ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇದರ 2013 24 ನೇ ಸಾಲಿನ ವಿಸ್ತರಣಾ ಘಟಕಗಳ ಬಲಪಡಿಸುವಿಕೆ ಯೋಜನೆ ಅಡಿಯಲ್ಲಿ ಹಾಲು ಕರೆಯುವ ಸ್ಪರ್ಧೆ (ಅತಿ ಹೆಚ್ಚು ಹಾಲು ಉತ್ಪಾದಿಸುತ್ತಿರುವ ಜಾನುವಾರುಗಳನ್ನು ಗುರುತಿಸಿ ಅವುಗಳ ಮಾಲಕರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ) ದಿನಾಂಕ 31.01.2024ನೇ ಭಾನುವಾರ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ನಡೆದ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮಂಗಳೂರು ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಪುತ್ತೂರು ಮಹತೋಭಾರ ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಸುಬ್ರಮಣ್ಯ, ಏರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನ ಹಾಲು ಉತ್ಪಾದಕರ ಸಹಕಾರ ಸಂಘಗಳಾದ ಮುರುಳ್ಯ ಎಡಮಂಗಲ ಪಡ್ಪಿನಂಗಡಿ ಮಾನ್ಯಡ್ಕ ಮತ್ತು ಮದ್ಕೂರು, ಲ್ಯಾಂಪ್ ಸೊಸೈಟಿ ಸುಳ್ಯ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸುಳ್ಯ ಸಂಸ್ಥೆಗಳು ಭಾಗವಹಿಸಿದ್ದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಣ್ಣ ಜಾಲ್ತಾರು ಅಧ್ಯಕ್ಷರು ಗ್ರಾಮ ಪಂಚಾಯತ್ ಎಡಮಂಗಲ ರವರು ವಹಿಸಿದ್ದರು. ಸುಳ್ಯದ ಜನಪ್ರಿಯ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯದವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಹೈನುಗಾರಿಕೆ ಕಡಿಮೆ ಯಾಗುತ್ತಿರುವಂತಹ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳನ್ನು ರೂಪಿಸುವುದರಿಂದ ರೈತರು ಆರ್ಥಿಕ ಸಂಕಷ್ಟಗಳಿಂದ ಪಾರಾಗುವುದು ಸುಲಭ ಇಂತಹ ಕಾರ್ಯಕ್ರಮಗಳಿಂದ ಇನ್ನೂ ಹೆಚ್ಚಿನ ರೈತರು ಹೈನುಗಾರಿಕೆಯ ಕಡೆಗೆ ಒಲವು ತೋರುವವಂತಾಗಲಿ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ದ.ಕ. ಹಾಲು ಒಕ್ಕೂಟದ ಅಧ್ಯಕ್ಷರಾದ ಶ್ರೀ ಸುಚರಿತ ಶೆಟ್ಟಿ, ನಿರ್ದೇಶಕರಾದ ಶ್ರೀ ನಾರಾಯಣ ಪ್ರಕಾಶ್, ದಕ್ಷಿಣ ಕನ್ನಡ ಪಶುಪಾಲನೆ ಇಲಾಖೆಯ ಉಪನಿರ್ದೇಶಕರಾದ ಡಾ. ಅರುಣ್ ಕುಮಾರ್ ಶೆಟ್ಟಿ, ದ ಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿವೇಕ್ ಡಿ, ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಮತಿ ಕುಸುಮಾವತಿ ಮತ್ತಿತರ ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಮತ್ತು ಕಡಬ ತಾಲೂಕಿನ ಎಡಮಂಗಲ ಗ್ರಾಮದ ಒಟ್ಟಾರೆ 34 ರೈತರು ಭಾಗವಹಿಸಿದ್ದು. ಹಾಲು ಕರೆಯುವ ಸ್ಪರ್ಧೆಯಲ್ಲಿ ಶ್ರೀ ಶಿವರಾಮ ಸಿ. ಚಾಮೇತಡ್ಕ ಇವರ ಹಸುಗಳು 28.02ಲೀ ಮತ್ತು 24.88ಲೀ ಹಾಲು ಉತ್ಪಾದಿಸುವುದರೊಂದಿಗೆ ಪ್ರಥಮ (2ಗ್ರಾಂ ಚಿನ್ನದ ಪದಕ) ಮತ್ತು ದ್ವಿತೀಯ (1ಗ್ರಾಂ ಚಿನ್ನದ ಪದಕ) ಸ್ಥಾನಗಳನ್ನು ಪಡೆದುಕೊಂಡವು. ಎಡಮಂಗಲ ಗ್ರಾಮದ ಶ್ರೀ ಪೊಯ್ಯತ್ತೂರು ಕರುಣಾಕರ ರೈ ರವರ ಹಸು 20.62 ಲೀ ಹಾಲು ಉತ್ಪಾದಿಸುವುದರೊಂದಿಗೆ ತೃತೀಯ (1/2ಗ್ರಾಂ ಚಿನ್ನದ ಪದಕ) ಸ್ಥಾನವನ್ನು ಪಡೆದುಕೊಂಡಿತು. ಶ್ರೀಮತಿ ವೇದಾವತಿ ಮಾಲೆಂಗ್ರಿ (20.01ಲೀ) ಮತ್ತು ಶ್ರೀಮತಿ ಜುರಾಬಿ ಉಳ್ಳಲಾಡಿ (18.80 ಲೀ) ರವರ ಹಸುಗಳು 4ನೇ ಮತ್ತು 5ನೇ ಸ್ಥಾನವನ್ನು ಗಳಿಸಿ 1/4 ಗ್ರಾಂ ಚಿನ್ನದ ಪದಕಗಳನ್ನು ಪಡೆದುಕೊಂಡವು. ವ್ಯಾಪ್ತಿಯ ಹತ್ತು ಜನ ರೈತರಿಗೆ ಬೆಳ್ಳಿಯ ನಾಣ್ಯಗಳನ್ನು, ಪ್ರಶಸ್ತಿಪತ್ರ ಮತ್ತು ಪೋಷಕಾಂಶ ಭರಿತ ಪಶು ಆಹಾರದ ಕಿಟ್ಟುಗಳೊಂದಿಗೆ ನೀಡಿ ಪ್ರೋತ್ಸಾಹಿಸಲಾಯಿತು.
