಕಾಗಿ 18 ಸಾವಿರ ರೂಪಾಯಿ ನಗದನ್ನು ಆರಕ್ಷಕ ಉಪನಿರೀಕ್ಷಕ ಆಂಜನೇಯ ರೆಡ್ಡಿ ಅವರಿಗೆ ಹಸ್ತಾಂತರಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading