Ad Widget

ದೇವ ದುರ್ಲಭ ಕಾರ್ಯಕರ್ತರ ಹೈ ವೋಲ್ಟೇಜ್ ಮೀಟಿಂಗ್ – ಕಾರ್ಯಕರ್ತರು, ನಾಯಕರ ತೀರ್ಮಾನಕ್ಕೆ ಜಿಲ್ಲಾ ನಾಯಕರು ಶಾಕ್ – ನಿಯೋಜಿತ ಅಧ್ಯಕ್ಷರ ಬಗ್ಗೆ ಕಾರ್ಯಕರ್ತರ ಅಸಮಾಧಾನವೇನು ?

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಸತೀಶ್ ಕುಂಪುಲ ಆಯ್ಕೆಯಾಗಿ ಪದಗ್ರಹಣ ಸಮಾರಂಭ ನಡೆದ ಕೆಲ ದಿನಗಳ ನಂತರ ಮಂಡಲ ಸಮಿತಿಗಳಿಗೆ ನೂತನ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿತ್ತು. ಮಂಡಲ ಸಮಿತಿಗೆ ಅಧ್ಯಕ್ಷರ ನೇಮಕವಾಗುತ್ತಿದ್ದಂತೆ ಸುಳ್ಯದಲ್ಲಿ ಕಾರ್ಯಕರ್ತರಿಂದ ಭಾರಿ ಆಕ್ರೋಶವೇ ವ್ಯಕ್ತವಾಗಿದೆ.

ಸುಳ್ಯದ ದೇವದುರ್ಲಭ ಕಾರ್ಯಕರ್ತರು ಇಂದು ಪಕ್ಷದ ಕಛೇರಿಯಲ್ಲಿ ತುರ್ತು ಸಭೆ ನಡೆಸಿ ಕೆಲ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಜಿಲ್ಲೆಯ ಪ್ರಮುಖರು ಸುಳ್ಯಕ್ಕೆ ಬಂದು ಈ ಸಮಸ್ಯೆಗಳನ್ನು ಪರಿಹರಿಸುವ ಕೆಲಸಗಳನ್ನು ಮಾಡಬೇಕು. ಅಲ್ಲದೇ ಹೊಸ ಅಧ್ಯಕರ ನೇಮಕವಾಗಬೇಕು ಎಂದು ಆಗ್ರಹಿಸಿದ್ದಾರೆನ್ನಲಾಗಿದೆ. ಈ ಹಿಂದೆ ಕೋರ್ ಕಮಿಟಿಯಲ್ಲಿ ನೂತನ ಹೆಸರನ್ನು ನೀಡಿದ್ದೆವು. ಆದರೆ ಮಂಡಲ ಸಮಿತಿ ನೀಡಿದ ಹೆಸರುಗಳನ್ನು ಹೊರತು ಪಡಿಸಿ ವೆಂಕಟ್ ವಳಲಂಬೆ ನೇಮಕ ಮಾಡಲಾಗಿದೆ. ಇದು ಸರಿಯಾದ ಕ್ರಮವಲ್ಲ. ಅಲ್ಲದೇ ಜಿಲ್ಲೆ , ರಾಜ್ಯ ನಾಯಕರು ಸುಳ್ಯಕ್ಕೆ ಬಂದು ಬಗೆಹರಿಸುವ ತನಕ ಮಂಡಲದ ಕಾರ್ಯ ಚಟುವಟಿಕೆಗಳು ನಡೆಸಬಾರದು ಎಂದು ತೀರ್ಮಾನಿಸಲಾಯಿತು.  ಜಿಲ್ಲಾ ಪದಾಧಿಕಾರಿಗಳಾಗಿ ನೂತನವಾಗಿ ಆಯ್ಕೆಯಾದ ರಾಕೇಶ್ ರೈ ಕೆಡೆಂಜಿ ಮತ್ತು ವಿನಯ್ ಮುಳುಗಾಡು ನಾಳಿನ ಸಭೆಯಲ್ಲಿ ಭಾಗವಹಿಸದೇ ಕಾರ್ಯಕರ್ತರ ವಿರುದ್ದವಾಗಿ ಸಭೆಯಲ್ಲಿ ಭಾಗವಹಿಸುವುದಿಲ್ಲಾ ಎಂದು ತಿಳಿಸಿದ್ದು ಮಂಡಲ ಸಮಿತಿ ನಾಯಕರುಗಳು ಗ್ರಾಮಗಳು ಮತ್ತು ವಾರ್ಡ್ ಗಳಲ್ಲಿ ನರೇಂದ್ರ ಮೋದಿಯವರನ್ನು ಮತ್ತೋಮ್ಮೆ ಪ್ರಧಾನಿಯಾಗಿ ಮಾಡುವ ನೆಲೆಯಲ್ಲಿ ಸ್ಥಳೀಯವಾಗಿ ಕೆಲಸ ಮಾಡುತ್ತೇವೆ ಆದರೆ ಮಂಡಲದ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಸಭೆಯಲ್ಲಿ ಸರ್ವ ಸಮ್ಮತದ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಮುಂದೆ ಜೆಲ್ಲೆ ಮತ್ತು ರಾಜ್ಯ ನಾಯಕರು ಈ ಕುರಿತು ಯಾವ ರೀತಿಯಲ್ಲಿ ಕ್ರಮ ಜರುಗಿಸುವರು ಎಂದು ಕಾದು ನೋಡಬೇಕಿದೆ.

ನಿಯೋಜಿತ ಅಧ್ಯಕ್ಷರ ವಿರುದ್ದ ಕಾರ್ಯಕರ್ತರ ಆರೋಪ : 

ಕಾರ್ಯಕರ್ತರು ನಿಯೋಜಿತ ಅಧ್ಯಕ್ಷರಾದ ವೆಂಕಟ್ ವಳಲಂಬೆಯವರು ಈ ಹಿಂದೆ ಮಾಜಿ ಸಚಿವರಾದ ಎಸ್ ಅಂಗಾರರಿಗೆ ಟಿಕೆಟ್ ಕೈ ತಪ್ಪಿದಾಗ ಪಕ್ಷಕ್ಕೆ ರಾಜಿನಾಮೆ ನೀಡಿ ಪಕ್ಷದ ಅಧಿಕೃತ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯರ ವಿರುದ್ದವಾಗಿ ಮತನಾಡಿದ್ದರು. ಅಲ್ಲದೇ ಅಡ್ಡ ಮತದಾನದ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದವರು. ಇವರೇ ಆ ಸಂದರ್ಭದಲ್ಲಿ ಪಕ್ಷವು ಬಹಳ ವಿಷಮ ಸ್ಥಿತಿಗೆ ತಲುಪಲು ಕಾರಣವಾಗಿದ್ದಾರೆ.‌ ಅಲ್ಲದೇ ಆ ಸಂದರ್ಭದಲ್ಲಿ ಪಕ್ಷವನ್ನು ಅರ್ಧ ದಾರಿಯಲ್ಲಿ ಬಿಟ್ಟು ಹೋದವರು ಎಂದೆಲ್ಲ ಸಭೆಯಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ನಮಗೆ ಮೂರನೇ ಅವಧಿಗೂ ಕಂಜಿಪಿಲಿಯವರೇ ಅಧ್ಯಕ್ಷರು ಎಂದು ಸಭೆಯಲ್ಲಿ ಮತ್ತು ಸಭೆಯ ಬಳಿಕ ಕಾರ್ಯಕರ್ತರು ಹೇಳಿಕೊಳ್ಳುತ್ತಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!