ಈ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಮಿಶ್ರತಳಿ ಕರು ಪ್ರದರ್ಶನದಲ್ಲಿ 86 ಅತ್ಯುತ್ತಮ ತಳಿಯ ಕರುಗಳನ್ನು ಪ್ರದರ್ಶಿಸಲಾಯಿತು. ಕರು ಪ್ರದರ್ಶನದಲ್ಲಿ ಭಾಗವಹಿಸಿದ ಅತ್ಯಂತ ಉತ್ತಮವಾದ ಐದು ಕರುಗಳಿಗೆ ಬೆಳ್ಳಿಯ ನಾಣ್ಯಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಸುಮಾರು 520ಕ್ಕೂ ಹೆಚ್ಚಿನ ಸಂಖ್ಯೆಯ ಹೈನುಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು. ಕಾರ್ಯಕ್ರಮದಲ್ಲಿ ಪಶುಪಾಲನೆ ಇಲಾಖೆ ಸುಳ್ಯ, ದಕ್ಷಿಣ ಕನ್ನಡ ಹಾಲು ಒಕ್ಕೂಟ, ಮಿಲ್ಕ್ ಮಾಸ್ಟರ್, ಕೆನರಾ ಬ್ಯಾಂಕ್, ಗೋಲಕ್ಷ್ಮಿ ಫೀಡ್ಸ್, ಮತ್ತಿತರ ಪಶು ಔಷಧಿ ತಯಾರಿಕಾ ಸಂಸ್ಥೆಗಳ ಆಕರ್ಷಕ ಮಳಿಗೆಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡ ಹಲವಾರು ರೈತರು ತಾವು ಕೂಡ ಪಶುಪಾಲನಾ ಚಟುವಟಿಕೆಗಳಲ್ಲಿ ತೊಡಗಬೇಕು ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮದ ಉಸ್ತುವಾರಿಯನ್ನು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯದ ಮುಖ್ಯ ಪಶುವೈದ್ಯಾಧಿಕಾರಿ ಡಾ. ನಿತಿನ್ ಪ್ರಭು ಕೆ. ವಹಿಸಿಕೊಂಡಿದ್ದರು. ಇಲಾಖೆಯ ಅಧಿಕಾರಿಗಳಾದ ಡಾ. ಸೂರ್ಯನಾರಾಯಣ, ಡಾ. ವೆಂಕಟಾಚಲಪತಿ, ಡಾ ಮೇಘಶ್ರೀ, ಡಾ ಅಜಿತ್ ಎಂಸಿ, ಡಾ. ಮಲ್ಲಿಕಾ. ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ. ಸತೀಶ್ ರಾವ್ ಡಾ ಚರಣ್ ಡಿ.ಜೆ. ಡಾ ಸಚಿನ್, ವಿಸ್ತರಣಾಧಿಕಾರಿಗಳಾದ ಶ್ರೀ ಹರೀಶ್, ಇಲಾಖೆಯ ಜಾನುವಾರು ಅಭಿವೃದ್ಧಿ ಅಧಿಕಾರಿ ಶ್ರೀ ಪುಷ್ಪರಾಜ ಶೆಟ್ಟಿ, ಸಹ ಸಿಬ್ಬಂದಿಗಳಾದ ಶ್ರೀ ರೋಹಿತ್, ಶ್ರೀ ನವೀನ ಡಿ.ಯಸ್. ಶ್ರೀಮತಿ ಧರ್ಮಾವತಿ, ಶ್ರೀಮತಿ ಯೋಗಿತಾ, ಶ್ರೀ ವಿನೋದ್, ಶ್ರೀ ಹರೀಶ, ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಾದ ಶ್ರೀಮತಿ ಅಕ್ಷತಾ ಮತ್ತು ಶ್ರೀ ಮಾಧವ ಶ್ರೀಮತಿ ತೀರ್ಥ ಕುಮಾರಿ, ಕೃತಕ ಗರ್ಭಧಾರಣೆ ಕಾರ್ಯಕರ್ತರಾದ ಶ್ರೀ ಲಕ್ಷ್ಮೀಶ ಮತ್ತು ಶ್ರೀ ಹರಿಯಪ್ಪ ಹಾಗೂ ಸಿಬ್ಬಂದಿಗಳು ಸ್ಥಳೀಯ ಹೈನುಗಾರರೊಂದಿಗೆ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.