Ad Widget

ಜ.21 ರಿಂದ 27ರ ತನಕ ಬೆಳ್ಳಾರೆ ಮಖಾಂ ಉರೂಸ್7ದಿನಗಳ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮ 27 ರಂದು ರಾಜ್ಯ ಮಟ್ಟದ ಧಫ್ ಸ್ಪರ್ಧೆ.

ಇತಿಹಾಸ ಪ್ರಸಿದ್ಧ ಹಝ್ರತ್ ವಲಿಯುಲ್ಲಾಹಿ ಬೆಳ್ಳಾರೆ ಮಖಾಂ ಉರೂಸ್ ಸಮಾರಂಭ ಜ.21ರಿಂದ 27ರ ತನಕ ನಡೆಯಲಿದೆ. ಉರೂಸ್ ಸಮಾರಂಭದಲ್ಲಿ ಸುಪ್ರಸಿದ್ಧ ವಿದ್ವಾಂಸರು, ಸಾದಾತುಗಳು, ಸೂಫಿವರ್ಯರು ಭಾಗವಹಿಸಲಿದ್ದಾರೆ ಎಂದು ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಆಡಳಿತ ಸಮಿತಿ ಹಾಗೂ ಉರೂಸ್ ಸ್ವಾಗತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

. . . . .

ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆಸ ಸುದ್ದಿಗೋಷ್ಠಿಯಲ್ಲಿ ಉರೂಸ್ ಸ್ವಾಗತ ಸಮಿತಿ ಕಾರ್ಯದರ್ಶಿ ಯು.ಪಿ.ಬಶೀರ್ ಬೆಳ್ಳಾರೆ ಕಾರ್ಯಕ್ರಮದ ಮಾಹಿತಿ ನೀಡಿದರು.

ಜ.21 ರಂದು ಪೂ.9ಕ್ಕೆ ಅಸ್ಸಯ್ಯದ್ ಝೈನುಲ್ ಅಭಿದೀನ್ ಜಿಫ್ರಿ ತಂಙಳ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಸಂಜೆ ಮಗ್ರೀಬ್ ನಮಾಝ್ ಬಳಿಕ ಅಸ್ಸಯದ್ ಅಲೀ ತಂಙಳ್ ಕುಂಬೋಳ್ ಉದ್ಘಾಟನೆ ಮತ್ತು ದುವಾ ನೆರವೇರಿಸುವರು. ಬೆಳ್ಳಾರೆ ಜೆಎಂಜೆ ಅಧ್ಯಕ್ಷ ಯು.ಎಚ್.ಅಬೂಬಕ್ಕರ್ ಹಾಜಿ ಮಂಗಳ ಅಧ್ಯಕ್ಷತೆ ವಹಿಸುವರು. ‘ಔಲಿಯಾಗಳ ಲೋಕ’ ಎಂಬ ವಿಷಯದಲ್ಲಿ ಹನೀಫ್ ನಿಝಾಮಿ ಮೊಗ್ರಾಲ್ ಮುಖ್ಯ ಪ್ರಭಾಷಣ ಮಾಡುವರು. ಅಸ್ಸಯ್ಯದ್ ಅಲವಿ ತಂಙಳ್ ಮಾಸ್ತಿಕುಂಡ್ ಉಪಸ್ಥಿತರಿತರಿರುವರು. ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಜ.22 ರಂದು ಸಂಜೆ ಮಗ್ರೀಬ್ ನಮಾಜ್ ಬಳಿಕ ಅಸಯ್ಯದ್ ಅಹಮ್ಮದ್ ಪೂಕೋಯ ತಂಙಳ್ ಪುತ್ತೂರು ದುವಾ ನೆರವೇರಿಸುವರು. ‘ಕೌಟುಂಬಿಕ ಜೀವನ ಇಸ್ಲಾಮಿನಲ್ಲಿ’ ಎಂಬ ವಿಷಯದಲ್ಲಿ ಶಮೀರ್ ದಾರಿಮಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡುವರು.

ಜ.23 ರಂದು ಸಂಜೆ ಅಸ್ಸಯ್ಯದ್ ಅಶ್ರಫ್ ತಂಙಳ್ ಆದೂರು ದುವಾ ನೆರವೇರಿಸುವರು. ‘ಆತ್ಮ ಸಂಸ್ಕರಣೆ’ ಎಂಬ ವಿಷಯದಲ್ಲಿ ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣ ಮಾಡುವರು.
ಜ.24ರಂದು ಸಂಜೆ ನೂರೇ ಮಜ್ಲಿಸ್ ಆತ್ಮೀಯ ಮಜ್ಲಿಸ್ ನಡೆಯಲಿದೆ. ಕೋಝಿಕೋಡ್ ಖಾಜಿ ಅಸ್ಸಯ್ಯದ್ ಮಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ದುವಾ ನೆರವೇರಿಸುವರು. ಉಸ್ತಾದ್ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವ ವಹಿಸುವರು. ಜ.25ರಂದು ಸಂಜೆ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ ಖಾದರ್ ಅಲ್‌ಖಾಸಿಮಿ ಬಂಬ್ರಾಣ ನೇತೃತ್ವದಲ್ಲಿ ಮಜ್ಲಿಸುನ್ನೂರ್ ನಡೆಯಲಿದೆ. ಅಸ್ಸಯ್ಯದ್ ಮುಖ್ತಾರ್ ತಂಙಳ್ ಕುಂಬೋಳ್ ದುವಾ ನೆರವೇರಿಸುವರು. ಪಶ್ಚಾತಾಪ(ತೌಬಃ) ಎಂಬ ವಿಷಯದಲ್ಲಿ ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ಮುಖ್ಯ ಪ್ರಭಾಷಣ ಮಾಡುವರು‌.
ಜ.26 ರಂದು ಜುಮಾ ನಮಾಜ್ ಬಳಿಕ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನ್ ಫೈಝಿ ತೋಡಾರ್ ನೇತೃತ್ವದಲ್ಲಿ ಖತಮುಲ್ ಖುರ್‌ಆನ್ ನಡೆಯಲಿದೆ.

