ರಾಷ್ಟ್ರೀಯ ಲಗೋರಿ ಅಸೋಸಿಯೇಷನ್ ವತಿಯಿಂದ ಸುಳ್ಯದಲ್ಲಿ ಫೆಬ್ರವರಿ 9 ಮತ್ತು 10 ರಂದು ನಡೆಸಲು ನಿರ್ಧರಿಸಲಾಗಿದ್ದ ರಾಷ್ಟ್ರೀಯ ಲಗೋರಿ ಪಂದ್ಯಾಟವನ್ನು ಮುಂದಿನ ಎಪ್ರಿಲ್ 13 ಮತ್ತು 14 ರಂದು ನಡೆಸಲು ನಿರ್ಧರಿಸಲಾಗಿದೆ.
ಇಂದು ಸುಳ್ಯ ತಾ.ಪಂ. ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಲಗೋರಿ ಸಂಘಟನಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
” ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯ ಲಗೋರಿ ಅಸೋಸಿಯೇಷನ್ ನವರು ಫೆಬ್ರವರಿ ತಿಂಗಳಲ್ಲಿ ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಗಳಿರುವುದರಿಂದ ಭಾಗವಹಿಸಲು ಕಷ್ಟವಾಗುವುದಾಗಿ ಹೇಳಿದ್ದಾರೆ” ಎಂದು ಲಗೋರಿ ಅಸೋಸಿಯೇಷನ್ ಅಧ್ಯಕ್ಷ ರಾದ ದೊಡ್ಡಣ್ಣ ಬರೆಮೇಲು ಹೇಳಿದರು. ಬಳಿಕ ಚರ್ಚೆ ನಡೆದು ಲೋಕಸಭಾ ಚುನಾವಣೆಗಿಂತ ಮೊದಲು ಎಪ್ರಿಲ್ 13 ಮತ್ತು 14 ರಂದು ರಾಷ್ಟ್ರೀಯ ಲಗೋರಿ ಪಂದ್ಯಾಟ ನಡೆಸಲು ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘಟನಾ ಸಮಿತಿ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಹರೀಶ್ ಉಬರಡ್ಕ, ಗೌರವಾಧ್ಯಕ್ಷ ಎನ್ ಎ ರಾಮಚಂದ್ರ ವೇದಿಕೆಯಲ್ಲಿದ್ದರು.
ದಿನೇಶ್ ಮಡಪ್ಪಾಡಿ, ಪಿ ಎಸ್ ಗಂಗಾಧರ್, ಕೆ.ಎಂ ಮುಸ್ತಾಫ, ಗೋಕುಲ್ ದಾಸ್, ಡಾ.ಜ್ಞಾನೇಶ್ ಎನ್ ಎ, ಹರೀಶ್ ಬಂಟ್ವಾಳ್, ಹರಿಪ್ರಕಾಶ್ ಅಡ್ಕಾರ್, ಭವಾನಿಶಂಕರ್ ಕಲ್ಮಡ್ಕ, ಶಾಫಿ ಕುತ್ತಮೊಟ್ಟೆ, ತೀರ್ಥವರ್ಣ ಬಳ್ಳಡ್ಕ , ನಿತೀನ್ ಮಜಿಕೋಡಿ ಉಪಸ್ಥಿತರಿದ್ದರು.