- Thursday
- April 3rd, 2025

ಜ.22 ರಂದು ಅಯೋಧ್ಯೆಯಲ್ಲಿ ನಡೆದ ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಅಂಗವಾಗಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭೆ ಹಾಗೂ ಕರಸೇವಕರಿಗೆ ಸನ್ಮಾನ ನೆರವೇರಿತು. ಕಾರ್ಯಕ್ರಮದಲ್ಲಿ ಅಯೋಧ್ಯೆಯಲ್ಲಿ ಈ ಹಿಂದೆ ನಡೆದ ಹೋರಾಟಗಳ ಬಗ್ಗೆ ನೆನಪಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ...

ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ನೇತೃತ್ವದಲ್ಲಿ ಜನತ ದರ್ಶನ ಸಭೆಯು ಕೆವಿಜಿ ಪುರಭವನದಲ್ಲಿ ಆರಂಭಗೊಂಡಿದ್ದು ಈ ಸಭೆಯು ಶಾಸಕಿ ಆಗಮನಕ್ಕೆ ಮುನ್ನವಾಗಿ ಕಾರ್ಯಕ್ರಮ ಪ್ರಾರಂಭದ ಕುರಿತಾಗಿ ಪ್ರಶ್ನಿಸಿದರು. ಅಲ್ಲದೆ ಈ ಹಿಂದೆ ವಾಲ್ಮೀಕಿ ಶಾಲೆಯ ಉದ್ಘಾಟನೆ ಈ ಹಿಂದೆ ಸಚಿವರಲ್ಲಿ ಕೇಳಿಯೇ ನಾವು ಮಾಡಿದ್ದು ಇದೀಗ ಮತ್ತೆ ಉದ್ಘಾಟನೆ ಮಾಡಿರುವುದು ಬೇಸರವಿಲ್ಲ...

ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ನೇತೃತ್ವದಲ್ಲಿ ಜನತಾ ದರ್ಶನ ಸಭೆಯು ಇಂದು ಕೆವಿಜಿ ಪುರಭವನದಲ್ಲಿ ವಿದ್ಯುಕ್ತವಾಗಿ ಚಾಲನೆಗೊಂಡಿತು. ಈ ಸಭೆಯ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ , ಮಂಜುನಾಥ್ ಭಂಡಾರಿ, ಮುಲೈ ಮುಹಿಲನ್ , ಡಾ. ಆನಂದ್...

ಕಲ್ಲುಗುಂಡಿಯ ಹನುಮನ ಗುಡಿಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠಾ ಮುಹೂರ್ತ ದಲ್ಲಿ ವಿಶೇಷ ಪೂಜೆ ನಡೆಯಿತು.ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.

ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತ್ರತ್ವದಲ್ಲಿ ಇಂದು ಜನಸಂಪರ್ಕ ಸಭೆಯು ಇಂದು ಕೆವಿಜಿ ಪುರಭವನದಲ್ಲಿ ನಡೆಯಲಿದ್ದು ಈ ಹಿನ್ನಲೆಯಲ್ಲಿ ಇದೀಗ ಅಧಿಕಾರಿಗಳ ದಂಡೇ ಹರಿದು ಬಂದಿದ್ದು ಭಾರಿ ಜನತೆ ಆಗಮಿಸುವ ನಿರೀಕ್ಷೆಯಿದೆ.

ಜಿಲ್ಲಾಡಳಿತ ಮಂಗಳೂರು,ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು,ಜಿಲ್ಲಾ ಮಟ್ಟದ "ಯುವಜನ ಮೇಳ" 2023-2024 ರ ತುಳುಪಾಡ್ಡನ ಸ್ಪರ್ಧೆಯಲ್ಲಿ ಚೈತ್ರ ಯುವತಿ ಮಂಡಲ ಅಜ್ಜಾವರ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್, ಕುಮಾರಿ ಹರ್ಷಿತಾ.ಕೆ ತಂಡ ದ್ವಿತೀಯ ಸ್ಥಾನ ಪಡೆದಿರುತ್ತದೆ. ಹಾಗೆಯೇ ಭಜನಾ ಸ್ಪರ್ಧೆಯಲ್ಲಿ ಪ್ರತಾಪ ಯುವಕ ಮಂಡಲ ಅಜ್ಜಾವರ ದ್ವಿತೀಯ ಸ್ಥಾನ ಪಡೆದಿರುತ್ತದೆ

ಅಯೋಧ್ಯೆ ಶ್ರೀ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಸುಳ್ಯದ ಕಾಂಗ್ರೆಸ್ ಮುಖಂಡರು ಸುಳ್ಯ ಪ್ರಮುಖ ದೇವಸ್ಥಾನಗಳಿಗೆ ಭೇಟಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವಿಶೇಷ ಮಹಾಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿ, ಶ್ರೀ ರಾಮ ತಾರಕ ಜಪ ಯಜ್ಞದಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು. ನಂತರ ಸುಳ್ಯದ ಶ್ರೀ ರಾಮ ಭಜನಾ ಮಂದಿರ...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುಳ್ಯ ತಾಲೂಕು ಅಜ್ಜಾವರ ವಲಯದ ಮೇನಾಲ ಕಾರ್ಯಕ್ಷೇತ್ರದಲ್ಲಿ ಕೇವಲ ಮಹಿಳೆಯರು ಮೂರು ಮಂದಿ ಮಾತ್ರ ಇರುವ ಭಾಗೀರಥಿರವರಿಗೆ ಹಲವು ವರ್ಷಗಳಿಂದ ಪ್ರತಿ ತಿಂಗಳಿಗೆ ಮಾಸಾಶನ ಸೌಲಭ್ಯ ಮತ್ತು ಆಹಾರದ ಕಿಟ್ ಮತ್ತು ವಸ್ತ್ರ ಗೃಹ ಉಪಯೋಗಿ ವಸ್ತು ಕ್ಷೇತ್ರದ ವತಿಯಿಂದ ನೀಡಲಾಗುತ್ತಿದೆ ಇವರ ಮನೆಯಲ್ಲಿ ಒಬ್ಬ ಮಹಿಳೆ ಅಂಗವಿಕಲರಾಗಿ...

ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಅಯೋಧ್ಯಾ ಶ್ರೀ ರಾಮದೇವರ ಪ್ರತಿಷ್ಠಾಪನೆಯ ಅಂಗವಾಗಿ ಬೆಳಿಗ್ಗೆ 9.30 ರಿಂದ 11.15 ರತನಕ ಶ್ರೀ ಶಿವಪಂಚಾಕ್ಷರಿ ಭಜನಾ ಮಂಡಳಿ ರೆಂಜಾಳ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ, ನಂತರ ಪ್ರೋಜೆಕ್ಟರ್ ಮೂಲಕ ಅಯೋಧ್ಯಾ ಶ್ರೀ ರಾಮದೇವರ ಪ್ರತಿಷ್ಠಾಪನೆಯ ನೇರಪ್ರಸಾರವನ್ನು ವೀಕ್ಷಿಸಲಾಯಿತು. ಅಯೋಧ್ಯಾ ಕರಸೇವಕರಾದ ಚಂದ್ರಶೇಖರ ರಾವ್ ಆಕಿರೆಕಾಡು, ಲೋಕಯ್ಯ...