ಅಜ್ಜಾವರ ಗ್ರಾಮದ ಮೇದಿನಡ್ಕದಲ್ಲಿ ಸಂಭ್ರಮದ ಪೊಂಗಲ್ ಆಚರಣೆ ವಿಜೃಂಭಣೆಯಿಂದ ನಡೆಯಿತು, ಡಿಸೆಂಬರ್ 17 ರ ಧನು ಮಾಸ 1ರಿಂದ ಶ್ರೀ ರಾಮ ದೇವರ ಭಜನೆ ನಿರಂತರ ಒಂದು ತಿಂಗಳ ಕಾಲ ಸ್ಥಳೀಯ ಭಕ್ತಾದಿಗಳ ವ್ರತಾಚಾರಣೆಯೊಂದಿಗೆ ನಡೆದು ಮಕರ ಸಂಕ್ರಾಂತಿಯಂದು ಕೊನೆಗೊಂಡಿತು,ಜ 15 ರಂದು ವಿಜೃಂಭಣೆಯ ಪೊಂಗಲ್ ಆಚರಣೆ ಪ್ರಯುಕ್ತ ದೇವರ ಪಲ್ಲಕ್ಕಿ ಉತ್ಸವ,ಮನೆ ಭಜನಾ ಸಂಕೀರ್ತನೆ ನಡೆದು ಬಳಿಕ ಮಧ್ಯಾಹ್ನ ಮಹಾಪೂಜೆಯೊಂದಿಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು, ಈ ಸಂದರ್ಭದಲ್ಲಿ ಊರ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.
- Thursday
- November 21st, 2024