ಪಂಜ : ಆ.09ರಂದು “ಆಟಿ ನೆಂಪು – 2026” ಆಟಿ ತಿಂಗಳ್‌ನ ವಿಷ್ಯ ನೆಂಪಿಸುವ ಜಂಬರ ; ಮನರಂಜಿಸಲಿವೆ ವಿವಿಧ ಸ್ಪರ್ಧೆಗಳು ಹಾಗೂ “ಅಪ್ಪ” ಅರೆಭಾಷೆ ನಾಟಕ ; ಆ.07 ರಿಂದ 09 ರವರೆಗೆ “ಸ್ವದೇಶಿ ಖಾದ್ಯ ಮೇಳ”

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಜೇಸಿಐ ಪಂಜ ಪಂಚಶ್ರೀ ಹಾಗೂ ಲಯನ್ಸ್ ಕ್ಲಬ್ ಪಂಜ ಇವುಗಳ ಆಶ್ರಯದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಆಗಸ್ಟ್ 09 ಆದಿತ್ಯವಾರದಂದು ಬೆಳಿಗ್ಗೆ 9:00 ಗಂಟೆಯಿಂದ ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಆಟಿ ತಿಂಗಳನ್ನು ನೆನಪಿಸುವ “ಆಟಿ ನೆಂಪು – 2026” ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 10:00 ಗಂಟೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷರಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಉಪಸ್ಥಿತರಿರಲಿದ್ದು, ಮುಖ್ಯ ಭಾಷಣಕಾರರಾಗಿ ಸಾಹಿತಿ ಹಾಗೂ ಕಲಾವಿದರಾದ ಶ್ರೀಮತಿ ಮಿಲನ ಭರತ್ ಕೊಡಗು ಉಪಸ್ಥಿತರಿರಲಿದ್ದಾರೆ. ಹಾಗೆಯೇ ಮುಖ್ಯ ಅತಿಥಿಗಳಾಗಿ ಜೇಸಿಐ ವಲಯ 15ರ ಸರಣಿ ತರಬೇತಿ ಹಾಗೂ ಇತರೆ ತರಬೇತಿ ವಿಭಾಗದ ವಲಯ ಸಂಯೋಜಕರಾದ ಜೇಸಿ ಭಾಗ್ಯೇಶ್ ರೈ, ಲಯನ್ಸ್ ಜಿಲ್ಲಾ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಎಂಜೆಎಫ್ ಲ| ಜಯರಾಮ್ ದೇರಪ್ಪಜ್ಜನಮನೆ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರು ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಹೇಶ್ ಕುಮಾರ್ ಕರಿಕ್ಕಳ ಉಪಸ್ಥಿತರಿರಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ವಾಟ್ಸ್ಆ್ಯಪ್ ನಲ್ಲಿ ಅರೆಭಾಷೆ ಸ್ವ-ರಚಿತ ಕವನ ಸ್ಪರ್ಧೆ, ಚೆನ್ನೆಮಣೆ, ಅರೆಭಾಷೆ ಪ್ರಹಸನ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಅರೆಭಾಷೆ ಭಾಷಣ ಸ್ಪರ್ಧೆ, ಆಟಿ ಖಾದ್ಯ ಸ್ಪರ್ಧೆ, ನೀರ್‌ದೋಸೆ ಹೊಯ್ಯುವ ಸ್ಪರ್ಧೆ ಹಾಗೂ ಹಸಿ ತರಕಾರಿಗಳನ್ನು ಅಲಂಕಾರಿಕವಾಗಿ ಜೋಡಿಸುವ ಸ್ಪರ್ಧೆಗಳು ನಡೆಯಲಿವೆ. ಸಂಜೆ 6:30ರಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಸ್ತುತಪಡಿಸುವ ಲೋಕೇಶ್ ಊರುಬೈಲುರವರ ರಚನೆ ಮತ್ತು ನಿರ್ದೇಶನದ “ಅಪ್ಪ” ಅರೆಭಾಷೆ ನಾಟಕ ಪ್ರದರ್ಶನಗೊಳ್ಳಲಿದೆ. ಜೊತೆಗೆ ಪಂಜದಲ್ಲಿ ಪ್ರಥಮ ಬಾರಿಗೆ ಟೀಮ್ ಉಬಾರ್ ಇವರ ನೇತೃತ್ವದಲ್ಲಿ ಆಗಸ್ಟ್ 07, 08 ಹಾಗೂ 09ರಂದು ಮೂರು ದಿನಗಳ ಕಾಲ “ಸ್ವದೇಶಿ ಖಾದ್ಯ ಮೇಳ” ನಡೆಯಲಿದ್ದು, ಮೇಳದ ಪ್ರಮುಖ ಆಕರ್ಷಣೆಗಳಾಗಿ ವಿವಿಧ ಜಿಲ್ಲೆಗಳ ವಿಶಿಷ್ಟ ತಿಂಡಿ-ತಿನಿಸುಗಳು, ಸ್ವದೇಶಿ ಮಸಾಲೆ ಪದಾರ್ಥಗಳು, ಕೈಮಗ್ಗದ ಸೀರೆಗಳು, ಕರಕುಶಲ ವಸ್ತುಗಳು, ಗೃಹೋಪಯೋಗಿ ವಸ್ತುಗಳು ಹಾಗೂ ಇನ್ನಿತರ ಸ್ಟಾಲ್ ಗಳು ಇರಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading