Ad Widget

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ , ಸುಳ್ಯಕ್ಕೆ ಕಾಮಗಾರಿಗಳ ವೀಕ್ಷಣೆ ಮಾಡಲು ಮತ್ತೆ ಬರುವುದಾಗಿ ಭರವಸೆ



ಸುಳ್ಯದಲ್ಲಿ ಜಿಲ್ಲಾ ಮಟ್ಟದ ಜನ ಸಂಪರ್ಕ ಸಭೆಯ ಹಿನ್ನಲೆಯಲ್ಲಿ ಸುಳ್ಯಕ್ಕೆ ಆಗಮಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು.

ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮತನಾಡುತ್ತಾ ಬ್ಲಾಕ್ ಕಾಂಗ್ರೆಸ್ ಹಾಗೂ ರಾಜ್ಯದ ಪದಾಧಿಕಾರಿಗಳು ಈಗಾಗಲೇ ನಮಗೆ ಮಾಹಿತಿ ನೀಡಿದ್ದು ಇಲ್ಲಿಗೆ ಪದೇ ಪದೇ ಬಂದು ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಣೆ ಮತ್ತು ಸರಕಾರದ ಸೌಲಭ್ಯಗಳನ್ನು ನೇರವಾಗಿ ಜನತೆಗೆ ತಲುಪಿಸುವ ಕೆಲಸ ಕಾರ್ಯಗಳನ್ನು ಮಾಡುತ್ತೆವೆ ಕಾರ್ಯಕರ್ತರು ಧೈರ್ಯವಾಗಿ ಪಕ್ಷದ ಚಟುವಟಿಕೆ ಮತ್ತು ಮುಂದಿನ ಲೋಕಸಭಾ ಚುನಾವಣೆಯ ಕೆಲಸಗಳಲ್ಲಿ ತೊಡಗಿ ಎಂದು ಹೇಳಿದರು. 27 ಸಂಸದರು ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು ಕೇಂದ್ರದ ಹಣಕ್ಕಾಗಿ ಇತ್ತೀಚೆಗೆ ನಮಗೆ ಸಮಯ ನೀಡಿ ಮುಂದಿನ ದಿನದಲ್ಲಿ ಪ್ರಾಕೃತಿಕ ವಿಕೋಪದ ಕುರಿತಾಗಿ ಸಭೆ ನಡೆಸುತ್ತೆವೆ ಎಂದು ಮೋದಿ, ಶಾ ಹೇಳಿದ್ದರು ಇನ್ನು ನಡೆಸಿಲ್ಲ ಎಂದು ಬಿಜೆಪಿ ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿದರು.ಅಲ್ಲದೆ ಇನ್ನು ಹೆಚ್ಚಿನ ಒತ್ತನ್ನು ಸುಳ್ಯಕ್ಕೆ ನೀಡುತ್ತೆವೆ ಎಂದು ಹೇಳಿದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ್ ಪ್ರಾಸ್ತಾವಿಕ ಮಾತುಗಳನ್ನಡುತ್ತ ನಮ್ಮದು ಗ್ರಾಮೀಣ ಪ್ರದೇಶವಾಗಿದ್ದು ಇಲ್ಲಿ ಸರಕಾರಿ ಬಸ್ಸುಗಳ ಸಮಸ್ಯೆ ಬಹಳಷ್ಟಿದೆ ಅವುಗಳನ್ನು ತಾವು ಬಗೆಹರಿಸಬೇಕು ಅಲ್ಲದೇ ಆ ಬಸ್ಸುಗಳು ವಿಧ್ಯಾರ್ಥಿಗಳ ಅನುಕೂಲಕ್ಕೆ ಮತ್ತು ಸಾಧ್ಯವಾದಲ್ಲಿ ರವಿವಾರವು ಸಂಚಾರದ ಮಾದರಿಯಲ್ಲಿ ಮಾಡಬೇಕು ಎಂದು ಹೇಳಿದರು . ವೇದಿಕೆಯಲ್ಲಿ ಪ್ರಮುಖರಾದ ಜಿ ಕೃಷ್ಣಪ್ಪ, ಕೆ ಪಿ ಸಿ ಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ , ಮಾಜಿ ಕೆ ಪಿ ಸಿ ಸಿ ಕಾರ್ಯದರ್ಶಿ ಎಂ .ವೆಂಕಪ್ಪ ಗೌಡ , ಡಾ. ರಾಧಕೃಷ್ಣ , ಟಿ ಎಂ ಶಾಹೀದ್ ಉಪಸ್ಥಿತರಿದ್ದರು .ಪಿ ಸಿ ಜಯರಾಮ್ ಸ್ವಾಗತಿಸಿ ಪಿ ಎಸ್ ಗಂಗಾಧರ್ ವಂದಿಸಿದರು .

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading