- Saturday
- April 19th, 2025

https://youtu.be/gODibKBQ4nE?si=2va5Uw8cTugQKhZb ಅಯೋಧ್ಯೆಯ ಪುಣ್ಯಭೂಮಿಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆಯನ್ನು ಕೊಲ್ಲಮೊಗ್ರ ಗ್ರಾಮದ ಮನೆ ಮನೆಗಳಿಗೆ ಭಜನೆಯ ಜತೆಗೆ ತಲುಪಿಸಿದರು. ಮಂತ್ರಾಕ್ಷತೆಯನ್ನು ಗ್ರಾಮದ ಪ್ರತಿ ಮನೆಗೆ ತಲುಪಿಸಲು ಹಲವಾರು ಹಿಂದೂ ಭಾಂಧವರು ಶ್ರೀರಾಮನ ಸೇವೆಯಲ್ಲಿ ಪಾಲ್ಗೊಂಡರು.

ಸುಳ್ಯದಲ್ಲಿಂದ ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಈ ಅಕಾಲಿಕ ಮಳೆ ಸುಳ್ಯ ಜಾತ್ರೆಗೆ ಆಗಮಿಸಿದ್ದ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕಿನಾದ್ಯಂತ ಮಳೆ ಸುರಿದಿದ್ದು ಅಡಿಕೆ ಕೃಷಿಕರ ಪಾಡು ಹೇಳತೀರದಾಗಿದೆ. ಕಡಿಮೆ ಫಸಲಿನಿಂದಾಗಿ ಕಂಗೆಟ್ಟಿದ್ದ ರೈತ ಇದ್ದ ಅಡಿಕೆಯನ್ನು ಒಣಗಿಸಲು ಹರಸಾಹಸ ಪಡುವಂತಾಗಿದೆ ಇದೀಗ ಅಲ್ಲದೆ ಸುಳ್ಯದಲ್ಲಿ ಭಾರಿ ಪ್ರಸಿದ್ದಿ ಪಡೆದ ಸುಳ್ಯ ಚೆನ್ನಕೇಶವ ದೇವರ...

ಪತಂಜಲಿ ಯೋಗ ಕೇಂದ್ರ ಬೆಂಗಳೂರು ಇವರು ಬೆಂಗಳೂರಿನ ಲಗ್ಗೆರೆ ಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಗುತ್ತಿಗಾರಿನ ಅಮರ ಯೋಗ ತರಬೇತಿ ಕೇಂದ್ರದ ವಿದ್ಯಾರ್ಥಿಗಳದ ಖುಷಿ ಕೊಪ್ಪತಡ್ಕ, ಶೇಯಿನಿ ಕೊರಂಬಡ್ಕ, ಜಿಶಾ ಕೊರಂಬಡ್ಕ, ಹವೀಕ್ಷ ಹರಿಹರ, ಮಣಿಪ್ರಕಾಶ್ ಕಡೋಡಿ,ರೇಷ್ಮಾ ಮಾಡಬಾಕಿಲು ಭಾಗವಹಿಸಿ ಪ್ರೋತ್ಸಾಹಕ ಬಹುಮಾನ ಪಡೆದಿದ್ದು ಇವರನ್ನು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್...

ಸುಳ್ಯ ಸಮೀಪದ ಅರಂಬೂರು ಎಂಬಲ್ಲಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅರಂಬೂರಿನಲ್ಲಿ ಅಪಘಾತ ನಡೆದ ಸಂದರ್ಭದಲ್ಲಿ ಪೆರಾಜೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸ್ವೀಪ್ ಬಿಲ್ಡರ್ಸ್ ನ ತಾಜುದ್ದೀನ್ ಜಟ್ಟಿಪಳ್ಳ ರವರು ಮತ್ತು ಜಸೀರ್ ರವರು ಗಾಯಗೊಂಡವರನ್ನು ತಮ್ಮ ಪಿಕಪ್ ವಾಹನದಲ್ಲಿ ನಲ್ಲಿ ಸುಳ್ಯ...

