ದ್ವಾದಶ ರಾಶಿಗಳ ದಿನಭವಿಷ್ಯ

*01,🐏ಮೇಷರಾಶಿ🐂*
📖,ನಿಮಗೆ ಒದಗಿದ ಅನೇಕ ಬಿಕ್ಕಟ್ಟುಗಳು ದೈವಕೃಪೆಯಿಂದ ಸಡಿಲಗೊಳ್ಳುವುವು. ಮತ್ತು ನಿಮ್ಮ ಬಹುದಿನದ ಬಯಕೆಗಳು ಗರಿಕೆದರಿ ಕುಣಿದಾಡುವುವು. ಸದ್ಯದರಲ್ಲೇ ಇನ್ನು ಹೆಚ್ಚು ಸಂತಸ ನೀಡುವ ವಾರ್ತೆಯನ್ನು ಕೇಳುವಿರಿ,
ಗಮನಿಸಿ:-ನಿಮ್ಮ ಸಕಾರಾತ್ಮಕ ಮನಸ್ಸಿನ ಜೊತೆ ನಿಮ್ಮ ಸಾಮರ್ಥ್ಯ ಹಾಗು ಜ್ಞಾನವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಿ,
ಪರಿಹಾರ:-ಗಣಪತಿಯ ಪ್ರಾರ್ಥನೆ ಮಾಡಿ,

. . . . . . . . .

*02,🐂ವೃಷಭರಾಶಿ🐂*
📖,ಯಾವುದೂ ನಿಮಗೆ ಕಷ್ಟವಲ್ಲ. ಆದರೆ ಯಾಕೋ ತಿಳಿದಷ್ಟು ವೇಗದಿಂದ ಮುಂದೆ ಸಾಗಲಾರದು ಎಂಬ ತಳಮಳ ನಿಮ್ಮನ್ನು ಬಾಧಿಸುವುದು. ಆದರೆ ಪೂರ್ವ ತಯಾರಿ ಸೂಕ್ತವಾಗಿ ಮಾಡಿಕೊಂಡಲ್ಲಿ ನಿಶ್ಚಿತವಾದ ಗುರಿಯನ್ನು ತಲುಪುವಿರಿ. ಆದಾಯ ಖರ್ಚನ್ನು ಸೂಕ್ಷ್ಮವಾಗಿ ಪರಿಶೀಲಿಸಿ,
ಗಮನಿಸಿ:- ಇಂದು ಕೆಲವು ಘಟನೆಗಳು ನಿಮ್ಮನ್ನು ಭಾವಪರವಶರನ್ನಾಗಿಸುವವು,
ಪರಿಹಾರ:-ಸಂಜೆ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಬನ್ನಿ,

. . . . . . .

*03,👥ಮಿಥುನರಾಶಿ👥*
📖,ಕೋರ್ಟು ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವವು. ತೀರ್ಪು ಕೂಡಾ ನಿಮ್ಮ ಪರವಾಗಿ ಬರುವುದರಿಂದ ಮನಸ್ಸಿಗೆ ಸಂತಸವಾಗುವುದು. ಇದರಿಂದ ಒಳಿತನ್ನು ಕಾಣುವಿರಿ.ಪ್ರಯಾಣದಲ್ಲಿ ಎಚ್ಚರ ಇರಲಿ. ಹಣ್ಣು-ಐಸ್ ಕ್ರೀಮ್-ಹೂವು,-ನೀರಿಗೆ ಸಂಬಂಧಿಸಿದ ವ್ಯಾಪಾರಿಗಳಿಗೆ,ಇಂದು ವಿಶೇಷ ಲಾಭವಾಗುವುದು,
ಗಮನಿಸಿ:- ಇಂದು ಯಾರಿಗೂ ಸಾಲ ನೀಡಬೇಡಿ, 
ಪರಿಹಾರ:-ಬಡವರಿಗೆ ಆಹಾರ ನೀಡಿ,

*4,🦀ಕಟಕ ರಾಶಿ🦀*
📖,ಅವಸರದ ಕೆಲಸಗಳು ಅವ್ಯವಸ್ಥೆಯನ್ನು ಉಂಟು ಮಾಡುವುದು. ಯಾವಾಗಲೂ ಕ್ರಮಬದ್ಧವಾಗಿ ಯೋಚಿಸುವ ನೀವು ಇಂದೇಕೋ ತಾಳ್ಮೆಯನ್ನು ಕಳೆದು ಕೊಳ್ಳುವಿರಿ. ತಂದೆಯವರಿಗೆ ಅಗತ್ಯವಿದ್ದಲ್ಲಿ ಸಹಾಯ ಮಾಡಿ,
ಗಮನಿಸಿ:- ಇಂದು ನಿಮ್ಮ ಕೈಕೆಳಗೆ ಕೆಲಸ ಮಾಡುವವರು ನಿಮ್ಮ ಆಜ್ಞೆಯನ್ನು ತಿರಸ್ಕರಿಸಬಹುದು,
ಪರಿಹಾರ:-ಗ್ರಾಮ ದೇವತೆಯನ್ನು ಪೂಜಿಸಿ,

*05,🦁ಸಿಂಹ ರಾಶಿ🦁*
📖,ಎಷ್ಟೆಲ್ಲಾ ಕನಸುಗಳನ್ನು ಕಾಣುವಿರಿ. ಆದರೆ ನನಸಾಗುವ ಘಟ್ಟ ತಲುಪಿದಾಗ ನಿಮಗೆ ನಿರಾಶೆ ಕಾಣುವುದು. ನಿಮಗೆ ಅನುಭವ ಇರುವ ಕೆಲಸವನ್ನು ಹುಡುಕಿ ಮಾಡಿದಲ್ಲಿ ಯಶಸ್ಸನ್ನು ಹೊಂದಲು ಸಹಕಾರಿಯಾಗುವುದು. ಗಟ್ಟಿಯಾದ ಮನೋಸ್ಥಿತಿ ರೂಪಿಸಿಕೊಳ್ಳಿ,
ಗಮನಿಸಿ:- ಇಂದು ಖರೀದಿ/ಮಾರಾಟ ಮತ್ತು ಸಾಲಕ್ಕೆ ಸಂಬಂಧಿಸಿದಕಾರ್ಯಗಳನ್ನು ಕೈಗೊಳ್ಳುವಾಗ ಜಾಗೂರುಕರಾಗಿರಿ,
ಪರಿಹಾರ:-ನಿಮ್ಮ ಮನೆದೇವರ ಸ್ಮರಣೆ ಮಾಡಿ,

*06,👩‍🦳ಕನ್ಯಾ ರಾಶಿ👩‍🦳*
📖,ಕೆಲವು ಅಪರೂಪದ ಶಕ್ತಿ, ಸಾಹಸ, ಪ್ರತಿಭೆಗಳನ್ನು ನೀವು ಹೊಂದಿರುವುದರಿಂದ ಅವೆಲ್ಲವೂ ನಿಮ್ಮ ಉಪಯೋಗಕ್ಕೆ ಬರುತ್ತವೆ, ಇದರಿಂದ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗುವಿರಿ. ಮನಸ್ತಾಪ ಮತ್ತು ಜಗಳಗಳಿಗೆ ಈ ದಿನ ಅವಕಾಶ ಕೊಡದಿರಿ, ನಿಮ್ಮ ಮೇಲೆ ಸುಳ್ಳು ಆಪಾದನೆಗಳು ಬರುವ ಸಾಧ್ಯತೆ ಇದೆ,
ಗಮನಿಸಿ:- ಇಂದು ನಿಮ್ಮ ಆಹಾರ ಸೇವನಾ ಕ್ರಮದತ್ತ ಜಾಗೂರುಕತೆ ವಹಿಸಿ,
ಪರಿಹಾರ:-ಶ್ರೀ ಆಂಜನೇಯ ಸ್ವಾಮಿಯ ಮಂತ್ರವನ್ನು ಪಠಿಸಿ,

*07,⚖️ತುಲಾ ರಾಶಿ⚖️*
📖,ಶ್ರಮಪಟ್ಟರೆ ಕೆಲವು ಸಿದ್ಧಿಗಳನ್ನು ಸಂಪಾದಿಸಿಕೊಳ್ಳಲು ಈಗ ನಿಮಗೆ ದೈವಾನುಕೂಲವಿದೆ. ನಿಮ್ಮ ಮಾತುಗಳನ್ನು ನಿಯಂತ್ರಿಸಿಕೊಳ್ಳಿ. ಸಂಕಲ್ಪಿತ ಗುರಿ ಈಡೇರಿಸಿಕೊಳ್ಳುವವರೆಗೂ ನಿಮ್ಮ ಯೋಜನೆಗಳನ್ನು ಅನ್ಯರ ಬಳಿಯಲ್ಲಿ ಬಹಿರಂಗಗೊಳಿಸದಿರಿ,
ಗಮನಿಸಿ:- ಇಂದು ಬಂಧು ಮಿತ್ರರೊಂದಿಗೆ ನಿಮ್ಮ ಸಂಬಂಧವೂ ಉತ್ತಮಗೊಳ್ಳುವುದು,
ಪರಿಹಾರ:-ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಪ್ರಾರ್ಥನೆ ಮಾಡಿ,

*08,🦂ವೃಶ್ಚಿಕ ರಾಶಿ🦂*
ಶತ್ರುಗಳು ನಿಮ್ಮ ಯೋಜನೆ ತಿಳಿಯಲು ಪ್ರಯತ್ನಿಸುವರು. ಹಾಗಾಗಿ ನೀವು ನಿಮ್ಮ ಮನೆಯ ಸದಸ್ಯರೊಂದಿಗೆ ಭಿನ್ನಾಭಿಪ್ರಾಯವನ್ನು ತಂದುಕೊಳ್ಳದಿರಿ. ಮತ್ತು ಮನೆಯ ಗುಟ್ಟನ್ನು ಹೊರಗೆ ಹಾಕದಿರಿ. ಕೆಲಸ ಮಾಡುವಾಗ ಗಾಯಗೊಳ್ಳುವ ಸಂಭವವಿದೆ,
ಗಮನಿಸಿ:- ಇಂದು ಹಣ ಕಾಸಿನ ವಿಷಯದಲ್ಲಿ ಜಾಗ್ರತೆ,
ಪರಿಹಾರ:-ಶಿವ ಪಂಚಾಕ್ಷರಿ ಮಂತ್ರ ಪಠಿಸಿ, 

*09,🏹ಧನುಸ್ಸುರಾಶಿ🏹*
📖,ಮನಸ್ಸನ್ನು ಗೊಂದಲ ಮಾಡಿಕೊಂಡು ಕಾರ್ಯ ಪ್ರವೃತ್ತರಾದಲ್ಲಿ ಯಶಸ್ಸು ದೊರೆಯುವುದು ನಿಧಾನವಾಗುವುದು. ಚಿಕ್ಕ ವಿಷಯಗಳಿಗೆ ಮನೆಯಲ್ಲೇ ಮನಸ್ತಾಪ ಭುಗಿಲೇಳುವ ಸಾಧ್ಯತೆ ಇದೆ. ಆಹಾರ ಸೇವನೆಯ ಕಡೆಗೆ ವಿಶೇಷ ಗಮನ ಅಗತ್ಯ,
ಗಮನಿಸಿ:- ಇಂದು ನಿಮ್ಮ ಅಜಾಗರೂಕತೆಯಿಂದ ಅರೋಗ್ಯ ಕೆಡಬಹುದು,
ಪರಿಹಾರ:-ನಿಮ್ಮಕುಲದೇವರ ದರ್ಶನ ಮಾಡಿ,

*10,🐊ಮಕರ ರಾಶಿ🐊*
📖,ಮಕ್ಕಳ ವಿಚಾರಧಾರೆಗಳು ನಿಮ್ಮ ಮನಸಿಗೆ ಘಾಸಿ ಮಾಡುವ ಸಂಭವವಿದೆ. ಅವರಿಗೆ ಗುರು ಹಿರಿಯರ ಮೂಲಕ ಬುದ್ಧಿಮಾತನ್ನು ಹೇಳಿಸಿ. ಸಾಲ, ಆರ್ಥಿಕ ಬಂಡವಾಳ ಹೂಡಿಕೆ ಮತ್ತು ಖರೀದಿ/ ಮಾರಾಟ ವ್ಯವಹಾರಗಳನ್ನು ಈ ದಿನ ಮಾಡದಿರಿ,
ಗಮನಿಸಿ:-ವಾಹನ ಚಾಲನೆ ಮಾಡುವಾಗ ಜಾಗ್ರತೆ ವಹಿಸಿ, 
ಪರಿಹಾರ:-ಸಾಧ್ಯವಾದರೆ ಶಿವಾಲಯದಲ್ಲಿ ರುದ್ರಾಭಿಷೇಕ ಮಾಡಿಸಿ,

*11,⚱️ಕುಂಭ ರಾಶಿ⚱️*
📖,ಕಾರಣವಿಲ್ಲದೆ ಶತ್ರುಗಳ ಸಂಖ್ಯೆ ಜಾಸ್ತಿಯಾಗುವ ಸಂಭವವಿದೆ. ಆದರೆ ಅವರನ್ನು ನಿಗ್ರಹಿಸುವುದು ನಿಮ್ಮ ಕೈಯಲ್ಲಿಲ್ಲ ಎನ್ನುವ ಸತ್ಯವನ್ನು ಅರಿಯುವಿರಿ. ನಿಮಗೆ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದು ದೊಡ್ಡ ಸಮಸ್ಯೆಯಾಗಿ ಈ ದಿನ ಕಾಡಬಹುದು,
ಗಮನಿಸಿ:-ಇಂದುಶುಭ ವಾರ್ತೆಯೊಂದನ್ನು ಕೇಳುವಿರಿ,
ಪರಿಹಾರ:-ಶ್ರೀ ದುರ್ಗಾ ದೇವಿಯನ್ನು ಪ್ರಾರ್ಥಿಸಿ,

*12,🐬ಮೀನ ರಾಶಿ🐬*
📖,ಗ್ರಹಗತಿಗಳು ವಿಮುಖವಾಗಿರುವಾಗ ಸಣ್ಣ ಕೆಲಸವು ದೀರ್ಘಾವಧಿಯನ್ನು ತೆಗೆದುಕೊಳ್ಳುವುದು. ಇದಕ್ಕಾಗಿ ಆತಂಕ ಪಡದೆ ಕೆಲಸ ಆಗುವವರೆಗೂ ತಾಳ್ಮೆಯಿಂದ ಇರುವುದು ಒಳ್ಳೆಯದು,
ಗಮನಿಸಿ:-ಇಂದು ಅನಿರೀಕ್ಷಿತ ಸಂತೋಷಕರ ಘಟನೆ ನಿಮ್ಮ ಜೀವನದಲ್ಲಿ ನಡೆಯಬಹುದು,
ಪರಿಹಾರ:-ಗುರು ಮತ್ತು ಶನಿಯ ಸ್ತೋತ್ರ ಪಠಿಸಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading