
ಗಾಂಧಿನಗರ ನಾವೂರು ಪರಿಸರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಇದೀಗ ಪವನ್ ಎಂಬ ಯುವಕನಿಗೆ ನಾಯಿ ಕಚ್ಚಿದ್ದು ಪ್ರಕರಣ ಬೆಳಕಿಗೆ ಬಂದಿದೆ. ಮಕ್ಕಳು ಹಾಗೂ ಮಂಜಾನೆ ವಾಕಿಂಗ್ ಮಾಡುವವರು ಮದ್ರಸ ಶಾಲೆಗೆ ಹೋಗುವ ಮಕ್ಕಳು ಸೇರಿದಂತೆ ಸಾರ್ವಜನಿಕರು ಓಡಾಡುವಲ್ಲಿ ನಾಯಿಗಳ ಹಾವಾಳಿ ಹೆಚ್ಚಾಗಿದ್ದು ಈ ಕುರಿತು ನಗರ ಪಂಚಾಯತ್ ಗೆ ಮಾಹಿತಿ ನೀಡಲಾಗಿದ್ದು ನಾಳೆ ಮುಂಜಾನೆ ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿ ತುರ್ತು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದು ಅಲ್ಲದೇ ಮಕ್ಕಳ ಪೋಷಕರು ಮತ್ತು ಸಾರ್ವಜನಿಕರು ಜಾಗೃತೆ ವಹಿಸುವಂತೆ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ತಿಳಿಸಿದ್ದಾರೆ.