
ದಿನಾಂಕ 20 ಮತ್ತು 21ನೇ ಶನಿವಾರ ಮತ್ತು ಆದಿತ್ಯವಾರದಂದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳವು ಕಡಬ ತಾಲೂಕಿನ ಸವಣೂರಿನಲ್ಲಿ ಜರಗಿತು.
ಈ ಸಂದರ್ಭದಲ್ಲಿ ನಡೆದ ಗುಂಪು ಸ್ಪರ್ಧೆಗಳಾದ ಗೀಗಿ ಪದ, ಜನಪದ ಗೀತೆ, ವೀರಗಾಸೆ, ಡೊಳ್ಳು ಕುಣಿತ, ದೊಡ್ಡಾಟ ಮತ್ತು ಸಣ್ಣಾಟ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ, ತುಳುಪಾಡ್ದನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಹಾಗೂ ಕೋಲಾಟ ಮತ್ತು ಚರ್ಮವಾದ್ಯ ಮೇಳ ಸ್ಪರ್ಧೆಯಲ್ಲಿ ತೃತೀಯ ಬಹುಮಾನವನ್ನು ಮಿತ್ರ ಬಳಗ (ರಿ.) ಕಾಯರ್ತೋಡಿ ತಂಡವು ಪಡೆದುಕೊಂಡಿತು.
ವೈಯಕ್ತಿಕ ವಿಭಾಗದಲ್ಲಿ ನಡೆದ ಲಾವಣಿ ಸ್ಪರ್ಧೆಯಲ್ಲಿ ಸಂಘದ ಸದಸ್ಯ ದೇವಿಪ್ರಸಾದ ಜಿ. ಸಿ ಕಾಯರ್ತೋಡಿ ಪ್ರಥಮ, ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಮಂಜುನಾಥ್ ನಾವೂರು ಭಾವಗೀತೆ ಸ್ಪರ್ಧೆಯಲ್ಲಿ ತೃತೀಯ ಬಹುಮಾನವನ್ನು ಪಡೆದುಕೊಂಡರು.