Ad Widget

ಫೆ.28 ರಂದು ದೇವಚಳ್ಳ ಗ್ರಾಮ ಸಭೆ – ಫೆ.26 ರಂದು ವಾರ್ಡ್ ಸಭೆ

ದೇವಚಳ್ಳ ಗ್ರಾಮ ಪಂಚಾಯತ್ ನ 2023- 24 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಫೆ.28 ರಂದು ಪೂ. ಗಂಟೆ 11.00 ಕ್ಕೆ ಗ್ರಾ.ಪಂ.ಸಮುದಾಯ ಭವನದಲ್ಲಿ ನಡೆಯಲಿದೆ. ನೋಡೆಲ್ ಅಧಿಕಾರಿಯಾಗಿ ಕ್ಷೇತ್ರ ಸಮನ್ವಯ ಅಧಿಕಾರಿ ಆಗಮಿಸಲಿದ್ದಾರೆ. ದೇವಚಳ್ಳ ಗ್ರಾ.ಪಂ ವ್ಯಾಪ್ತಿಯ ವಾರ್ಡ್ ಸಭೆ ಫೆ.26 ರಂದು ನಡೆಯಲಿದೆ. 4 ನೇ ವಾರ್ಡ್ ಸಭೆ ಪೂ.10 ಗಂಟೆಗೆ...

ಆಲೆಟ್ಟಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ,ತ್ಯಾಜ್ಯ , ಕುಡಿಯುವ ನೀರು, ಸಿಬ್ಬಂದಿ ವೇತನ ಹೆಚ್ಚಳ ಚರ್ಚೆ , ವೇತನ ಹೆಚ್ಚಳಕ್ಕೆ ಅಸ್ತು ಎಂದ ಆಡಳಿತ ಮಂಡಳಿ

ಎರೆಡೆರಡು ಬಾರಿ ಗುದ್ದಲಿಪೂಜೆ ಗೈದ ಸೇತುವೆಗೆ ಅನುದಾನವೇ ಇಲ್ಲಾ - ಚುನಾವಣಾ ಗಿಮಿಕ್ ಗೀತಾ ಕೋಲ್ಚಾರ್. ಆಲೆಟ್ಟಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮದ ಪ್ರಥಮ ಪ್ರಜೆ ವೀಣಾಕುಮಾರಿ ಆಲೆಟ್ಟಿ ಇವರ ನೇತೃತ್ವದಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಾಮಾನ್ಯ ಸಭೆಯಲ್ಲಿ ಮೊದಲಿಗೆ ಗ್ರಾಮದ ಜನತೆ ನೀಡಿದ ಅರ್ಜಿಗಳನ್ನು ಓದಲಾಯಿತು. ಅರ್ಜಿಗಳ ಪೈಕಿ ಕುಡಿಯುವ ನೀರು ,...
Ad Widget

ಸಂವಿಧಾನ ಅಮೃತ ಮಹೋತ್ಸವ ಜಾಥಾಕ್ಕೆ ಸುಬ್ರಹ್ಮಣ್ಯದಲ್ಲಿ ಭವ್ಯ ಸ್ವಾಗತ

    ಭಾರತ ದೇಶಕ್ಕೆ ಸಂವಿಧಾನ ರೂಪುಗೊಂಡು 75 ವರ್ಷಗಳು ಪೂರ್ತಿ ಗೊಂಡ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸುವ ಜಾತಕ್ಕೆ ಚಾಲನೆ ನೀಡಿದ್ದು ಫೆ.21ರಂದು ಬುಧವಾರ ಮಧ್ಯಾಹ್ನ ಸುಬ್ರಮಣ್ಯಕ್ಕೆ ಜಾತ ವಾಹನ ತಲುಪಿದಾಗ ಭವ್ಯ ಸ್ವಾಗತದೊಂದಿಗೆ ಬರ ಮಾಡಿಕೊಂಡು ಸಮಾರಂಭವನ್ನು ಏರ್ಪಡಿಸಲಾಯಿತು.          ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೇ ಸುಜಾತ ಕಲ್ಲಾಜೆ ವಹಿಸಿ...

ಸುಳ್ಯ ನೂತನ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಪದಗ್ರಹಣ ದಿನಾಂಕ ನಿಗದಿ

ಸುಳ್ಯ ಮಂಡಲದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೆಂಕಟ್ ವಳಲಂಬೆಯವರ ಪದಗ್ರಹಣ ಕಾರ್ಯಕ್ರಮದ ದಿನಾಂಕ ನಿಗದಿಗೊಳಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ ಸೇರಿದಂತೆ ರಾಜಕೀಯ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಅಲ್ಲದೆ ನೂತನ ಸಮಿತಿಯ ಜವಾಬ್ದಾರಿಗಳನ್ನು ಈ ಕಾರ್ಯಕ್ರಮದಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಫೆ .24 ಏನೆಕಲ್ ರೈತ ಯುವಕ ಮಂಡಲ ಕಟ್ಟಡ ಲೋಕಾರ್ಪಣೆ

     ಏನಕ್ಕಲ್ನಲ್ಲಿ ರೈತ ಯುವಕ ಮಂಡಲದ ವತಿಯಿಂದ ಸುಮಾರು ಒಂದು ಕೋಟಿ 30 ಲಕ್ಷ ರೂ ವೆಚ್ಚದ ಭವ್ಯವಾದ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು  ಅದರ ತಳ ಅಂತಸ್ತು ಸುಮಾರು 65 ಲಕ್ಷ ರೂ ವೆಚ್ಚದಲ್ಲಿ ಪೂರ್ಣಗೊಂಡಿದ್ದು  ಫೆಬ್ರವರಿ 24 ಶನಿವಾರದಂದು ಲೋಕಾರ್ಪಣೆಗೊಳ್ಳಲಿರುವುದಾಗಿ ಕಟ್ಟಡ ರಚನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.      ಸಂಜೆ ಸಭಾ...

ದುಗಲಡ್ಕ; ಟ್ಯಾಪಿಂಗ್ ಗೆ ಹೋದ ಮಹಿಳೆಯ ಮೇಲೆ ಕಾಡುಹಂದಿ ದಾಳಿ !

ಬೆಳಗ್ಗೆ   ರಬ್ಬರ್ ತೋಟಕ್ಕೆ ಟ್ಯಾಪಿಂಗ್ ಮಾಡಲು ಹೋಗಿದ್ದ ಮಹಿಳೆಗೆ ಕಾಡುಹಂದಿ ದಾಳಿ ನಡೆಸಿ ಗಂಭೀರವಾಗಿ ಗಾಯವಾದ ಘಟನೆ ದುಗಲಡ್ಕ ಕೂಟೇಲಿಯಲ್ಲಿ ನಡೆದಿದೆ. ಕೂಟೇಲು ನಿವಾಸಿ ಪದ್ಮಾವತಿ ಎಂಬವರು ಕೆ.ಎಫ್.ಡಿ.ಸಿ. ರಬ್ಬರ್ ತೋಟದ ಟ್ಯಾಪರ್ ಆಗಿದ್ದು ಅವರು ಇಂದು ಮುಂಜಾನೆ ದುಗಲಡ್ಕ ಸೆಕ್ಷನಿನ ಕೂಟೇಲು ಪಿಲಿಕಜೆ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿರುವಾಗ ಪೊದೆಯಲ್ಲಿದ್ದ ಕಾಡುಹಂದಿ ಏಕಾಏಕಿ ದಾಳಿ...

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು . ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಮಾ.04 ರಿಂದ ಏ.03 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಕೆಳಗಿನ ಲಿಂಕನ್ನು ಬಳಸಿ ಅರ್ಜಿ ಸಲ್ಲಿಸಬೇಕು http://kea.kar.nic.in
error: Content is protected !!