ಸುಳ್ಯದಲ್ಲಿ ಇಂದಿನ ಜಿಲ್ಲಾಮಟ್ಟದ ಜನತ ದರ್ಶನ ಕಾರ್ಯಕ್ರಮದಲ್ಲಿ ಇಷ್ಟೊಂದು ಮನವಿಗಳು ಬರಬಹುದು ಎಂಬ ನಿರೀಕ್ಷೆ ಇರಲಿಲ್ಲ ಮತ್ತು ಹಾಗಿದ್ದರೆ ಇಲ್ಲಿನ ತನಕ ಗೆದ್ದು ಬಂದವರು ಈ ಕ್ಷೇತ್ರದಲ್ಲಿ ಮಾಡಿದ ಸಧನೆಯಾದರು ಏನು ಎಂದು ಪ್ರಶ್ನಿಸಿದರು. ಇಲ್ಲಿನ ಕಂದಾಯ, ಆರೋಗ್ಯ , ಅರಣ್ಯ, ಎಂಜಿನಿಯರ್ ವಿಭಾಗ ಸೇರಿದಂತೆ ಅನೇಕ ಅರ್ಜಿಗಳು ಬಂದಿದ್ದು ಅವುಗಳನ್ನು ಬಗೆಹರಿಸುವ ಕೆಲಸಗಳನ್ನು ಮಾಡುತ್ತೇವೆ ಎಂದು ಹೇಳಿದರು.
ಕಂದಾಯ ಇಲಾಖೆಯ ವನ್ ಟು ಫೈ , ಪ್ಲಾಟಿಂಗ್ ಸಮಸ್ಯೆ ಬಹಳಷ್ಟು ಇದೆ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು . ಅಲ್ಲದೇ ಮುಂದಿನ ದಿನಗಳಲ್ಲಿ ಸುಳ್ಯಕ್ಕೆ ಆದಷ್ಟು ಸಮಯಗಳನ್ನು ನೀಡುತ್ತೆನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ವತಿಯಿಂದ ಸಚಿವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ಬಂಟ್ವಾಳ್ , ಕಾಂಗ್ರೆಸ್ ಮುಖಂಡರಾದ ಪಿ ಸಿ ಜಯರಾಮ್ , ಧನಂಜಯ ಅಡ್ಪಂಗಾಯ , ಡಾ ರಾಧಾಕೃಷ್ಣ , ಟಿ ಎಂ ಶಾಹೀದ್ , ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.