
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಫೆ.1 ಮತ್ತು 2 ರಂದು ನಡೆಯಲಿದ್ದು, ಆಮಂತ್ರಣ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ. ಬೆಳ್ಯಪ್ಪ ಗೌಡ, ಪ್ರಮುಖರಾದ ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಪದ್ಮನಾಭ ದಂಬೆಕೋಡಿ, ಲಿಂಗಪ್ಪ ನಾಯ್ಕ್ ಕಾಜಿಮಡ್ಕ, ಮಾಧವ ಮಾಸ್ಟರ್ ಮೂಕಮಲೆ, ಕಿಶೋರ್ ಕುಮಾರ್ ಪೈಕ, ಅರ್ಚಕರಾದ ಮಹಾಬಲೇಶ್ವರ ಭಟ್, ಹಿರಿಯರಾದ ಸಾಂತಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.