
ಮಂಗಳೂರು:-ಯಾಮೊಟೋ ಶೋಟೋಕಾನ್ ಕರಾಟೆ ಅಸೋಸಿಯನ್ನ್ ಟ್ರಸ್ಟ್ ಮಂಗಳೂರು ಹಾಗೂ ರೋಟರಿ ಕ್ಲಬ್ ಲೊರೊಟೊ ಹಿಲ್ಸ್ ಬಂಟ್ವಾಳ, ರೋಟರಿ ಕ್ಲಬ್ ಸಿದ್ದಕಟ್ಟೆ,ಪಲ್ಗುಣಿ ರೋಟರಿ ಕ್ಲಬ್,ಬಿ.ಸಿ ರೋಡು ಸಿಟಿ ವತಿಯಿಂದ ಬಿ.ಸಿ ರೋಡ್ ಸ್ಪರ್ಶ ಕಲಾಮಂದಿರದಲ್ಲಿ 14 ರಂದು ನಡೆದ ಪ್ರಥಮ ರಾಜ್ಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್ ಶಿಪ್ 2024 ರ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ದಿಯಾ ಡಿ.ಎಸ್ ಪ್ರಥಮ ಸ್ಥಾನ ಪಡೆದಿದ್ದಾರೆ.
ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಪ್ ಮಾರ್ಷಲ್ ಆಟ್ಸ್ ವತಿಯಿಂದ ಮಂಗಳೂರಿನ ಜೆಪ್ಪುವಿನಲ್ಲಿ ನಡೆಯಿತು.ಎರಡನೇ ಚಾಂಪಿಯನ್ ಶಿಪ್ 2024ರ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿರುತ್ತಾರೆ.ಕಲಿಕೆಯಲ್ಲೂ ಮುಂದಿರುವ ಈಕೆ ಚೆಸ್ ಆಟದಲ್ಲಿಯೂ ಕೂಡ ಅನೇಕ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.ಇವರು ಸುಳ್ಯ ತಾಲೂಕು ಕಲ್ಮಕಾರು ಗ್ರಾಮದ ದಬ್ಬಡ್ಕ ನಿವಾಸಿ ಸುರೇಶ್ ದಬ್ಬಡ್ಕ ಹಾಗೂ ಜ್ಯೋತಿಸುರೇಶ್ ದಂಪತಿಯ ಪುತ್ರಿ.
