ಅರಂತೋಡು – ಅಡ್ತಲೆ ಲೋಕೋಪಯೋಗಿ ರಸ್ತೆ ಅಗಲೀಕರಣ ಹಾಗೂ ಡಾಮರೀಕರಣ ಸಂಪೂರ್ಣಗೊಳ್ಳದೆ ಬಾಕಿ ಉಳಿದಿತ್ತು. ಈ ಬಗ್ಗೆ ನಾಗರಿಕ ಹಿತರಕ್ಷಣ ವೇದಿಕೆಯು ಜನಪ್ರತಿನಿಧಿಗಳಿಗೆ ಮತ್ತೊಮ್ಮೆ ಮನವಿ ಮಾಡಿತ್ತು. ಇದೀಗ ಅರಂತೋಡು – ಅಡ್ತಲೆ ರಸ್ತೆಯಲ್ಲಿ ಬಾಕಿ ಇರುವ ಎರಡನೇ ಕೋಟ್ ಡಾಮಾರಿಕರಣ ಪ್ರಾರಂಭವಾಗಿದೆ. ಮನವಿಗೆ ಸ್ಪಂದಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಕೃತಜ್ಞತೆ ಸಲ್ಲಿಸಿದ್ದಾರೆ.
- Tuesday
- November 26th, 2024