ಆಗಮಿಸಿದ ಭಕ್ತರನ್ನು ಸ್ವಾಗತಿಸಿದ ಧರ್ಮದರ್ಶಿ ಡಾ.ರೇಣುಕಾಪ್ರಸಾದ್ ಕೆ.ವಿ.
ಅಜ್ಜಾವರ: ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಜ.31ರಂದು ಭಕ್ತಿ ಸಡಗರದಿಂದ ನಡೆಯಿತು. ಉತ್ಸವದ ಅಂಗವಾಗಿ ಜ.31 ರಂದು ಕ್ಷೇತ್ರದ ಗರ್ಭಗುಡಿ ತೆರೆದು ವಿಶೇಷ ಪೂಜೆ ನೆರವೇರಿತು. ಈ ಕ್ಷೇತ್ರದ ವಿಶೇಷತೆ ಎಂದರೆ ವರ್ಷದಲ್ಲಿ ಒಂದು ದಿನ ಮಾತ್ರ ಗರ್ಭಗುಡಿಯ ಬಾಗಿಲು ತೆರೆಯುತ್ತಿದ್ದು ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಈ ಕ್ಷೇತ್ರದ ಧರ್ಮದರ್ಶಿಗಳಾಗಿದ್ದಾರೆ.
ದೇಗುಲದಲ್ಲಿ ಮುಂಜಾನೆಯಿಂದದಲೇ ಸ್ವಸ್ತಿ , ಪುಣ್ಯಾಹವಾಚನೆ, ನಿರ್ಮಾಲ್ಯ ವಿಸರ್ಜನೆ, ಜಾತ ವೇದಸೆ ಮಂತ್ರ ಹೋಮ ಸಪ್ತಸತಿ, ನವಗ್ರಹ ಹೋಮ, ಚಂಡಿಕಾ ಹೋಮ ನಡೆಯಿತು. ಮಧ್ಯಾಹ್ನ ದೈವ ದೇವರ ಆರಾಧನೆ ನಡೆದು ಸಾರ್ವಜಿನಕ ಅನ್ನಸಂತರ್ಪಣೆ ನಡೆಯಿತು.
ಈ ಉತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಗುತ್ಯಮ್ಮ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ಧರ್ಮದರ್ಶಿ ಡಾ.ರೇಣುಕಾ ಪ್ರಸಾದ್ ಕೆ.ವಿ ಅವರು ಆಗಮಿಸಿದ ಪ್ರತಿಯೊಬ್ಬರನ್ನೂ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಡಾ.ಜ್ಯೋತಿ ಆರ್ ಪ್ರಸಾದ್, ಡಾ.ಅಭಿಜ್ಞಾ ಆರ್.ಪ್ರಸಾದ್, ಮೌರ್ಯ ಆರ್.ಪ್ರಸಾದ್, ಎಒಎಲ್ಇ ಬಿ ಕಮಿಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ, ಮಾಧವ ಬಿ.ಟಿ, ಪ್ರಸನ್ನ ಕಲ್ಲಾಜೆ, ಭವಾನಿಶಂಕರ ಅಡ್ತಲೆ, ಶಿವರಾಮ ಕೇರ್ಪಳ, ನಾಗೇಶ್ ಕೊಚ್ಚಿ, ದಿನೇಶ್ ಮಡ್ತಿಲ, ಡಾ.ಮನೋಜ್ ಅಡ್ಡಂತ್ತಡ್ಕ,ಅರುಣ್ ಕುರುಂಜಿ, ಯಶೋದಾ ರಾಮಚಂದ್ರ, ಡಾ.ಮೋಕ್ಷಾ ನಾಯಕ್,
ಚಿದಾನಂದ ಬಾಳಿಲ, ಕಮಲಾಕ್ಷ ನಂಗಾರು ಜೊತೆಗಿದ್ದರು.
ಶಾಸಕಿ ಭಾಗೀರಥಿ ಮುರುಳ್ಯ, ಕುವೆಂಪು ವಿವಿ ನಿವೃತ್ತ ಉಪಕುಲಪತಿ ಡಾ.ಚಿದಾನಂದ ಕೊಳಂಬೆ ದೇವಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪ್ರಮುಖರಾದ ಎನ್.ಎ.ರಾಮಚಂದ್ರ, ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ, ಎಂ.ಬಿ.ಸದಾಶಿವ, ಹರೀಶ್ ಕಂಜಿಪಿಲಿ, ಪಿ.ಸಿ.ಜಯರಾಮ, ವಿನಯಕುಮಾರ್ ಕಂದಡ್ಕ,ಸುನಿಲ್ ಕೇರ್ಪಳ, ವೆಂಕಟ್ ದಂಬೆಕೋಡಿ, ಪಿ.ಎಸ್.ಗಂಗಾಧರ, ಜಯಪ್ರಕಾಶ್ ಕುಂಚಡ್ಕ, ಸಂತೋಷ್ ಕುತ್ತಮೊಟ್ಟೆ, ಪದ್ಮಾ ಕೋಲ್ಚಾರ್, ಪುರೋಹಿತ ನಾಗರಾಜ ಭಟ್ ಸೇರಿದಂತೆ ಮತ್ತಿತರರು ಸೇರಿ ಸಾವಿರಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.