Ad Widget

ವಿಶೇಷ ಚೇತನ ಮಕ್ಕಳ ಜೊತೆ ಜನ್ಮ ದಿನ ಆಚರಿಸಿದ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಹೀದ್

ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಸಾಮಾಜಿಕ ರಾಜಕೀಯ ಮುಖಂಡ ಟಿ ಎಂ ಶಹೀದ್ ರವರು ತನ್ನ ಹುಟ್ಟು ಹಬ್ಬವನ್ನು ಸುಳ್ಯ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ಶಾಲೆಯ ಮಕ್ಕಳೊಂದಿಗೆ ಸಿಹಿ ಹಂಚಿಕೊಂಡು ಸರಳವಾಗಿ ಆಚರಿಸಿದ್ದಾರೆ.

. . . . . . . . .

ಸಾಂದೀಪ್ ವಿಶೇಷ ಮಕ್ಕಳ ಜೊತೆ ಕೇಕ್ ಕತ್ತರಿಸಿ ಮಕ್ಕಳೊಂದಿಗೆ ಉಪಹಾರ ಸವಿದು ಮಕ್ಕಳೊಂದಿಗೆ ಬೆರೆತು ಸಂಭ್ರಮಿಸಿದ್ದಾರೆ.

. . . . . . .

ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ ಸಾಂದೀಪ್ ಶಾಲೆ ಮುಖ್ಯ ಶಿಕ್ಷಕಿ ಶ್ರೀಮತಿ ಹರಿಣಿ ಸದಾಶಿವ ಶಾಲೆಗೆ ಭೇಟಿ ನೀಡಿ ಹುಟ್ಟು ಹಬ್ಬ ಆಚರಿಸಿದ ಟಿ.ಎಂ ಶಹೀದ್ ರವರನ್ನು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸುಳ್ಯ ವೆಂಕಟರಮಣ ಸೊಸೈಟಿ ಮುಖ್ಯ ನಿರ್ವಹಣಾಧಿಕಾರಿ ಕೆ.ಟಿ ವಿಶ್ವನಾಥ, ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ,ನ್ಯಾಯವಾದಿ ಮೂಸ ಪೈಂಬಚ್ಚಾಲ್, ನ್ಯಾಯವಾದಿ ದೇವಿಪ್ರಸಾದ್ ಪೆರಾಲು,ಯುವ ಕಾಂಗ್ರೆಸ್ ಮುಖಂಡ ಸಿದ್ದೀಕ್ ಕೊಕ್ಕೊ, ಆರಿಫ್ ಪೇರಡ್ಕ, ಎಂ ಬಿ ಫೌಂಡೇಶನ್ ಟ್ರಸ್ಟಿ ಶ್ರೀಮತಿ ಪುಪ್ಪ ರಾಧಾಕೃಷ್ಣ ಮಾಣಿಬೆಟ್ಟು, ರಾಧಾಕೃಷ್ಣ ಮಾಣಿಬೆಟ್ಟು,ಮೊದಲಾದವರು ಉಪಸ್ಥಿತರಿದ್ದರು. ಸಾಂದೀಪ್ ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಸಹಕರಿಸಿದರುಸಾಂದೀಪ್ ವಿಶೇಷ ಮಕ್ಕಳ ಶಾಲೆ ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ಸಂಯೋಜಿಸಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading