ಓಡಬಾಯಿ : ಕಾರು – ಬೈಕ್ ಅಪಘಾತ – ಗಾಯಾಳು ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತ್ಯು

ಸುಳ್ಯದ ಓಡಬಾಯಿಯಲ್ಲಿ ಜು.31 ರಂದು ರಾತ್ರಿ ನಡೆದ ಕಾರು ಮತ್ತು ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಘಟನೆ ಆ.01 ರಂದು ವರದಿಯಾಗಿದೆ.

. . . . . . . . .

ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರ ಲವಕುಮಾರ್ ಬಾರೆತ್ತಡ್ಕ ಅವರನ್ಬು ಸುಳ್ಯ ಪೊಲೀಸ್‌ ಠಾಣೆಯ ಸಿಬ್ಬಂದಿ ಪ್ರಕಾಶ್ ರವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ತಂದು ಬಳಿಕ ಲೈಫ್‌ ಕೇರ್ ಆಂಬುಲೆನ್ಸ್ ಮೂಲಕ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಎ ಜೆ ಆಸ್ಪತ್ರೆ ಯಲ್ಲಿ ಕರೆದೊಯ್ಯಲಾಗಿತ್ತು.ಅಲ್ಲಿ ಅವರು ಚಿಕಿತ್ಸೆ ಫಲಿಸದೇ ಆ.1 ರಂದು ಮೃತಪಟ್ಟರೆನ್ನಲಾಗಿದೆ.

. . . . . . .

ಕಾರನ್ನು ಐವರ್ನಾಡು ಗ್ರಾಮದ ಚೆಮ್ನೂರು ಕುಸುಮಾಧರ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.

ಮೃತರು ತಂದೆ ಶೇಷಪ್ಪ ಗೌಡ, ತಾಯಿ ಶಿವಮ್ಮ, ಸಹೋದರ ಯಶವಂತ ರನ್ನು ಅಗಲಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading