Ad Widget

ಸಂಪಾಜೆ ಗ್ರಾಮ ಪಂಚಾಯತ್ ಗ್ರಾಮ ಸಭೆ

ಸಂಪಾಜೆ ಗ್ರಾಮ ಪಂಚಾಯತ್ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಸರ್ವರನ್ನು ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಪ್ರಸ್ತಾವಿಕವಾಗಿ ಮಾತನಾಡಿ ಗ್ರಾಮ ಪಂಚಾಯತ್ ತೆರಿಗೆ ಕುಡಿಯುವ ನೀರು, ಲೈಸೆನ್ಸ್ ಸಮಯಕ್ಕೆ ಸರಿಯಾಗಿ ಪಾವತಿಮಾಡಿ ಸಹಕರಿಸುವಂತೆ ಹಾಗೂ ಗ್ರಾಮದ ಅಭಿವೃದಿಯಲ್ಲಿ...

ಸುಳ್ಯ ಪಿಗ್ಮಿ ಸಂಗ್ರಹಕನ ಸ್ಕೂಟಿಗೆ ಡಿಕ್ಕಿ ಗಂಭೀರ ಗಾಯ ,ಮಂಗಳೂರಿಗೆ ವರ್ಗಾವಣೆ.

ಸುಳ್ಯ ಕಟ್ಟೆಯ ಬಳಿಯಲ್ಲಿ ಇದೀಗ ರಸ್ತೆ ಅಪಘಾತ ಸಂಭವಿಸಿದ್ದು ಸುಳ್ಯದ ಪಿಗ್ಮಿ ಸಂಗ್ರಾಹಕ ಮತ್ತು ಡಿಜೆ ಫ್ರೆಂಡ್ಸ್ ಇದರ ಸದಸ್ಯ ದೀಕ್ಷಿತ್ ಎಂಬುವವರಿಗೆ ಗಂಭೀರ ತರನದ ಗಾಯಗಳಾಗಿವೆ ಎಂದು ಸ್ಥಳೀಯರ ಮಾಹಿತಿ ಪ್ರಕಾರ ಹೇಳಲಾಗುತ್ತಿದ್ದು ಸದ್ಯ ಅವರನ್ನು ಕೆವಿಜಿ ಆಸ್ಪತ್ರೆಗೆ ಕೊಂಡೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯೊಲಾಗಿದೆ ಎಂದು ತಿಳಿದು ಬಂದಿದೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Ad Widget

ಕೆವಿಜಿ ಪಾಲಿಟೆಕ್ನಿಕ್ : ಮತದಾನ ಜಾಗೃತಿ ಅಭಿಯಾನ. ದೇಶದ ಸಮಗ್ರತೆಗೆ ಮತದಾನ ಮಾಡುವುದು ಬಹಳ ಮುಖ್ಯ – ಡಾ. ಉಜ್ವಲ್ ಯು.ಜೆ.

ದೇಶದ ಸಮಗ್ರತೆಗೆ ಮತ್ತು ಭವಿಷ್ಯಕ್ಕೆ ಎಲ್ಲರೂ ಮಾತದಾನ ಮಾಡುವುದು ಬಹಳ ಮುಖ್ಯ ಎಂದು ಕೆ. ವಿ.ಜಿ.ಪಾಲಿಟೆಕ್ನಿಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಅಭಿಪ್ರಾಯಪಟ್ಟರು. ಅವರು ಕೆವಿಜಿ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ವತಿಯಿಂದ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನ ಮತ್ತು ತ್ರಿಲಿಂಗಿಗಳ ಹಕ್ಕು ರಕ್ಷಣಾ...

ಫೆ.24ರಂದು ಗುತ್ತಿಗಾರಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಮತ್ತು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು,ಗ್ರಾಮ ಪಂಚಾಯತ್ ಗುತ್ತಿಗಾರು, ಪ್ರಾಥಮಿಕ ಅರೋಗ್ಯ ಕೇಂದ್ರ ಗುತ್ತಿಗಾರು. ಅಮರ ಸೇನಾ ರಕ್ತದಾನಿಗಳ ತಂಡ ಗುತ್ತಿಗಾರು, ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು, ಲಯನ್ಸ್ ಕ್ಲಬ್ ಗುತ್ತಿಗಾರು. ಇವುಗಳ ಸಹಯೋಗದಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ...

ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ

ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ವಿಸ್ತರಿಸಲು ವಿಕೇಂದ್ರೀಕರಣದ ದ್ಯೇಯದೊಂದಿಗೆ ಹಾಗೂ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿಯನ್ನು ಮೂಡಿಸಲು ಹೋಬಳಿ ಘಟಕ ಸ್ಥಾಪಿಸುವ ಜೊತೆಗೆ ಗ್ರಾಮ ಮಟ್ಟದಲ್ಲೂ ಸಾಹಿತ್ಯ ಪರಿಷತ್ತಿನ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಶ್ರೀನಾಥ್ ಎಂ.ಪಿ. ಸುಳ್ಯ ಹಾಗೂ ಪಂಜ ಹೋಬಳಿ ಘಟಕದ ಪದಾಧಿಕಾರಿಗಳ...

ನಾಗಪಟ್ಟಣ ನಿರೀಕ್ಷಣಾ ಮಂದಿರದ ಪಕ್ಕ ಇರುವ ಮೋರಿ ಅಡಿಯಲ್ಲಿ ಮತ್ತೆ ಕಸದ ರಾಶಿ, ಇನ್ನೂ ಎಚ್ಚೆತ್ತುಕೊಳ್ಳದ ಗ್ರಾಮ ಆಡಳಿತ

ಆಲೆಟ್ಟಿ ಗ್ರಾಮ ಪಂಚಾಯತ್ ಒಂದಲ್ಲೊಂದು ಪ್ರಕರಣದಲ್ಲಿ ತನ್ನದೇ ಅದ ಇತಿಹಾಸವನ್ನು ಹೊಂದುತ್ತಿರುವ ವಿಚಾರ ಮತ್ತೆ ಮತ್ತೆ ಬೆಳಕಿಗೆ ಬರುತ್ತಿದೆ. ಆಲೆಟ್ಟಿ ಗ್ರಾಮ ಪಂಚಾಯತಿನ 4 ನೇ ವಾರ್ಡ್ ಇದಕ್ಕೆ ಉತ್ತಮ ಉದಾಹರಣೆ. ಇದೇ ವಾರ್ಡಿನಲ್ಲಿ ಕೆಲವು ತಿಂಗಳುಗಳ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಿ ಪರಿಸರ ಗಬ್ಬು ನಾರುತ್ತಿರುವ ಎರಡು ಪ್ರಕರಣಗಳು ಬಾರಿ ಸದ್ದು...

ಕಾಂತಮಂಗಲ :  ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನೋತ್ಸವ

ಪ್ರತಿಷ್ಠಾ ದಿನೋತ್ಸವ ದಿನವಾದ "ಶ್ರೀ ಸುಬ್ರಹ್ಮಣ್ಯ ದೇವಸ್ಥಾನ" ಕಾಂತಮಂಗಲ, ಅಜ್ಜಾವರದಲ್ಲಿ ಚೈತ್ರ ಯುವತಿ ಮಂಡಲ (ರಿ) ಅಜ್ಜಾವರ ಹಾಗೂ ಪ್ರತಾಪ ಯುವಕ ಮಂಡಲ (ರಿ) ಅಜ್ಜಾವರ ವತಿಯಿಂದ "ನೃತ್ಯ ಸಂಭ್ರಮ" ತುಳುನಾಡಿನ ವೈವಿದ್ಯಮಯ ಜಾನಪದ ನೃತ್ಯ ಕಲೆ ಒಂದೂವರೆ ಗಂಟೆ ಪ್ರದರ್ಶನ ನಡೆಯಿತು.

ಫೆ. 20ರಂದು ಸುಳ್ಯ ಸಂವಿಧಾನ ಜಾಗೃತಿ ಕಾರ್ಯಕ್ರಮ

ಸುಳ್ಯ ತಾಲೂಕಿನ ಹಲವೆಡೆ ಫೆ. 17 ರಿಂದ ಫೆ.21 ರವರೆಗೆ ಸಂವಿಧಾನ ಜಾಗೃತಿ ಜಾಥಾ ನಡೆಯುತ್ತಿದ್ದು, ಇದರ ಅಂಗವಾಗಿ ಫೆ. 20ರಂದು ಪೂರ್ವಾಹ್ನ 11 ಗಂಟೆಗೆ ಸುಳ್ಯದ ಕೆವಿಜಿ ಪುರಭವನದಲ್ಲಿ ವಿವಿಧ ಸರಕಾರಿ ಇಲಾಖೆಗಳ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಖ್ಯಾತ ನ್ಯಾಯವಾದಿ, ಚಿಂತಕ ಸುಧೀರ್...
error: Content is protected !!