ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಗೊನೆ ಕಡಿಯುವ ಕಾರ್ಯಕ್ರಮ ಇಂದು (ಜ.24) ವಿವಿಧ ವೈದಿಕ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು.
ಕುದ್ವ ತೋಟದಲ್ಲಿ ಗೊನೆ ಕಡಿದು ಪೂರ್ವ ಸಂಪ್ರದಾಯದಂತೆ ಬ್ಯಾಂಡ್ ವಾಲಗ ಮೆರವಣಿಗೆ ಮೂಲಕ ಶ್ರೀ ದೇವಾಲಯಕ್ಕೆ ಸಮರ್ಪಿಸಲಾಯಿತು. ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ನತ್ತೂರ್, ಉತ್ಸವ ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ಕುದ್ವ, ಧರ್ಮಪಾಲ ಗೌಡ ಮರಕಡ ಕಾಚಿಲ,ಗಂಗಾಧರ ಗುಂಡಡ್ಕ ಶ್ರೀಮತಿ ಪವಿತ್ರ ಕುದ್ವ ಮಲ್ಲೆಟಿ, ರಜಿತ್ ಭಟ್ ಪಂಜಬೀಡು, ಸಂತೋಷ್ ರೈ ಪಲ್ಲತ್ತಡ್ಕ, ತಿಮ್ಮಪ್ಪ ಗೌಡ ಪುತ್ಯ, ರಮೇಶ್ ಕುದ್ವ, ಧರ್ಮಣ್ಣ ನಾಯ್ಕ ಗರಡಿ, ಕೇಶವ ಕುದ್ವ, ಗಂಗಾಧರ ಮರಕಡ, ದೀಕ್ಷಿತ್ ಸಂಪ, ಸದಾಶಿವ ಸಂಪ, ಕುಶಾಲಪ್ಪ ಗೌಡ ದೊಡ್ಡಮನೆ, ಕುಮಾರ ಕಕ್ಯಾನ,ಮೇದಪ್ಪ ಗೌಡ ಪಂಬೆತ್ತಾಡಿ, ಕೆ.ಟಿ.ರಾಮಕೃಷ್ಣ, ರಾಮಚಂದ್ರ ಭಟ್ ಕುದ್ವ, ದಿನೇಶ್ ಪುಂಡಿಮನೆ, ಉಜ್ವಲ್ ಚಿದ್ದಲ್ಲು, ದಿನೇಶ್ ಕಜೆ, ಲಕ್ಷ್ಮಣ ಬೊಳ್ಳಾಜೆ, ಪರಮೇಶ್ವರ ಬಿಳಿಮಲೆ, ರೋಹಿತ್ ಪಂಬೆತ್ತಾಡಿ, ಪ್ರಶಾಂತ್ ಅಳ್ಪೆ, ದೇವಳದ ಅರ್ಚಕರು, ಸಿಬ್ಬಂದಿಗಳು, ಉತ್ಸವ ಸಮಿತಿಯ ಸಂಚಾಲಕರು, ಸದಸ್ಯರು,ಸೀಮೆಯ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಜ.26 ಮತ್ತು ಜ.28ರಂದು ಸೀಮೆಯ ಭಕ್ತರಿಂದ ಸಾಮೂಹಿಕ ಶ್ರಮದಾನ ಜರುಗಲಿದೆ. ಫೆ.1. ರಂದು ರಾತ್ರಿ ಧ್ವಜಾರೋಹಣ ನಡೆಯಲಿದೆ. ಫೆ.5 ರಂದು ಹಗಲು ಶ್ರೀ ದೇವರ ದರ್ಶನ ಬಲಿ. ಫೆ.6.ರಂದು ರಾತ್ರಿ ಶ್ರೀದೇವರ ಬ್ರಹ್ಮ ರಥೋತ್ಸವ ಜರುಗಲಿದೆ. ಫೆ.7ರಂದು ರಾತ್ರಿ ಕಾಚುಕುಜುಂಬ ದೈವದ ನೇಮ. ಫೆ.8 ರಂದು ಮುಂಜಾನೆ ಶ್ರೀ ಉಳ್ಳಾಕುಲು ದೈವದ ನೇಮ ನಡೆಯಲಿದೆ.
- Monday
- November 25th, 2024