Ad Widget

ಪೆರಾಜೆಯಲ್ಲಿ ಜನಸ್ಪಂದನಾ ಕಾರ್ಯಕ್ರಮ ; ಸರಕಾರ ಬಡವರ ಪರವಾಗಿದೆ : ಎ.ಎಸ್.ಪೊನ್ನಣ್ಣ

ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಬಡವರ ಪರದ ಸರಕಾರ. ಜನರ ಬಾಗಿಲಿಗೆ ಬಂದು ಅವರ ಕಷ್ಟ-ಸಮಸ್ಯೆಗಳಿಗೆ ಸ್ಪಂಧಿಸಿ, ಪರಿಹಾರ ಮಾಡುವ ಸರಕಾರ ಇಂದು ರಾಜ್ಯದಲ್ಲಿದೆ. ಬಧ್ಧತೆಯಿಂದ ಕೆಲಸಮಾಡುವ ಜನಪ್ರತಿನಿಧಿಗಳಾದ ನಾವು ಇದ್ದೇವೆ. ಯಾವುದೇ ಸಮಸ್ಯೆಗಳು ಇದ್ದರೂ ಬಗೆಹರಿಸಿ, ಸೂಕ್ತ ಪರಿಹರಿಸುವಲ್ಲಿ ಶ್ರಮಿಸುತ್ತೇವೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಅವರು ಪೆರಾಜೆಯಲ್ಲಿ ಶನಿವಾರ ನಡೆದ ಜನಸ್ಪಂದನಾ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ ವಹಿಸಿದರು.ವೇದಿಕೆಯಲ್ಲಿ ಜಿಲ್ಲಾಧಿಕಾರಿ ವೆಂಕಟಾರಾಜ್, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಉಪವಿಭಾಗಾಧಿಕಾರಿ ವಿನಾಯಕ ಮಾರ್ವಾಡೇಕರ್ ಇದ್ದರು. ಸಾರ್ವಜನಿಕರಿಂದ ಬಂದ ೫೦೦ಕ್ಕೂ ಅಧಿಕ ಅಹವಾಲುಗಳನ್ನು ಸ್ವೀಕರಿಸಿ, ಕೆಲವು ಅಹವಾಲುಗಳಿಗೆ ಸ್ಥಳದಲ್ಲೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಲ್ಲ ಅಹವಾಲುಗಳಿಗೆ ಕೂಡಲೇ ಪರಿಹಾರ ಕಾಣುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೇ ವೇಳೆ ಅಂಗವಿಕಲರವೇತನ, ವಿಧವಾವೇತನ, ಸಂಧ್ಯಾಸುರಕ್ಷಾ, ಅಕ್ರಮ ಸಕ್ರಮ ಫಲಾನುಭವಿಗಳಿಗೆ ವಿತರಿಸಲಾಯಿತು. ಶಿಕ್ಷಕ ಕುಮಾರ್ ಸಂಪಾಜೆ ಕಾರ್ಯಕ್ರಮ ನಿರೂಪಿಸಿದರು.
೭೫ಲಕ್ಷ ರೂ ಜಲಜೀವನ್ ಯೋಜನೆ ಕಾಮಗಾರಿ ಕಳಪೆ: ಉದ್ಘಾಟನೆಗೆ ಶಾಸಕರಿಂದ ನಿರಾಕರಣೆ: ಜನಸ್ಪಂದನಾ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಎ.ಎಸ್.ಪೊನ್ನಣ್ಣ ಅವರು ಪೆರಾಜೆಯಲ್ಲಿ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಿ, ಬಳಿಕ ಜಲಜೀವನ್ ಯೋಜನೆಯಲ್ಲಿ ೭೫ಲಕ್ಷ ರೂ ನಲ್ಲಿ ನಿರ್ಮಾಣವಾದ ನೀರಿನ ಟ್ಯಾಂಕ್ ಕಳಪೆಯಾಗಿದ್ದು, ಇದನ್ನು ಉದ್ಘಾಟಿಸಲು ನಿರಾಕರಿಸಿ, ಈ ರೀತಿ ಕಳಪೆ ಕಾಮಗಾರಿಗಳಿಗೆ ಯಾವುದೇ ರೀತಿಯ ಕ್ಷಮೆಇಲ್ಲ. ಇಂತಹ ಕಾಮಗಾರಿಗಳಿಗೆ ಚಾಲನೆ ನೀಡಲು ಸಾಧ್ಯವಿಲ್ಲ. ನಮ್ಮ ಸರಕಾರ ಯಾವುದೇ ರೀತಿಯ ಕಳಪೆ, ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಶಾಸಕರು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಖಡಕ್ ಆಗಿ ಕಿವಿ ಮಾತು ಹೇಳಿದರು.ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ನಾನಾ ಇಲಾಖೆಗಳ ಅಧಿಕಾರಿಗಳು, ಗ್ರಾ.ಪಂ.ಸದಸ್ಯರು ಭಾಗವಹಿಸಿದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!