- Tuesday
- November 26th, 2024
ಹೃದಯ ಎನ್ನುವುದು ನಮ್ಮ ದೇಹದ ಅತೀ ಪ್ರಾಮುಖ್ಯವಾದ ಅಂಗವಾಗಿದ್ದು, ದಿನದ 24 ಗಂಟೆಯೂ ನಿರಂತರವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಇಂತಹಾ ಹೃದಯಕ್ಕೆ ಆಫಾತವಾಗಿ ಹೃದಯದ ಸ್ನಾಯುಗಳಿಗೆ ರಕ್ತದ ಪೂರೈಕೆ ನಿಂತು ಹಾನಿಯಾದಾಗ, ರಕ್ತದಲ್ಲಿ ಕೆಲವೊಂದು ಕಿಣ್ವಗಳು ಏರಿಕೆಯಾಗುತ್ತದೆ. ಹೃದಯದ ಘಾಸಿಗೊಂಡ ಸ್ನಾಯುಗಳಿಂದ ಬಿಡುಗಡೆಯಿಂದ ಈ ಕಿಣ್ವಗಳನ್ನು ಕಾರ್ಡಿಯಾಕ್ ಮಾರ್ಕರ್ ಅಥವಾ ಹೃದಯಾಘಾತ ಸೂಚಕ ಕಿಣ್ವಗಳು ಎಂದೂ...
https://youtu.be/mZnI-f0keyc?si=ywpFwxC-aFxy-lHd ಪೆರುವಾಜೆ : ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವಕ್ಕೆ ಜ.15 ರಂದು ಚಾಲನೆ ದೊರೆಯಿತು. ಬೆಳಗ್ಗೆ ನೂತನ ಬ್ರಹ್ಮರಥವನ್ನು ರಥ ಶಿಲ್ಪಿಗಳು ಶ್ರೀ ಕ್ಷೇತ್ರಕ್ಕೆ ಹಸ್ತಾಂತರಿಸಿದರು.ರಥ ಶಿಲ್ಪಿಗಳ ಪರವಾಗಿ ಶಿವಕುಮಾರ್ ಶರ್ಮ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ರಥ ಶಿಲ್ಪಿ ಹರೀಶ್ ಆಚಾರ್ಯ...
ಮಡಪ್ಪಾಡಿ ಹಾಡಿಕಲ್ಲು ಕೊಲ್ಲಮೊಗ್ರ ರಸ್ತೆಯ ನೂಜಾಲು ಎಂಬಲ್ಲಿ 2ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಉದ್ಘಾಟನೆ ಮಾನ್ಯ ಶಾಸಕರಾದ ಭಾಗೀರಥಿ ಮುರುಳ್ಯ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅತೀ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲು ಕಾರಣಕರ್ತರಾದ ಮಡಪ್ಪಾಡಿಯ ಜನತೆಗೆ ಅಭಿನಂದಿಸುವುದರ ಜೊತೆಗೆ ವಿರೋಧ ಪಕ್ಷದಲ್ಲಿದ್ದರೂ ಕೂಡ ಹೆಚ್ಚಿನ ಅನುಧಾನಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ...
17 ಸ್ಥಾನಕ್ಕೂ ನಿರ್ದೇಶಕರ ಅವಿರೋಧ ಆಯ್ಕೆ 25 ರಂದು ಅಧ್ಯಕ್ಷ ಚುನಾವಣೆ ರಾಜೀವಿ ಆರ್ ರೈ ಆಯ್ಕೆ ಬಹುತೇಕ ಖಚಿತ. ಸುಳ್ಯ ತಾಲೂಕು ಮಹಿಳೆಯರ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಯ 17 ಸ್ಥಾನಗಳಿಗೂ ನಿರ್ದೇಶಕರ ಆಯ್ಕೆಯು ಕಾಂಗ್ರೆಸ್ ಬಿಜೆಪಿ ನಾಯಕರ ಹೊಂದಾಣಿಕೆಯಿಂದ ಅವಿರೋಧ ಆಯ್ಕೆ ನಡೆದಿದೆ. ಆಡಳಿತ ಮಂಡಳಿಗೆ ಜ. 21ರಂದು ಚುನಾವಣೆ ನಡೆಯಬೇಕಿತ್ತು....
ಇತಿಹಾಸ ಪ್ರಸಿದ್ಧ ಹಝ್ರತ್ ವಲಿಯುಲ್ಲಾಹಿ ಬೆಳ್ಳಾರೆ ಮಖಾಂ ಉರೂಸ್ ಸಮಾರಂಭ ಜ.21ರಿಂದ 27ರ ತನಕ ನಡೆಯಲಿದೆ. ಉರೂಸ್ ಸಮಾರಂಭದಲ್ಲಿ ಸುಪ್ರಸಿದ್ಧ ವಿದ್ವಾಂಸರು, ಸಾದಾತುಗಳು, ಸೂಫಿವರ್ಯರು ಭಾಗವಹಿಸಲಿದ್ದಾರೆ ಎಂದು ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಆಡಳಿತ ಸಮಿತಿ ಹಾಗೂ ಉರೂಸ್ ಸ್ವಾಗತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆಸ ಸುದ್ದಿಗೋಷ್ಠಿಯಲ್ಲಿ ಉರೂಸ್ ಸ್ವಾಗತ ಸಮಿತಿ...
ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಅಡ್ಪಂಗಾಯ ಎಂಬಲ್ಲಿನ ಬಯಂಬು ಮೂಲದ ಮಹಮ್ಮದ್ ಹಾಜಿರವರ ಮನೆಯ ಗೇಟು ಹಾರಿ ವ್ಯಕ್ತಿಯೋರ್ವ ಮನೆಗೆ ಹೋದ ಘಟನೆ ವರದಿಯಾಗಿದೆ. ತಮ್ಮ ಮನೆಯ ಮಗಳನ್ನು ಮನೆಯರು ಈ ಹಿಂದೆ ಇರ್ಷಾದ್ ಎಂಬ ಯುವಕನಿಗೆ ಗೊತ್ತು ಪಡಿಸಿದ್ದರು ಎಂದು ಹೇಳಲಾಗುತ್ತಿದ್ದು ಇದೇ ಯುವಕನನ್ನ ನಂತರದ ಬೆಳವಣಿಗೆಯಲ್ಲಿ ಈ ಸಂಭಂದ ಬೇಡವೆಂದು ತೀರ್ಮಾನಿಸಿದ್ದರು ಎಂದು...
ಅಜ್ಜಾವರ ಗ್ರಾಮದ ಮೇದಿನಡ್ಕದಲ್ಲಿ ಸಂಭ್ರಮದ ಪೊಂಗಲ್ ಆಚರಣೆ ವಿಜೃಂಭಣೆಯಿಂದ ನಡೆಯಿತು, ಡಿಸೆಂಬರ್ 17 ರ ಧನು ಮಾಸ 1ರಿಂದ ಶ್ರೀ ರಾಮ ದೇವರ ಭಜನೆ ನಿರಂತರ ಒಂದು ತಿಂಗಳ ಕಾಲ ಸ್ಥಳೀಯ ಭಕ್ತಾದಿಗಳ ವ್ರತಾಚಾರಣೆಯೊಂದಿಗೆ ನಡೆದು ಮಕರ ಸಂಕ್ರಾಂತಿಯಂದು ಕೊನೆಗೊಂಡಿತು,ಜ 15 ರಂದು ವಿಜೃಂಭಣೆಯ ಪೊಂಗಲ್ ಆಚರಣೆ ಪ್ರಯುಕ್ತ ದೇವರ ಪಲ್ಲಕ್ಕಿ ಉತ್ಸವ,ಮನೆ ಭಜನಾ ಸಂಕೀರ್ತನೆ...
ಕೊಲ್ಲಮೊಗ್ರ ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.16 ರಿಂದ ಜ.19 ರವರೆಗೆ ವಾರ್ಷಿಕ ಮಹೋತ್ಸವ ನಡೆಯಲಿದ್ದು, ಜ.16 ಮಂಗಳವಾರದಂದು ಬೆಳಿಗ್ಗೆ 8:00 ಗಂಟೆಯಿಂದ ಅಶ್ವತ್ಥ ಪ್ರತಿಷ್ಠಾಂಗ ಪೂರ್ವಭಾವಿ ವೈದಿಕ ಕಾರ್ಯಕ್ರಮಗಳು ಮತ್ತು ನಾಗನಲ್ಲಿ ಅನುಜ್ಞಾ ಕಲಶ ಪ್ರಾರ್ಥನೆ, ಮದ್ಯಾಹ್ನ 12:00 ಗಂಟೆಯಿಂದ ಹಸಿರುವಾಣಿ ಸಮರ್ಪಣೆ, ಸಂಜೆ 6:00 ಗಂಟೆಯಿಂದ ಪ್ರಸಾದ ಶುದ್ಧಿ, ರಾಕ್ಷೋಘ್ನ...
ಕಿರಣ್ ಎಸ್ ಉಳುವಾರು ಸಣ್ಣಮನೆ ಅರಂತೋಡು ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಮೋಹನ ಕಿನಾಲ ಅಡ್ತಲೆ, ಉಪಾಧ್ಯಕ್ಷರಾಗಿ ಕಿರಣ ಎಸ್. ಉಳುವಾರು ಸಣ್ಣಮನೆ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಚಂದ್ರಪ್ರಕಾಶ್ ಪಿ.ಎಂ., ಮಾಲಿನಿ ಯು.ವಿ., ಕೆ.ಸಿ.ನಾರಾಯಣ, ಗೀತಾ ಸರಸ್ವತಿ, ಜನಾರ್ದನ ಸಿ.,ಗಂಗಾಧರ ಯು.ಡಿ., ಭಾರತಿ ಯು., ಪ್ರಮೀಳಾ ಪಿ., ಜಾನಕಿ ಆಯ್ಕೆಯಾಗಿದ್ದಾರೆ.
ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹರಿಣಾಕ್ಷಿ ಶಿವಕುಮಾರ ವಲ್ಪಾರೆ ನಡುಗಲ್ಲು ಇವರು 3000 ಮೀಟರ್ ಓಟ ಪ್ರಥಮ 1,500 ಮೀಟರ್ ಓಟ ಪ್ರಥಮ 800 ಮೀಟರ್ ಓಟ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ನಮ್ಮೂರಿನ ಹೆಮ್ಮೆಯ ಪ್ರತಿಭೆಯಾಗಿರುತ್ತಾರೆ. ಇವರು ದೇವದಲ್ಲಿ ನೆಲೆಸಿರುವ ದಿವಂಗತ ಶೀನಪ್ಪ ಗೌಡ ಪಾಲೆಪ್ಪಾಡಿ...
Loading posts...
All posts loaded
No more posts