- Sunday
- September 20th, 2026
ಸಂಪಾಜೆ ಮಸೀದಿ ಸಮೀಪ ಜೀಪು ಹಾಗೂ ಕಾರು ಮಧ್ಯೆ ಅಪಘಾತ ನಡೆದು ಜೀಪು ಪಲ್ಟಿಯಾದ ಘಟನೆ ಇಂದು ಸಂಜೆ ನಡೆದಿದೆ. ಅಪಘಾತದ ರಭಸಕ್ಕೆ ಜೀಪು ಪಲ್ಟಿಯಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಬ್ಬರಿಗೆ ಗಾಯಗಳಾಗಿದ್ದು, ಎಐಕೆಎಂಸಿಸಿ ಅಂಬ್ಯುಲೆನ್ಸ್ ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಆಲೆಟ್ಟಿ ಗ್ರಾಮದ ಕೂಟೇಲು ಎಂಬಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ತರವಾಡು ಮನೆಗೆ ಹಾನಿಯಾಗಿದ್ದು, ತರವಾಡು ಮನೆಯ ದೈವ ಚಾವಡಿಯ ಮೇಲ್ಬಾಗದ ಬರೆ ಕುಸಿತಗೊಂಡಿದ್ದು, ಪರಿಣಾಮವಾಗಿ ಮನೆಯ ಗೋಡೆ ಹಾಗೂ ನೀರಿನ ಟ್ಯಾಂಕ್ ಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಸುಬ್ರಹ್ಮಣ್ಯ ಆಗಸ್ಟ್ 02 : ಸುಬ್ರಹ್ಮಣ್ಯದ ಕಾಶಿ ಕಟ್ಟೆ ಬಳಿ ಇರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಮಹಿಳಾ ಹಾಸ್ಟೆಲ್ ನಲ್ಲಿ ಮಾದಕ ದ್ರವ್ಯ ವ್ಯಸನದ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಆಂಜನೇಯ ರೆಡ್ಡಿ ಅವರು ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳು ಮತ್ತು ಅದರಿಂದ ನಾವು ಹೇಗೆ ದೂರ...
ಸುಬ್ರಹ್ಮಣ್ಯ ಆಗಸ್ಟ್ 01 : ಕರ್ನಾಟಕ ಪಬ್ಲಿಕ್ ಸ್ಕೂಲ್ ಪಂಜ ಪ್ರಾಥಮಿಕ ಶಾಲೆಗೆ ಹಿರಿಯ ವಿದ್ಯಾರ್ಥಿಗಳು ಸುಮಾರು 46,500 ರೂಪಾಯಿ ವೆಚ್ಚದ ನಾಲ್ಕು ಸಿಸಿಟಿವಿಗಳನ್ನು ಅಳವಡಿಸಿ ಕೊಡುಗೆಯಾಗಿ ನೀಡಿದ್ದಾರೆ. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುರುಷೋತ್ತಮ ನೆಕ್ಕಿಲರವರು ಚೆಕ್ ಅನ್ನು ಶಾಲಾ ಮುಖ್ಯ ಶಿಕ್ಷಕಿ ಲೀಲಕುಮಾರಿ.ಟಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಹಾಗೂ...
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಜೇಸಿಐ ಪಂಜ ಪಂಚಶ್ರೀ ಹಾಗೂ ಲಯನ್ಸ್ ಕ್ಲಬ್ ಪಂಜ ಇವುಗಳ ಆಶ್ರಯದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಆಗಸ್ಟ್ 09 ಆದಿತ್ಯವಾರದಂದು ಬೆಳಿಗ್ಗೆ 9:00 ಗಂಟೆಯಿಂದ ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಆಟಿ ತಿಂಗಳನ್ನು ನೆನಪಿಸುವ “ಆಟಿ ನೆಂಪು - 2026” ವಿಶೇಷ ಕಾರ್ಯಕ್ರಮ...
*01,ಮೇಷರಾಶಿ*,ನಿಮಗೆ ಒದಗಿದ ಅನೇಕ ಬಿಕ್ಕಟ್ಟುಗಳು ದೈವಕೃಪೆಯಿಂದ ಸಡಿಲಗೊಳ್ಳುವುವು. ಮತ್ತು ನಿಮ್ಮ ಬಹುದಿನದ ಬಯಕೆಗಳು ಗರಿಕೆದರಿ ಕುಣಿದಾಡುವುವು. ಸದ್ಯದರಲ್ಲೇ ಇನ್ನು ಹೆಚ್ಚು ಸಂತಸ ನೀಡುವ ವಾರ್ತೆಯನ್ನು ಕೇಳುವಿರಿ,ಗಮನಿಸಿ:-ನಿಮ್ಮ ಸಕಾರಾತ್ಮಕ ಮನಸ್ಸಿನ ಜೊತೆ ನಿಮ್ಮ ಸಾಮರ್ಥ್ಯ ಹಾಗು ಜ್ಞಾನವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಿ,ಪರಿಹಾರ:-ಗಣಪತಿಯ ಪ್ರಾರ್ಥನೆ ಮಾಡಿ, *02,ವೃಷಭರಾಶಿ*,ಯಾವುದೂ ನಿಮಗೆ ಕಷ್ಟವಲ್ಲ. ಆದರೆ ಯಾಕೋ ತಿಳಿದಷ್ಟು ವೇಗದಿಂದ ಮುಂದೆ ಸಾಗಲಾರದು...
