ದಿನಾಂಕ 26.12.2023 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯನಾಡಿನಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ಶಾಲಾ SDMC ಅಧ್ಯಕ್ಷರಾದ ಶ್ರೀ ನವೀನ್ ಕುಮಾರ್ ರವರು ವಹಿಸಿದರು. ವೇದಿಕೆಯಲ್ಲಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹನೀಫ್ ಎಸ್ ಪಿ, ಮುತ್ತೂಮಾರಿಯಮ್ಮ ದೇವಸ್ಥಾನ ಅಧ್ಯಕ್ಷರಾದ ಗಜೇಂದ್ರ , ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಜಾಕ್, ಚಾಮುಂಡೇಶ್ವರಿ ದೇವಸ್ಥಾನ ಅಧ್ಯಕ್ಷರಾದ ಯಶೋಧರ, ಶಾಲಾ ಮುಂಚೂಣಿ ಹೋರಾಟಗಾರರಾದ ಅಪ್ಪಣ್ಣ , ನಿಕಟ ಪೂರ್ವ ಮುಖ್ಯೊಪಾಧ್ಯರಾದ ಸುಲೋಚನಾ , ಶಾಲಾ ನಾಯಕಿ ಸಫೂವಾನ , ಇನ್ನಿತರ ಅತಿಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು ಶಾಲಾ ಮುಖ್ಯೋಪಾಧ್ಯಾಯ ಹಂಸಕಲಾ ರವರು ಸರ್ವರನ್ನು ಸ್ವಾಗತಿಸಿದರು, ಶಿಕ್ಷಕಿಯಾದ ಕವಿತಾ ವಂದಿಸಿದರು, ಹಳೆ ವಿದ್ಯಾರ್ಥಿ ಸಂಘ, SDMC ಸದಸ್ಯರು, ಊರ ಪರವೂರ ದಾನಿಗಳು , ಸರ್ವರ ಸಹಕಾರದಿಂದ ವಾರ್ಷಿಕೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು
- Tuesday
- December 3rd, 2024