Ad Widget

ಆಲೆಟ್ಟಿ : ಆಟೋ ರಿಕ್ಷಾ – ಕಾರು ಡಿಕ್ಕಿ, ಪ್ರಯಾಣಿಕರಿಗೆ ಗಾಯ!

ಆಟೋ ರಿಕ್ಷಾ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಪ್ರಯಾಣಿಕರೊಬ್ಬರಿಗೆ ಗಾಯವಾದ ಘಟನೆ ಆಲೆಟ್ಟಿಯ ಗುಂಡ್ಯ ಬಳಿ ನಡೆದಿದೆ. ಗುಂಡ್ಯ ಎಂಬಲ್ಲಿ ತಿರುವಿನಲ್ಲಿ ಸುಳ್ಯಕಡೆಯಿಂದ ಬಡ್ಡಡ್ಕ ಕಡೆಗೆ ಸಂಚರಿಸುತ್ತಿದ್ದ ಅಟೋ ರಿಕ್ಷಾಕ್ಕೆ ಬಡ್ಡಡ್ಕದಿಂದ ಸುಳ್ಯಕಡೆಗೆ ಬರುತ್ತಿದ್ದ ಆಲ್ಟೋ ಕಾರೊಂದು ವಿರುದ್ಧ ದಿಕ್ಕಿನಿಂದ ಬಂದು ಡಿಕ್ಕಿ ಹೊಡೆದು ರಿಕ್ಷಾದಲ್ಲಿದ್ದ ಮಹಿಳೆಯೋರ್ವರ ಕಾಲಿಗೆ ಹಾಗೂ ಚಾಲಕನ ಕೈಗೆ...

ಸುಳ್ಯ ಎನ್ನೆoಪಿಯುಸಿಯ ಸೃಜನ್ ಕೆ ಎಲ್  ಜೆ.ಇ.ಇ. ಮೈನ್ಸ್ ಪರೀಕ್ಷೆಯಲ್ಲಿ ಸಾಧನೆ

ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ದ್ವಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸೃಜನ್ ಕೆ ಎಲ್  ಜೆ.ಇ. ಇ. ಮೈನ್ಸ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದು ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಗಳಿಸಿಕೊಂಡಿದ್ದಾನೆ. ಮುಂದೆ ಏರೋ ಸ್ಪೇಸ್ ಇಂಜಿನಿಯರಿಂಗ್ ಓದುವ ಗುರಿ ಹೊಂದಿದ್ದಾನೆ. ಈತ ಭಾಗಮಂಡಲ ತಣ್ಣಿಮನಿಯಉದ್ಯಮಿಯಾಗಿರುವ ಲೋಕೇಶ್ ಕೆ ಎಸ್ ಮತ್ತು ಗೃಹಿಣಿ ಪುಷ್ಪ...
Ad Widget

ಫೆ.20ರಂದು ಸುಳ್ಯದಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ

20ರಂದು ಪೂರ್ವಾಹ್ನ 11 ಗಂಟೆಗೆ ಮೆಸ್ಕಾಂ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯು ಸುಳ್ಯ ಉಪವಿಭಾಗ ಕಚೇರಿಯಲ್ಲಿ ನಡೆಯಲಿದೆ.ಅಧೀಕ್ಷಕ ಇಂಜಿನಿಯರ್ ಕಾರ್ಯ ಮತ್ತು ಪಾಲನಾ ವೃತ್ತ ಕಚೇರಿ ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ ನಡೆಯಲಾಗುವುದು. ಗ್ರಾಹಕರು ತಮ್ಮ ಕುಂದುಕೊರತೆಗಳನ್ನು ಸುಳ್ಯ ಉಪವಿಭಾಗ ಕಚೇರಿಯಲ್ಲಿ ಅಥವಾ ದೂರವಾಣಿ ಕರೆಯ ಮೂಲಕ ಸಲ್ಲಿಸಬಹುದು...

ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಪೇರಡ್ಕ ದರ್ಗಾ ಮಸೀದಿ ಭೇಟಿ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಗಾಯ ಪೇರಡ್ಕ ದರ್ಗಾ ಮಸೀದಿ ಭೇಟಿ ನೀಡಿ 2 ನೇ ದಿನದ ತೆಕ್ಕಿಲ್ ಮೊಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮ ಉದ್ಘಾಟನೆ ಮಾಡಿ ಸಾಮರಸ್ಯದ ಬಗ್ಗೆ ಮಾತನಾಡಿ ಯಾವ ಊರಿನಲ್ಲಿ ಸೌಹಾರ್ದತೆ ಇದೆಯೋ ಅಲ್ಲಿ ಅಭಿವೃದ್ಧಿ ಆಗುತ್ತದೆ ಪೇರಡ್ಕ ಗೂನಡ್ಕ ಅಸೂಪಸಿನ ಗ್ರಾಮ ಅಭಿವೃದ್ಧಿ ಆಗಿದೆ...

ಸುಬ್ರಹ್ಮಣ್ಯ: ಕಾಂಗ್ರೆಸ್ ಪ್ರತಿಭಟನೆ ಹಾಸ್ಯಾಸ್ಪದ  

  ಸೋಮವಾರ ಸುಬ್ರಹ್ಮಣ್ಯದ ಗ್ರಾಮ ಪಂಚಾಯತ್ ಎದುರು ನಡೆದ ಸುಬ್ರಮಣ್ಯ ಗ್ರಾಮ ಪಂಚಾಯತ್ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಿರುದ್ಧ ಕಾಂಗ್ರೆಸ್ಸಿಗರು ನಡೆಸಿದ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದ್ದು ಹಾಸ್ಯಾಸ್ಪದವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದು ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅನುದಾನವನ್ನು ನೀಡದೆ ನಮ್ಮ ಗ್ರಾಮ ಪಂಚಾಯತ್ ಅಭಿವೃದ್ಧಿಯನ್ನು ಸಹಿಸಲಾಗದೆ ಈ ರೀತಿ ಪ್ರತಿಭಟನೆ ಮಾಡುವುದನ್ನು ಭಾರತೀಯ...

ಅರಂತೋಡು ಗ್ರಾ.ಪಂ.ಸಾಮಾನ್ಯ ಸಭೆ

ಅರಂತೋಡು ಗ್ರಾಮ ಪಂಚಾಯಿತಿನ ಆಡಳಿತ ಮಂಡಳಿಯ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಯವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸ್ವರಾಜ್ ಸಭಾಂಗಣದಲ್ಲಿ ಫೆ.14 ರಂದು ನಡೆಯಿತು.‌ ಸರಕಾರದ ಸುತ್ತೋಲೆಯನ್ನು ಪಿಡಿಓ ವಾಚಿಸಿದರು. ಕರ್ನಾಟಕ ಸರಕಾರದ ನಾಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಯವರು ಹೊರಡಿಸಿದ ಆದೇಶದಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಏಕ ನಿವೇಶನ ಅನುಮೋದನೆಯನ್ನು ನೀಡುವುದನ್ನು ತಡೆಹಿಡಿಯಲಾದ...
error: Content is protected !!