ಎಸ್.ಕೆ.ಎಸ್.ಎಸ್‌ಎಫ್ ಕೇಂದ್ರ ಸಮಿತಿಯ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಪ್ರಜಾಪ್ರಭುತ್ವ ದಿನವಾದ ಜನವರಿ 26 ಸಂಜೆ 5 ಗಂಟೆಗೆ ಏಕಕಾಲದಲ್ಲಿ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪವನ್ನಿಟ್ಟು ಬೃಹತ್ ಮಾನವ ಸರಪಳಿ ದ.ಕ ಈಸ್ಟ್ ಜಿಲ್ಲಾ ಕಾರ್ಯಕ್ರಮ ಈ ಬಾರಿ ಬೆಳ್ಳಾರೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಕ್ವನೀನರ್ ಸಿದ್ದೀಕ್ ಅಡ್ಕ ಹೇಳಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಂಜೆ ೪ ಗಂಟೆ ಸುಮಾರಿಗೆ ಬೆಳ್ಳಾರೆಯ ತಂಬಿನಮಕ್ಕಿ ಬಳಿಯಿಂದ ಬೃಹತ್ ಜಾಥಾ ಆರಂಭಗೊಂಡು ಬೆಳ್ಳಾರೆಯ ಮಸೀದಿ ವರೆಗೆ ಬರಲಿದೆ. ಅಲ್ಲಿ ಬೃಹತ್ ಸಭೆ ನಡೆಯುವುದು. ಸುಮಾರು 3 ಸಾವಿರದಿಂದ 5 ಸಾವಿರ ಮಂದಿ ಸೇರಬಹುದಾದ ನಿರೀಕ್ಷೆ ಇದೆ ಎಂದ ಅವರು, ಕಾರ್ಯಕ್ರಮದಲ್ಲಿ ದುಆ ನೇತೃತ್ವ ಸಮಸ್ತ ದಕ್ಷಿಣ ಕನ್ನಡ ಅಧ್ಯಕ್ಷರಾದ ಸಯ್ಯದ್‌ಝನುಲ್ ಆಬಿದೀನ್ ತಂಜಳ್ ದುಗಲಡ್ಕ ನಿರ್ವಹಿಸಲಿದ್ದಾರೆ. ಸಮಸ್ತ ಕೇಂದ್ರ ಸಮಿತಿ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್ ಫೈಝಿ ತೋಡಾರು ಉದ್ಘಾಟಿಸಲಿದ್ದಾರೆ. ಎಸ್.ಕೆ.ಎಸ್.ಎಸ್.ಎಫ್. ಕೇಂದ್ರ ಸಮಿತಿ ಸದಸ್ಯರಾದ ಅಬೂಬಕರ್ ರಿಯಾರ ರಹ್ಮಾನಿ ಮಾನವ ಸರಪಳಿ ಸಂದೇಶ ಭಾಷಣ ನಡೆಸಲಿದ್ದಾರೆ. ಅಲ್ಲದೆ ಇನ್ನಿತರ ಧರ್ಮ ಗುರುಗಳು ಮತ್ತು ಸರ್ಕಾರಿ ಅಧಿಕಾರಿಗಳು ಇನ್ನಿತರ ಸಾಮಾಜಿಕ ಧಾರ್ಮಿಕ ನೇತಾರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಭಾಗವಾಗಿ ನಡೆಯುವ ರ್‍ಯಾಲಿಯಲ್ಲಿ ದಫ್ ಸೈಟ್ ಫ್ಲವರ್ ಶೋ ನಡೆಯಲಿದೆ ಎಂದವರು ವಿವರ ನೀಡಿದರು.
ಸಮಸ್ತ 100ನೇ ವಾರ್ಷಿಕ ಸಮ್ಮೇಳನದ ಘೋಷಣಾ ಸಮಾವೇಶ 2024 ಜನವರಿ 28 ರಂದು ಬೆಂಗಳೂರಿನ ಅರಮನೆ ಮೈದಾಮದಲ್ಲಿ ಮನಡೆಯಲಿದೆ ಸುಳ್ಯದಿಂದ ನೂರಾರು ಸಮಸ್ತ ಕಾರ್ಯ ಕರ್ತರು ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದವರು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾನವ ಸರಪಳಿ ಸಂಚಾಲಕರಾದ ಅಬ್ದುಲ್ ಖಾದರ್ ಹಾಜಿ ಬಾಯಾಂಬಾಡಿ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್, ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ಉಪಾಧ್ಯಕ್ಷ ಜಮಾಲುದ್ದೀನ್ ಕೆ.ಎಸ್., ಅಕ್ಬರ್ ಕರಾವಳಿ, ಸ್ವಾಗತ ಸಮಿತಿಯ ಅಬ್ದುಲ್ ರಝಾಕ್ ಕರಾವಳಿ, ವೈಸ್ ಚೇರ್‌ಮೆನ್ ಅಬ್ದುಲ್ ಖಾದರ್ ಮೊಟ್ಟೆಂಗಾರ್, ವಲಯ ಕಾರ್ಯದರ್ಶಿ ಆಶೀಕ್ ಸುಳ್ಯ ಇದ್ದರು.