Ad Widget

ಸುಬ್ರಹ್ಮಣ್ಯ : ಪ್ರತಿ ಆದಿತ್ಯವಾರ ಸ್ವಚ್ಛತಾ ಸೇವೆಗೆಯ್ಯುತ್ತಿರುವ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್

ಸುಬ್ರಹ್ಮಣ್ಯ ಜ14: ಸುಬ್ರಹ್ಮಣ್ಯದ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ರವಿವಾರದಂದು ಕುಮಾರಧಾರ ದಿಂದ ದೇವಿ ದೇವಸ್ಥಾನದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ಶ್ರೀ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು ದೇವರ ದರ್ಶನ ಪಡೆಯುವುದರೊಂದಿಗೆ ಪುನೀತರಾಗುತ್ತಿದ್ದಾರೆ. ಭಕ್ತಾದಿಗಳು ದೂರದ ಊರಿನಿಂದ ಬೇರೆ ಬೇರೆ ಕ್ಷೇತ್ರಗಳಿಂದ ವಾಹನಗಳಲ್ಲಿ ಆಗಮಿಸುವಂತಹ ಸಂದರ್ಭದಲ್ಲಿ ಮಾರ್ಗದ ಇಕ್ಕಲೆಗಳಲ್ಲಿ ಬಹಳಷ್ಟು ಕಸ ಕಡ್ಡಿಗಳು, ಪ್ಲಾಸ್ಟಿಕ್ ಬಾಟಲಿಗಳು, ನೀರಿನ ಕ್ಯಾನುಗಳು ಹಾಗೂ ಆಹಾರದ ಪಟ್ಟಣಗಳನ್ನು ಎಸೆದು ಪರಿಸರವನ್ನು ಮಾಲಿನ್ಯ ಮಾಡವುದು ಕಂಡುಬರುತ್ತಿದೆ. ಇದನ್ನು ಮನಗಂಡ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಡಾ. ರವಿ ಕಕ್ಕೆ ಪದವು ಹಾಗೂ ಸಮಾಜದ ಸೇವಾ ಟ್ರಸ್ಟ್ ಸದಸ್ಯರು ತನ್ನ ಸ್ವಯಂಸೇವಕರೊಂದಿಗೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾರೆ. ಕುಮಾರ ದಾರದಿಂದ ದೇವಿ ದೇವಸ್ಥಾನದ ಪರಿಸರದವರೆಗೆ ಸ್ವಚ್ಛತೆ ಮಾಡುವುದರೊಂದಿಗೆ ಸೇವಾ ಕಾರ್ಯವನ್ನು ಕೈಗೊಂಡರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading