
ಆಲೆಟ್ಟಿಯ ಏಣಾವರ ವಯನಾಟ್ ಕುಲವನ್ ದೈವಸ್ಥಾನದ ಜೀರ್ಣೋದ್ದಾರ ಕಾಮಗಾರಿ ನಡೆಯುತ್ತಿದ್ದು ಜ 28 ರಂದು ಮುಂದಿನ ಕೆಲಸಗಳ ಬಗ್ಗೆ, ಗಬ್ಬಲ್ಕಜೆ ಕುಟುಂಬದವರು ನೀಡಬೇಕಾದ ಆರ್ಥಿಕ ಸಹಕಾರ, ಊರವರ ಸೇವಾ ಸಹಕಾರದ ಬಗ್ಗೆ ವಿಮರ್ಶೆಮಾಡಲಾಯಿತು. ಉಮೇಶ್ ಗಬಲ್ಕಜೆ ಅಧ್ಯಕ್ಷತೆ ವಹಿಸಿದ್ದರು, ಈ ಸಭೆಯಲ್ಲಿ ಪುಟ್ಟಣ್ಣ ಗೌಡ ಅಡ್ಪಂಗಾಯ, ನಾರಾಯಣ ಬಾರ್ಪಣೆ, ಉಮೇಶ್ ಜಿ.ಕೆ, ಜೆ.ಕೆ.ರೈ, ಪವಿತ್ರನ್ ಗುಂಡ್ಯ,ಹಿಮಕರ ರಾಜ, ಲಕ್ಷಣ ಬಾಳೆಹಿತ್ಲು, ಪುರುಷೋತ್ತಮ ನಡುಮನೆ, ಜಯಪ್ರಕಾಶ್ ಬಾಳೆಹಿತ್ಲು, ಐತ್ತಪ್ಪ ಕೆರೆಮೂಲೆ, ಕುಶಾಲಪ್ಪ ನಡುಮನೆ, ರಾಜೇಶ್ ನಡುಮನೆ,ವಿದ್ಯಾದರ ಕೂಟೇಲು,ದಿನೇಶ್ ಏಣಾವರ, ಚಂದ್ರಶೇಖರ ಏಣಾವರ, ದಿವಾಕರ ಕೊನ್ನೊಡಿ, ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.ಸತ್ಯಪ್ರಸಾದ್ ಗಬಲಕಜೆ ಯವರು ಸ್ವಾಗತಿಸಿ ಪವಿತ್ರನ್ ಗುಂಡ್ಯ ವಂದಿಸಿದರು.