Ad Widget

ಕಡಬ: ಶ್ರೀ ಮಹಾಲಕ್ಷ್ಮೀ ಸ್ಪೋರ್ಟ್ಸ್ ಆಂಡ್ ಸೈನ್ಸ್ ಶುಭಾರಂಭ

ಕಡಬ ಮುಖ್ಯ ರಸ್ತೆಯ ಹಳೇ ಸ್ಟೇಶನ್ ಹತ್ತಿರದ ಸುಶಾಂತಿ ಕಾಂಪ್ಲೆಕ್ಸ್ ನಲ್ಲಿ ಮಹೇಶ್ ಎಣ್ಮೂರು ಹಾಗೂ ಲಕ್ಷ್ಮೀಶ ಬೆಳ್ಳಾರೆ ಮಾಲಕತ್ವದಲ್ಲಿ ಶ್ರೀ ಮಹಾಲಕ್ಷ್ಮೀ ಸ್ಪೋರ್ಟ್ಸ್ ಆಂಡ್ ಸೈನ್ಸ್ ಮಳಿಗೆ ಫೆ.18ರಂದು ಶುಭಾರಂಭಗೊಂಡಿತು. ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಕಡಬದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣ ಶೆಟ್ಟಿ , ಪುತ್ತೂರು ವಲಯಾರಣ್ಯಾಧಿಕಾರಿ ಶ್ರೀ ಕಿರಣ್...

ಸುಬ್ರಹ್ಮಣ್ಯದ ಸ್ಥಾನಘಟ್ಟದ ಸುತ್ತಮುತ್ತ ಸ್ವಚ್ಛತಾ ಅಭಿಯಾನ

    ಸುಬ್ರಹ್ಮಣ್ಯದ ಕುಮಾರಧಾರ ನದಿಯ ಸ್ಥಾನಘಟ್ಟದ ಸುತ್ತಮುತ್ತ ಬಹಳಷ್ಟು ಕಸ ಕಡ್ಡಿಗಳು, ಪ್ಲಾಸ್ಟಿಕ್ ಬಾಟ್ಲಿಗಳು, ಚೀಲಗಳು, ಕೊಳಚೆಗಳು, ಇನ್ನಿತರ ತ್ಯಾಜ್ಯಗಳನ್ನ ಭಕ್ತಾದಿಗಳು ಎಸೆದಿದ್ದು ಇಡೀ ಪರಿಸರವೇ ಮಾಲಿನ್ಯಗೊಂಡಿತು. ಇದನ್ನು ಕಂಡ ರವಿ ಕಕ್ಕೆ ಪದವು ಸಮಾಜ ಸೇವಾ  ಟ್ರಸ್ಟ್ ನವರು ಡಾl ರವಿ ಕಕ್ಕೆ ಪದವು ಅವರ ನೇತೃತ್ವದಲ್ಲಿ ಇಂದು ರವಿವಾರ ಸ್ವಚ್ಛತಾ ಅಭಿಯಾನವನ್ನು ಕೈಗೊಂಡಿದ್ದರು....
Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ನೈವೇದ್ಯ ಕೊಠಡಿ ಲೋಕಾರ್ಪಣೆ, ಹಾಗೂ ಚಿನ್ನದ ಪ್ರಭಾವಳಿ ಸಮರ್ಪಣೆ

ಸುಬ್ರಹ್ಮಣ್ಯ ಫೆ.17: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಒಳಾಂಗಣದ ಅರಿ ಕೊಟ್ಟಿಲು (ನೈವೇದ್ಯ ಕೊಠಡಿ) ದುರಸ್ತಿಯಲ್ಲಿದ್ದು ,ದುರಸ್ತಿ ಕಾರ್ಯ ಈ ಹಿಂದೆ ಆರಂಭಗೊಂಡು ಇದೀಗ ಪೂರ್ಣಗೊಂಡಿದ್ದು 24ರಂದು ಶನಿವಾರ ದೇವಳದ ವಾರ್ಷಿಕ ಬ್ರಹ್ಮ ಕಳಸೋತ್ಸವದ ವಾರ್ಷಿಕ ದಿನದಂದು ಲೋಕಾರ್ಪಣೆಗೊಳ್ಳಲಿರುವುದಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ....

ಸುಸಜ್ಜಿತ ಪ್ರಯೋಗಶಾಲೆಯು ವಿದ್ಯಾರ್ಥಿಗಳ ಗಣಕಯಂತ್ರ ಜ್ಞಾನಾರ್ಜನೆಗೆ ಅಡಿಗಲ್ಲು: ಡಾ.ನಿಂಗಯ್ಯ

ಸುಬ್ರಹ್ಮಣ್ಯ: ಆಧುನಿಕ ಯುಗದಲ್ಲಿ ಗಣಕಯಂತ್ರದ ಜ್ಞಾನ ಅತ್ಯವಶ್ಯಕ. ಗಣಕಯಂತ್ರಗಳು ಶಾಲೆ ಕಾಲೇಜುಗಳಿಗೆ ಅತ್ಯವಶ್ಯಕ. ಅದೇ ರೀತಿ ವಿದ್ಯಾಸಂಸ್ಥೆಗಳಲ್ಲಿ ವ್ಯವಸ್ಥಿತ ಸುಸಜ್ಜಿತ ಪ್ರಯೋಗಶಾಲೆ ಇರುವುದು ಅತ್ಯವಶ್ಯಕ. ಉತ್ಕೃಷ್ಠ ಮಟ್ಟದ ಸುಸಜ್ಜಿತ ಪ್ರಯೋಗಶಾಲೆಗಳು ಗಣಕಯಂತ್ರದ ಜ್ಞಾನಾರ್ಜನೆಗೆ ಅಡಿಕಲ್ಲಾಗಿವೆ. ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಜಿಲ್ಲೆಯಲ್ಲೇ ಹೆಸರು ಪಡೆದ ಶ್ರೇಷ್ಠ ಮಟ್ಟದ ಗಣಕಯಂತ್ರ ಮತ್ತು ವಿಜ್ಞಾನ ಪ್ರಯೋಗಶಾಲೆ ಇದೆ ಅನ್ನುವುದು ಗ್ರಾಮೀಣ ಭಾಗದ...

ಶ್ರೀ ರಾಮ ನವೋದಯ ಸ್ವಸಹಾಯ ಸಂಘದ 12 ನೇ ವರ್ಷದ ವಾರ್ಷಿಕ ಮಹಾಸಭೆ

ಶ್ರೀ ರಾಮ ನವೋದಯ ಸ್ವಸಹಾಯ ಸಂಘದ 12 ನೇ ವರ್ಷದ ವಾರ್ಷಿಕ ಮಹಾಸಭೆಯು ಫೆ. 18 ರಂದು ಮೋಹನ ಎನ್ ಇವರ ಅಧ್ಯಕ್ಷತೆಯಲ್ಲಿ  ನಡೆಯಿತು. ಕಾರ್ಯದರ್ಶಿ ಜಯರಾಮ ಇವರು ವಾರ್ಷಿಕ ಲೆಕ್ಕಚಾರ ಮತ್ತು ವರದಿ ಮಂಡಿಸಿದರು. ನವೋದಯ ಸ್ವಸಹಾಯ ಸಂಘದ ಪ್ರೇರಕರಾದ ಪುಷ್ಪವತಿ ಭಾಗವಹಿಸಿದ್ದರು.  ನೂತನ ಅಧ್ಯಕ್ಷರಾಗಿ ವಿಠಲ ಆರ್ ಕಾರ್ಯದರ್ಶಿಯಾಗಿ ಧರ್ಮ ಪ್ರಸಾದ ಪಿ....

ಸುಬ್ರಹ್ಮಣ್ಯ ಗ್ರಾ. ಪಂ. ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ        

    ಸುಬ್ರಮಣ್ಯ : ಕರ್ನಾಟಕದ ಸಾಂಸ್ಕೃತಿಕ ನಾಯಕ, ಜಗಜ್ಯೋತಿ, ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಚೇರಿಯ ಆವರಣದಲ್ಲಿ ಫೆ,17 ಶನಿವಾರ ಅನಾವರಣಗೊಳಿಸಲಾಯಿತು.           ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೇ ಸುಜಾತ ಕಲ್ಲಾಜೆ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಅವರು ಮಾತನಾಡಿ...

ಸುಳ್ಯ : ಬೈಕ್ ಗಳ ಮುಖಾಮುಖಿ ಢಿಕ್ಕಿ – ಸವಾರರಿಗೆ ಗಾಯ

ಸುಳ್ಯದ ಜೂನಿಯರ್ ಕಾಲೇಜು ರಸ್ತೆಯಲ್ಲಿ ಬೈಕ್ ಗಳೆರಡು ಮುಖಾಮುಖಿ ಢಿಕ್ಕಿಯಾದ ಘಟನೆ ನಡೆದಿದ್ದು, ಸವಾರರು ಗಾಯಗೊಂಡಿದ್ದಾರೆಂದ ತಿಳಿದುಬಂದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ಉಬರಡ್ಕ ಪಟಾಕಿ ಸಿಡಿದು ವ್ಯಕ್ತಿಗೆ ಗಾಯ ಆಸ್ಪತ್ರೆಗೆ ದಾಖಲು.

ಉಬರಡ್ಕ ಗ್ರಾಮದ ಕೊಡಿಯಡ್ಕ ಎಂಬಲ್ಲಿ ಪಟಾಕಿ ಸಿಡಿದು ಕೈ ಮತ್ತು ಕಾಲುಗಳಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾದ ವಿಚಾರ ಇದೀಗ ವರದಿಯಾಗಿದೆ . ಉಬರಡ್ಕದ ಕೊಡಿಯಡ್ಕ ಎಂಬಲ್ಲಿ ನಿನ್ನೆ ಮತ್ತು ಇಂದು ಪೂಜೆ ಇರುವ ಹಿನ್ನಲೆಯಲ್ಲಿ ನಿನ್ನೆ ಭಾನುಪ್ರಕಾಶ್ ಎಂಬುವವರು ಪಟಾಕಿ ಸಿಡಿಸುತ್ತಿದ್ದ ವೇಳೆ ಇವರ ಕೈಯಿಂದ ಪಟಾಕಿ ಜಾರಿ ಬಿದ್ದು ಪಕ್ಕದಲ್ಲೆ ಸಿಡಿದ ಪರಿಣಾಮ ಕೈ...
error: Content is protected !!