
ಆನೆಗಳ ಗುಂಪಿನಲ್ಲಿದ್ದ ಮರಿಯಾನೆಯೊಂದು ಗುಂಪುನಿಂದ ಬೇರ್ಪಟ್ಟು ಒಂಟಿಯಾಗಿ ಜನವಸತಿ ಪ್ರದೇಶದಲ್ಲೇ ಬಾಕಿಯಾಗಿತ್ತು.
ಮರಿಯಾನೆಯನ್ನು ಆನೆಗಳ ಗುಂಪಿಗೆ ಸೇರಿಸುವ ಪ್ರಯತ್ನಗಳು ಎರಡು ದಿನಗಳಿಂದ ನಡೆಯುತ್ತಲೇ ಇತ್ತು, ಅರಣ್ಯ ಇಲಾಖೆಯ ಪ್ರಯತ್ನ ಯಶಸ್ವಿಯಾಗಿದ್ದು ಮೂರು ಬಾರಿ ಆನೆ ಮರಿಯೊಂದಿಗೆ ಕಾಡಿಗೆ ಹೋಗಿ ಕೊನೆಗೂ ಮರಿಯಾನೆ ತನ್ನ ಗುಂಪಿನಲ್ಲಿ ಸೇರುವಂತೆ ಮಾಡಿದ್ದಾರೆ. ಶುಕ್ರವಾರ ಸಂಜೆಯ ವೇಳೆಗೆ ಮಂಡೆಕೋಲು ಗ್ರಾಮದ ಕನ್ಯಾನ ಶಾಲೆಯ ಬಳಿಯಲ್ಲಿ ಗುಂಪಿನಿಂದ ಬೇರ್ಪಟ್ಟ ಮರಿಯಾನೆ ತನ್ನ ಗುಂಪು ಸೇರಿರುವುದ್ದು ತಾಯಿಯ ಮಡಿಲು ಸೇರಿದ್ದು ಅರಣ್ಯ ಇಲಾಖೆಯು ಈ ಮರಿಯಾನೆಯು ತನ್ನವರ ಜೊತೆಗೆ ತೆರಳಿ ಸುಖಾಂತ್ಯವಾಗಿದೆ.