ಸಂಜೆ ಮಗ್ರಿಬ್ ನಮಾಝ್ ಬಳಿಕ ನಡೆಯುವ ಸಮಾರಂಭದಲ್ಲಿ ದ.ಕ‌.ಜಿಲ್ಲಾ ಖಾಝಿ ಶೈಖುನಾ ತ್ವಾಖ ಅಹಮ್ಮದ್ ಮುಸ್ಲಿಯಾರ್ ದುವಾ ನೆರವೇರಿಸುವರು. ‘ಪ್ರಧಿಸಂಧಿ ಗಟ್ಟತ್ತಿಲೆ ಮುಸ್ಲೀಂ’ ಎಂಬ ವಿಷಯದಲ್ಲಿ ಅಬ್ದುಲ್ ರಝಾಕ್ ಅಬ್ರಾರಿ ಮುಖ್ಯ ಪ್ರಭಾಷಣ ಮಾಡುವರು.

ಜ.27ರಂದು ಬೆಳಿಗ್ಗಿನಿಂದ ರಾಜ್ಯ ಮಟ್ಟದ ದಫ್ ಸ್ಪರ್ಧೆ ನಡೆಯಲಿದೆ. ಸಂಜೆ ನಡೆಯುವ ಸಮಾರೋಪ ಸಮಾರಂಭವನ್ನು ಸಮಸ್ತ ಕೇಂದ್ರ ಜಮ್ಯುತುಲ್ ಉಲಮಾ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಜಿಪ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸುವರು. ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಅಧ್ಯಕ್ಷತೆ ವಹಿಸುವರು‌. ಅಸ್ಸಯ್ಯದ್ ಝೈನುಲ್ ಅಬಿದೀನ್ ತಂಙಳ್ ದುಗ್ಗಲಡ್ಕ ದುವಾ ನೆರವೇರಿಸುವರು. ಸಮಸ್ತ ಕೇಂದ್ರ ಮುಶಾವರ ಸದಸ್ಯರು ಹಾಗೂ ನಾಯಿಬ್ ಖಾಝಿ ಕೊಡಗು ಜಿಲ್ಲೆ ಶೈಖುನಾ ಎಂ.ಎಂ.ಅಬ್ದುಲ್ಲ ಉಸ್ತಾದ್ ಗೌರವ ಉಪಸ್ಥಿತರಿರುವರು. ‘ದಾರಿ ತಪ್ಪುತ್ತಿರುವ ಯುವ ಸಮೂಹ’ ಎಂಬ ವಿಷಯದಲ್ಲಿ ಆಶಿಕ್ ದಾರಿಮಿ ಆಲಪ್ಪುಝ ಮುಖ್ಯ ಪ್ರಭಾಷಣ ಮಾಡುವರು.

ಮುಖ್ಯ ಅತಿಥಿಗಳಾಗಿ ಸ್ಪೀಕರ್ ಯು.ಟಿ.ಖಾದರ್, ವಕ್ಫ್ ಮತ್ತು ಅಲ್ಪ‌ ಸಂಖ್ಯಾತ ಸಚಿವರಾದ ಬಿ.ಝಡ್.ಜಮೀರ್ ಅಹ್ಮದ್ ಖಾನ್, ಮುನ್ಸಿಪಲ್ ಆಡಳಿತ ಹಜ್ ಸಚಿವ ರಹೀಂ ಖಾನ್, ಕರ್ನಾಟಕ ವಕ್ಪ್ ಬೋರ್ಡ್ ಚೆಯರ್‌ಮೆನ್ ಅನ್ವರ್ ಪಾಷ ಭಾಗವಹಿಸಲಿದ್ದಾರೆ. ಪ್ರತಿ ದಿನ ನಡೆಯುವ ಸಮಾರಂಭದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದ‌ ಪ್ರಮುಖರು ಭಾಗವಹಿಸಲಿದ್ದಾರೆ
ಎಂದು ಯು.ಪಿ.ಬಶೀರ್ ಬೆಳ್ಳಾರೆ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಝಕಾರಿಯಾ ಜುಮಾ ಮಸೀದಿಯ ಅಧ್ಯಕ್ಷ ಯು.ಎಚ್.ಅಬೂಬಕ್ಕರ್ ಹಾಜಿ ಮಂಗಳ, ಉರೂಸ್ ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಜಮಾ ಅತ್ ಕಾರ್ಯದರ್ಶಿ ಬಶೀರ್ ಕಲ್ಲಪಣೆ, ಉರೂಸ್ ಸಮಿತಿ ಉಪಾಧ್ಯಕ್ಷ ಜಮಾಲುದ್ದೀನ್ ಕೆ.ಎಸ್, ಜೊತೆ ಕಾರ್ಯದರ್ಶಿ ಬಶೀರ್ ಕೆ.ಎ., ಹಿರಿಯರಾದ ಹಂಸ‌ ಮುಸ್ಲಿಯಾರ್ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!