
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಮಂಗಲ ISFಮತ್ತುIEEE ವತಿಯಿಂದ ಸ್ಮಾರ್ಟ್ ಟಿವಿ ಕೊಡುಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಮಂಗಲ್ಲಿ ದಿನಾಂಕ18/01/2024 ರಂದು ಚಂದ್ರಶೇಖರ IEEE ನ ರಾಷ್ಟ್ರೀಯ ಮುಖ್ಯಸ್ಥರು, ದೀಪ ಬೆಳಗಿಸಿ ಸ್ಮಾರ್ಟ್ ಟಿವಿಯನ್ನು ಉದ್ಘಾಟನೆ ಮಾಡಿದರು, ಈ ಸಂದರ್ಭದಲ್ಲಿ, ಅಶೋಕ್ ವಿಠ್ಠಲ್ ಭಾರತ ಲೋಕೋಪಕಾರಿ ವ್ಯವಸ್ಥಾಪಕರು ಸ್ವರಾಜ್ ಎಚ್ ವಿ ರಾಜ್ಯ ಸಂಯೋಜಕರು- ಕರ್ನಾಟಕ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಕುಮಾರಿ ಗಾಯತ್ರಿ ಸಿ ವಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶೀನಪ್ಪ ನಾಯ್ಕ ಮುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮಣ್ಣ ಜಾಲ್ತಾರು, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಚೈತ್ರ ಹಾಗೂ ಸದಸ್ಯರು, ಪೋಷಕರು ಶಾಲಾ ಶಿಕ್ಷಕರು, ಅಡುಗೆ ಸಿಬ್ಬಂದಿ,ಮಕ್ಕಳು ಪಾಲ್ಗೊಂಡಿದ್ದರು.