
ಕಳೆದ 39 ವರ್ಷಗಳಿಂದ ಸುಳ್ಯ ಸಿಎ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ಕಚೇರಿ ಮ್ಯಾನೇಜರ್ ಹುದ್ದೆಯಲ್ಲಿದ್ದು ಇದೀಗ ದಿನಾಂಕ 31.01.2024 ರಂದು ನಿವೃತ್ತಿ ಹೊಂದಿದ ದಿನೇಶ್ ಕುಮಾರ್ ಕೆ ಸಿ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಎ ಎಸ್ ವಿಜಯಕುಮಾರ್ ಸಭಾಭವನದಲ್ಲಿ ಜರಗಿತು. ಸಂಘದ ಅಧ್ಯಕ್ಷರಾದ ವಿಕ್ರಂ ಎ ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾಗಿರುವ ಚಂದ್ರಶೇಖರ ನಡುಮನೆ, ಮಾಜಿ ಅಧ್ಯಕ್ಷರಾಗಿದ ಹರೀಶ್ ಬೂಡುಪನ್ನೆ, ಸಂಘದ ಆಡಳಿತ ಮಂಡಳಿ ನಿರ್ದೇಶಕರುಗಳಾದ ಪ್ರಬೋದ್ ಶೆಟ್ಟಿ ಮೇನಾಲ, ನವ್ಯ ಚಂದ್ರಶೇಖರ್, ಚಂದ್ರಶೇಖರ ದೊಡ್ಡೇರಿ, ಸಿಬ್ಬಂದಿ ವರ್ಗ , ಕಾನೂನು ಸಲಹೆಗಾರರು, ಪಿಗ್ಮಿ ಸಂಗ್ರಹಕರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಸ್ ಪಿ ಸ್ವಾಗತಿಸಿದರು. ಮಾಜಿ ಉಪಾಧ್ಯಕ್ಷರು ಪ್ರಸ್ತುತ ನಿರ್ದೇಶಕರಾದ ವೆಂಕಟರಮಣ ಮುಳ್ಯ, ಕಾನೂನು ಸಲಹೆಗಾರರಾಗಿರುವ ಭಾಸ್ಕರ ರಾವ್ ಪಿ, ಆಂತರಿಕ ಲೆಕ್ಕಪರಿಶೋಧಕರಾಗಿರುವ ಶಿವಪ್ರಸಾದ್ ಎಸ್ ನಿವೃತ್ತ ರಿಗೆ ಶುಭ ಹಾರೈಸಿದರು. ಉಪಾಧ್ಯಕ್ಷರಾದ ಚಂದ್ರಶೇಖರ ನಡುಮನೆ, ಧನ್ಯವಾದ ಅರ್ಪಿಸಿದರು..
