ಸಂಪಾಜೆ ಧಾನ್ಯದ ಸಹಕಾರಿ ಸಂಘ ನಿಯಮಿತ , ಸುಳ್ಯ ದ.ಕ. ಇದರ ಮುಂದಿನ ಐದು ವರ್ಷಗಳಿಗೆ ನಡೆದ ಆಡಳಿತ ಮಂಡಳಿಯ ಚುನಾವಣಾ ಪ್ರಕ್ರಿಯೆಯಲ್ಲಿ 17 ಜನ ಅರ್ಹ ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಜ.15 ರಂದು ನಡೆದು ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ನಾಲ್ಕು ಜನ ನಾಮಪತ್ರ ಹಿಂಪಡೆದಿದ್ದುದರಿಂದ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು.
ಸಾಲಗಾರ ಕ್ಷೇತ್ರದ ಸಾಮಾನ್ಯ ಕ್ಷೇತ್ರದಿಂದ ಆನಂದ ಪಿ ಎಲ್., ಈಶ್ವರ ಆಚಾರ್ಯ, ಕಿಶೋರ ಬಿ ಎಸ್., ಗಣಪತಿ ಭಟ್ ಪಿ ಎನ್., ಮಹಮ್ಮದ್ ಹನೀಫ್, ಯಶೋದ ಪಿ ಎಲ್, ಸೀತಾರಾಮ ಕೆ., ಸಾಲಗಾರ ಕ್ಷೇತ್ರದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಪ್ರೇಮ ಡಿ., ಸಾಲಗಾರ ಕ್ಷೇತ್ರದ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ರಾಮ ನಾಯ್ಕ, ಸಾಲಗಾರ ಕ್ಷೇತ್ರದ ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ಹಸೈನಾರ್ ಎ ಕೆ., ಸಾಲಗಾರಕ್ಷೇತ್ರದ ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ಪುಷ್ಪರಾಜ ಗಾಂಭೀರ್ ಬಿ. , ಸಾಲಗಾರಕ್ಷೇತ್ರದ ಮಹಿಳಾ ಮೀಸಲು ಕ್ಷೇತ್ರದಿಂದ ರಜನಿ ಎಸ್ ಎಲ್, ಲೀಲಾವತಿ ಕೆ ಎಚ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.