Ad Widget

ಪುರ್ಸ ಕಟ್ಟುನ ಸಾಕ್ಷ್ಯಚಿತ್ರ ಪ್ರತಿಷ್ಠಿತ ಜೈಪುರ ಚಲನಚಿತ್ರೋತ್ಸವಕ್ಕೆ ಆಯ್ಕೆ


ಡಾ.ಸುಂದರ ಕೇನಾಜೆ ಚಿತ್ರಕತೆ-ನಿರ್ದೇಶನ, ಭರತೇಶ ಅಲಸಂಡೆಮಜಲು ಹಾಗೂ ಡಾ.ವಿಶ್ವನಾಥ ಬದಿಕಾನ ಇವರು ನಿರ್ಮಾಪಕರಾಗಿರುವ “ಪುರ್ಸ ಕಟ್ಟುನ, ಇನಿ- ಕೋಡೆ- ಎಲ್ಲೆ” ಸಾಕ್ಷ್ಯಚಿತ್ರ ಮತ್ತೆ ಇನ್ನೊಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಈ ಬಾರಿ ಇದು ಜಗತ್ತಿನ ಅತ್ಯಂತ ದೊಡ್ಡ ಹಾಗೂ ಪ್ರತಿಷ್ಠಿತ ಜೈಪುರ ಚಲನಚಿತ್ರೋತ್ಸವಕ್ಕೆ ಅರ್ಹತೆ ಪಡೆದಿದೆ. ಭಾಗವಹಿಸಿದ 82 ದೇಶಗಳ 2971 ಸಿನಿಮಾ ಮತ್ತು ಸಾಕ್ಷ್ಯಚಿತ್ರಗಳಲ್ಲಿ 326 ರಲ್ಲಿ ಒಂದಾಗಿ ಆಯ್ಕೆಯಾದ ಇದು ಈ ಚಲನಚಿತ್ರೋತ್ಸವದ ಇತಿಹಾಸದಲ್ಲೇ ಅತೀ ಹೆಚ್ಚು ಭಾಗವಹಿದ ದಾಖಲೆಯಲ್ಲಿ ಅರ್ಹತೆ ಪಡೆದಿದೆ.
ಇದೇ ಫೆಬ್ರವರಿ11ರಿಂದ 15 ವರೆಗೆ ಈ ಚಲನಚಿತ್ರೋತ್ಸವದ ರಾಜಸ್ಥಾನದ ಜೈಪುರದಲ್ಲಿ ನಡೆಯಲಿದ್ದು ಜೈಪುರದ ನಾನಾ ಕಡೆ ಇದರ ಪ್ರದರ್ಶನ, ಚರ್ಚೆ, ಸಂವಾದಗಳೂ ನಡೆಯಲಿವೆ. ಜೈಪುರ ಸಾಹಿತ್ಯೋತ್ಸವದ ನಂತರ ಈ ಚಲನಚಿತ್ರೋತ್ಸವ ನಡೆಯಲಿದೆ. ಈ ಸಾಕ್ಷ್ಯ ಚಿತ್ರವನ್ನು ತುಳು ವಿಕಿಪೀಡಿಯದ ಸಹಕಾರದಿಂದ ತಯಾರಿಸಲಾಗಿ ಅಂತರ್ ಜಾಲಕ್ಕೆ ಬಿಡುಗಡೆ ಮಾಡಲಾಗಿದೆ, ಇದು ಈಗಾಗಲೇ ತ್ರಶೂರ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಅರ್ಹತೆ ಪಡೆದು 5 ದಿನಗಳ ಕಾಲ ಪ್ರದರ್ಶನ, ಗೋಷ್ಠಿ, ಚರ್ಚೆಗಳಿಗೆ ಒಳಪಟ್ಟಿತು ಈ ಗೋಷ್ಠಿಗಳಲ್ಲಿ ನಿರ್ದೇಶಕರಾದ ಡಾ.ಸುಂದರ ಕೇನಾಜೆ ಭಾಗವಹಿಸಿ ವಿಚಾರ ಮಂಡಿಸಿದ್ದರು ಎಂದು ನಿರ್ಮಾಪಕರಾದ ಭರತೇಶ್ ಅಲಸಂಡೆಮಜಲು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!