Ad Widget

ಸುಳ್ಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಸ್ವಾಮಿ ವಿವೇಕಾನಂದರ 162ನೇ ಜಯಂತಿ ಆಚರಣೆಯು ಜ.12ರಂದು ಸುಳ್ಯದ ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣ ಸಮಿತಿ ಇದರ ಆಶ್ರಯದಲ್ಲಿ ಸುಳ್ಯದ ಅಂಬೇಟಡ್ಕದಲ್ಲಿ ನಡೆಯಿತು. ಸುಳ್ಯದ ಹೆಚ್.ಇ.ಎಫ್. ಅಧ್ಯಕ್ಷ ಚಿದಾನಂದ ವಿದ್ಯಾನಗರ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಹಾರಾರ್ಪಣೆಗೈದರು. ಹೆಚ್.ಇ.ಎಫ್. ಸ್ಥಾಪಕಾಧ್ಯಕ್ಷ ಕೇಶವ ನಾಯಕ್, ನ.ಪಂ. ಸದಸ್ಯರುಗಳಾದ ಶೀಲಾ ಕುರುಂಜಿ, ಕಿಶೋರಿ ಶೇಟ್ ಮುಖ್ಯ ಅತಿಥಿಗಳಾಗಿದ್ದರು. ಪದ್ಮಶ್ರೀ ಪುರಸ್ಕೃತ...

ಸುಳ್ಯ : ಎಬಿವಿಪಿ ನಗರ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ಸ್ವಾಮಿ ವಿವೇಕಾನಂದರ 162ನೇ ಜಯಂತಿಯ‌ ಅಂಗವಾಗಿ ಎಬಿವಿಪಿ ಸುಳ್ಯ ನಗರ ಘಟಕದ ವತಿಯಿಂದ ಅಂಬಟೆಡ್ಕ ದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಕೆವಿಜಿ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯಶೋಧ ರಾಮಚಂದ್ರ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ನಗರ ಎಬಿವಿಪಿ ಉಪಾಧ್ಯಕ್ಷರಾದ ಪದ್ಮಕುಮಾರ್ ಗುಂಡಡ್ಕ, ತಾಲೂಕು ಸಹ ಸಂಚಾಲಕರಾದ ಪ್ರಕಾಶ್ ಹಾಗೂ...
Ad Widget

ಮೇನಾಲ ಶ್ರೀ ವಯನಾಟ್ಟ್ ಕುಲವನ್ ದೈವಂಕಟ್ಟು ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ.

ಮೇನಾಲ ಶ್ರೀ ವಯನಾಟ್ಟ್ ಕುಲವನ್ ದೈವಕಟ್ಟು ಮಹೋತ್ಸವ ಮಾರ್ಚ್ ೫,೬೭ ರಂದು ಜರುಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು 12-01-2024 ರಂದು ಅಧ್ಯಕ್ಷರಾದ ಗುಡ್ಡಪ್ಪ ರೈರವರ ಅಧ್ಯಕ್ಷತೆಯಲ್ಲಿ ಜವರೇಗೌಡ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದರು ಬಳಿಕ ಗುಡ್ಡಪ್ಪ ರೈ ಮೇನಾಲ ಅಧ್ಯಕ್ಷತೆಯಲ್ಲಿ ಸಭೆಯು ಜರುಗಿತು ಈ ಸಂದರ್ಭದಲ್ಲಿ ರವೀಂದ್ರನಾಥ ರೈ ಮೇನಾಲ , ಜಗನ್ನಾಥ...

ಸುಳ್ಯ ಜಾತ್ರೆ ಸಂಪನ್ನ – ಚೆನ್ನಕೇಶವ ದೇವರ ರಥೋತ್ಸವ – ಪ್ರಪ್ರಥಮ ಬಾರಿಗೆ ಅಮರ ಸುದ್ದಿಯಲ್ಲಿ ನೇರಪ್ರಸಾರ

ಸುಳ್ಯ ಜಾತ್ರೋತ್ಸವ ವಿಜೃಂಭಣೆಯಿಂದ ಸಾಂಗವಾಗಿ ನೆರವೇರಿದ್ದು, ರಾತ್ರಿ 2ಗಂಟೆ ವೇಳೆಗೆ ಶ್ರೀ ಚೆನ್ನಕೇಶವ ದೇವರ ರಥೋತ್ಸವದೊಂದಿಗೆ ಸುಳ್ಯ ಜಾತ್ರೆ ಸಂಪನ್ನಗೊಂಡಿತು. ಸಾವಿರಾರು ಭಕ್ತಾಧಿಗಳು ವೈಭವ ಶ್ರೀ ದೇವರ ಜಾತ್ರೋತ್ಸವಕ್ಕೆ ಸಾಕ್ಷಿಯಾದರು. ನೇರ ಪ್ರಸಾರ : ಪ್ರಪ್ರಥಮ ಬಾರಿಗೆ ಅಮರ ಸುದ್ದಿ ಯೂಟ್ಯೂಬ್ ವಾಹಿನಿಯಲ್ಲಿ ಜಾತ್ರೋತ್ಸವದ ನೇರಪ್ರಸಾರ ಮಾಡಿದ್ದು ನಿರೀಕ್ಷೆಗೂ ಮೀರಿ ಜನ ಪ್ರೋತ್ಸಾಹಿಸಿದ್ದಾರೆ. ಲೈವ್ ವೀಕ್ಷಿಸಲು...

ಕುಕ್ಕೆ ಸುಬ್ರಹ್ಮಣ್ಯ : ಜ.12 ರಿಂದ 16 ರವರೆಗೆ ಕಿರುಷಷ್ಠಿ ಮಹೋತ್ಸವ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.12 ರಿಂದ ಜ.16 ರವರೆಗೆ ಕಿರುಷಷ್ಠಿ ಮಹೋತ್ಸವವು ನಡೆಯಲಿದ್ದು, ಧಾರ್ಮಿಕ ಉಪನ್ಯಾಸ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜ.12 ರಂದು ಸಂಜೆ 5:00 ಗಂಟೆಗೆ ಶ್ರೀ ಕಾರ್ತಿಕ ವೇದಿಕೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ...

ಸುಳ್ಯ: ಬೈಕ್ ಮತ್ತು ಸ್ವಿಫ್ಟ್ ಕಾರು ಮಧ್ಯೆ ಅಪಘಾತ, ಬೈಕ್ ಸವಾರ ಗಂಭೀರ !

ಬೈಕ್ ಹಾಗೂ ಕಾರು ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಗಾಯಗೊಂಡಿರುವ ಘಟನೆ ಸುಳ್ಯದಿಂದ ವರದಿಯಾಗಿದೆ. ಬೆಳ್ಳಾರೆ ಸಮೀಪದ ಕಾವಿನಮೂಲೆಯಲ್ಲಿ ಈ ಅಪಘಾತ ಸಂಭವಿಸಿದ್ದು ಗಾಯಾಳುವನ್ನು ಸುಳ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಬೆಳ್ಳಾರೆ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಕಾರು ಹಾಗೂ ಸುಳ್ಯದಿಂದ ಬೆಳ್ಳಾರೆ ಕಡೆಗೆ ಹೋಗುತ್ತಿದ್ದ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಈ...

ಡಾ. ರೇಣುಕಾಪ್ರಸಾದ್ ಹಾಗೂ ತಂಡದಿಂದ ಡಿ.ಕೆ ಶಿವಕುಮಾರ್ ಬೇಟಿ

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನಿರ್ದೇಶಕ ಡಾ. ರೇಣುಕಾಪ್ರಸಾದ್ ಕೆ.ವಿ.ಯವರಿಗೆ ಸುಪ್ರೀಂ ಕೋರ್ಟ್ ನಿಂದ ಜಾಮೀನು ದೊರೆತು ಜೈಲಿನಿಂದ ಹೊರಬರುತ್ತಿದ್ದಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಕೆ.ವಿ.ಜಿ. ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಪ್ರೊ| ಎ.ಎಸ್.ರಾಮಕೃಷ್ಣ ರ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇವರ ಜೊತೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ...

ಅಡ್ಕಾರ್ ಬ್ಯಾನರ್ ಹಾನಿ ಪ್ರಕರಣ ದೂರು ದಾಖಲು; ಕಲ್ಕುಡ ದೈವದ ಮುಂದೆ ಪ್ರಾರ್ಥನೆ

ಸುಳ್ಯದ ಅಡ್ಕಾರ್ ಸುಬ್ರಹ್ಮಣ್ಯ ದೇವಾಲಯದ ದ್ವಾರದ ಬಳಿಯಲ್ಲಿ ಅಳವಡಿಸಾದ ಬ್ಯಾನರ್ ಹಾನಿಯಾದ ಕುರಿತಂತೆ ಇದೀಗ ವಿಶ್ವ ಹಿಂದು ಪರಿಷತ್ ಮತ್ತು ಅಡ್ಕಾರ್ ಯವಕರ ತಂಡವು ಠಾಣೆಗೆ ಆಗಮಿಸಿ ಪ್ರಕರಣ ದಾಖಲಿಸಿದರು. ಅಲ್ಲದೇ ಸುಳ್ಯದ ಗಾಂಧಿನಗರದಲ್ಲಿ ನೆಲೆಸಿರು ಕಲ್ಕುಡ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ನವೀನ್ ಎಲಿಮಲೆ , ಪ್ರಕಾಶ್ ಯಾದವ್ , ಅಶೋಕ್...

ಕಲ್ಲುಗುಂಡಿ : ಅಕ್ಕಿ ಗೋಣಿಯಲ್ಲಿ ಭಸ್ಮದ ಕಟ್ಟು ಪತ್ತೆ

ಕಲ್ಲುಗುಂಡಿಯಿಂದ ಗ್ರಾಹಕರೊಬ್ಬರು ಖರೀದಿಸಿದ ಸಚಿನ್ ಟ್ರೇಡಿಂಗ್ (ಜಯ) ಕಂಪೆನಿಯ ಕುಚ್ಚುಲು ಅಕ್ಕಿಯಲ್ಲಿ ಭಸ್ಮದ ಕಟ್ಟು ಕಂಡುಬಂದಿರುವ ಘಟನೆ ಜ.10 ರಂದು ನಡೆದಿದೆ. ಕಲ್ಲುಗುಂಡಿಯ ಅಂಗಡಿಯೊಂದರಿಂದ ಚೆಂಬು ಗ್ರಾಮದ ಶಿವಪ್ರಕಾಶ್ ಎಂಬವರು ಖರೀದಿಸಿದ 25 ಕೆ.ಜಿ. ಅಕ್ಕಿಗೋಣಿಯಲ್ಲಿ ಬಿಳಿ ಬಣ್ಣದ ಭಸ್ಮ ಹಾಗೂ ಅಕ್ಕಿ ಕಂಡುಬಂದಿದೆ. ಊಟ ಮಾಡುವ ಅಕ್ಕಿಯಲ್ಲಿಯೇ ಹೀಗಾದರೇ ಬೇರೆ ಆಹಾರಗಳ ಸುರಕ್ಷತೆಗೆ ಹೇಗೆ....

ಅಡ್ಕಾರು : ಬ್ಯಾನರ್ ಗೆ ಹಾನಿ

ಸುಳ್ಯದ ಬಳಿಕ ಅಡ್ಕಾರ್ ನಲ್ಲಿ ರಾಮ ಮಂದಿರ ಉದ್ಘಾಟನ ಶುಭ ಕೋರಿದ ಬ್ಯಾನರ್ ಮಧ್ಯಭಾಗದಲ್ಲಿ ಹರಿದಿರುವುದು ಬೆಳಕಿಗೆ ಬಂದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Loading posts...

All posts loaded

No more posts

error: Content is protected !!