Ad Widget

ಗ್ರಾಮೀಣ ಭಾಗದಲ್ಲಿ ಸ್ವ ಉದ್ಯೋಗಿಗಳಿಗೆ ಸಲಕರಣೆ ಜೋಡಣೆಗೆ ಸೆಲ್ಕೋದಿಂದ ಶೇ.25 ಅನುದಾನ.

ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಯೋಜನೆಗೆ ಸೆಲ್ಕೋ ಸೋಲಾರ್ ಸಂಸ್ಥೆಯು ಬ್ಯಾಂಕುಗಳ ಆರ್ಥಿಕ ಸಹಕಾರದೊಂದಿಗೆ ಸ್ವ ಉದ್ಯೋಗ ಉಪಕರಣ ಅಳವಡಿಕೆ ಮಾಡುವವರಿಗೆ ಶೇ 25 ರಷ್ಟು ಅನುದಾನ ನೀಡಲಾಗುವುದು ಸೆಲ್ಕೋ ಸಂಸ್ಥೆಯ ಜೀವನೋಪಾಯ ಇಲಾಖೆ ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಸಾದ್ ಬಿ ಅವರು ತಿಳಿಸಿದ್ದಾರೆ .

. . . . . . .

ಸಾಮಾಜಿಕ ಉದ್ಯಮವಾಗಿರುವ ಸೆಲ್ಕೋ ಸಂಸ್ಥೆಯು ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ನವೀಕರಿಸಬಹುದಾದ ಇಂಧನ ಆಧಾರಿತ ಪರಿಹಾರಗಳನ್ನು ಒದಗಿಸುವ ಮೂಲಕ ಬಡತನ ನಿರ್ಮೂಲನೆಯಲ್ಲಿ ಮಾದರಿಯಾಗಿ ಕೆಲಸ ಮಾಡುತ್ತಿದೆ. ಪರಿಸರಕ್ಕೆ ಪೂರಕವಾದ ಸೌರ ಇಂಧನವನ್ನು ಬಳಸಿಕೊಂಡು ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ ಸುಮಾರು 25 ಸಾವಿರ ಸ್ವ ಉದ್ಯೋಗಿಗಳನ್ನು ಸೃಷ್ಠಿಸುವ ನಿಟ್ಟಿನಲ್ಲಿ ಸೆಲ್ಕೋ ಸಂಸ್ಥೆಯು ಕೆಲಸ ಮಾಡುತ್ತಿದ್ದು ಈ ಗುರಿಯ ಅಂಗವಾಗಿ ಸುಳ್ಯ ತಾಲೂಕಿನಲ್ಲಿ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ವ್ಯಾಪಾರಿಗಳಿಗೆ ಸ್ವ ಉದ್ಯೋಗ ತರಬೇತಿ ಕಾರ್ಯಗಳನ್ನು ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಯೋಜನೆ ಅಡಿಯಲ್ಲಿ ಸೋಲಾ‌ರ್ ಆಧಾರಿತ ಹಪ್ಪಳ, ರೊಟ್ಟಿ, ಚಿಪ್ಸ್, ಪಾನಿಪುರಿ ತಯಾರಿಕಾ ಯಂತ್ರ, ಸೋಲಾ‌ರ್ ಆಧಾರಿತ ಫ್ರಿಡ್ಜ್, ಟೈಲರಿಂಗ್ ಮೆಶಿನ್ , ಹಾಲುಕರೆಯುವ ಯಂತ್ರ, ಕಬ್ಬಿನ ಹಾಲು ಯಂತ್ರ, ಕೋಳಿ,ಹಂದಿ ಮೀನು ಸಾಕಾಣಿಕೆ ಘಟಕಕ್ಕೆ ಸೋಲಾರ್ ಅಳವಡಿಕೆ , ಬೀದಿವ್ಯಾಪಾರ,ಮೊಬೈಲ್ ಕ್ಯಾಂಟೀನ್ ಅಳವಡಿಕೆ ಹಾಗೂ ಗ್ರಾಹಕರ ಅವಶ್ಯಕತೆ ಗಳಿಗೆ ಅನುಸಾರವಾಗಿ ಹೋಟೆಲ್, ಗ್ರಾಹಕರ ಕೇಂದ್ರ , ಮೆಡಿಕಲ್ ಶಾಪ್ ಗಳಿಗೆ ಸೆಲ್ಕೋ ಉಪಕರಣ ಸಜ್ಜುಗೊಳಿಸುತ್ತಿದ್ದು ಈ ಯೋಜನೆ ವಿದ್ಯುತ್ ಸಮಸ್ಯೆಯಿಂದ ಗ್ರಾಮೀಣ ಹಾಗೂ ನಗರ ಭಾಗವನ್ನು ಮುಕ್ತಗೊಳಿಸುವುದಲ್ಲದೆ ನವೀಕರಿಸಬಹುದಾದ ಇಂಧನ ದಿಂದ ಸುಸ್ಥಿರತೆಯನ್ನು ಕಾಪಾಡಬಹುದು ತಂತ್ರ ಜ್ಞಾನ ಮುಖಾಂತರ ಒಳ್ಳೆಯ ಸಂಪನ್ಮೂಲ ಸೃಸ್ಠಿ ಮಾಡಿ ಗ್ರಾಮೀಣ ಪ್ರದೇಶದ ಆರ್ಥಿಕತೆಯ ಅಡಿಪಾಯವನ್ನು ಬಲ ಪಡಿಸಬಹುದು ಎಂಬ ದೂರ ದೃಷ್ಟಿಯಿಂದ ಈ ಯೋಜನೆ ಆರಂಭಿಸಲಾಗಿದ್ದು ಇದರ ಸದುಪಯೋಗವನ್ನು ಸ್ವ ಉದ್ಯೋಗಿಗಳು ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!