ಇತಿಹಾಸ ಪ್ರಸಿದ್ಧ ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವವು ಜ.3 ರಿಂದ ಪ್ರಾರಂಭಗೊಂಡಿದ್ದು ಜ.13 ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಆರೋತ್ ಕೆ.ಯು.ಪದ್ಮನಾಭ ತಂತ್ರಿಗಳವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಡಿ.28 ರಂದು ಮುಹೂರ್ತದ ಗೊನೆ ಕಡಿಯಲಾಯಿತು. ಜ.03 ರಂದು ಉಗ್ರಾಣ ತುಂಬಿಸಲಾಯಿತು. ಸಂಜೆ ಪನ್ನೆಬೀಡು ನಾಲ್ಕು ದೈವಗಳ ಚಾವಡಿಯಿಂದ ಬಲ್ಲಾಳರ ಪಯ್ಯೋಳಿ ತರಲಾಯಿತು. ರಾತ್ರಿ...

ಪೆರುವಾಜೆ: ಪಂಜ ಸೀಮೆಯ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಪ್ರಯುಕ್ತ ಜ.16 ರಂದು ಹಸುರು ಹೊರೆಕಾಣಿಕೆ ಮೆರವಣಿಗೆ ವಿಶಿಷ್ಟ ರೀತಿಯಲ್ಲಿ ನೆರವೇರಲಿದೆ. ಜ.16 ರಂದು ಸಂಜೆ 3 ಗಂಟೆಗೆ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಬಳಿಯಿಂದ ಮೆರವಣಿಗೆಗೆ ಚಾಲನೆ ಸಿಗಲಿದೆ. ಸುಮಂಗಲಿಯರಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ...

ಮಡಪ್ಪಾಡಿ ಗ್ರಾಮ ಪಂಚಾಯತ್ ಹಾಗೂ ಕೆನರಾ ಬ್ಯಾಂಕ್ ಗುತ್ತಿಗಾರು ಇದರ ಜಂಟಿ ಆಶ್ರಯದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಜ. 07ರಂದು ಮಡಪ್ಪಾಡಿ ಯುವಕ ಮಂಡಲ ಸಭಾ ಭವನದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುಜಾತ ಹಾಡಿಕಲ್ಲುರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಂ ವಿ ವಂದಿತ್ ಮಡಪ್ಪಾಡಿ, ಚರಿಶ್ಯ ಗಟ್ಟಿಗಾರು, ಪ್ರಮೀಳ ಬಳ್ಳಡ್ಕ ಇವರನ್ನು...

ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆ ಗೂನಡ್ಕ ಇದರ 18 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಬ್ಲೋಸಮ್ 2024 ಸಮಾರಂಭವು ಜ.7 ರಂದು ತೆಕ್ಕಿಲ್ ಶಾಲಾ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪಾರ್ಮೇಡ್ ಗ್ರೂಪ್ ನ ಹಿರಿಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಡಾ| ಉಮ್ಮರ್ ಬೀಜದ ಕಟ್ಟೆ ಮಾತನಾಡಿ ಮಕ್ಕಳು ವಿದ್ಯಾಭಾಸದ ಕಡೆ ಗಮನ ಹರಿಸಿ...

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ನಡೆಯುವ ಮಾಸಿಕ ಸ್ವಚ್ಛತಾ ಕಾರ್ಯಕ್ರಮವು ದೇರಾಜೆ ಗೆಳೆಯರ ಬಳಗ (ರಿ)ಐವರ್ನಾಡಿನ ಸಹಯೋಗದೊಂದಿಗೆ ಐವರ್ನಾಡು ಗ್ರಾಮ ಪಂಚಾಯತ್ ವಠಾರ ಹಾಗೂ ಮುಖ್ಯ ರಸ್ತೆ ಯ ಬದಿಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ವಠಾರ ದಿಂದ ಬಾಂಜಿಕೋಡಿವರೆಗೆ ನಡೆಯಿತು. ಸ್ವಚ್ಛತಾ ಕಾರ್ಯಕ್ರಮದ ನಂತರ ದೇರಾಜೆ ಗೆಳೆಯರ ಬಳಗದ ವತಿಯಿಂದ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ...

All posts loaded
No more posts