
ಸೋಣಂಗೇರಿ ಪೇಟೆಯಲ್ಲಿ ಹಾಕಲಾದ ಅಯೋಧ್ಯೆ ರಾಮ ಮಂದಿರಕ್ಕೆ ಶುಭ ಕೋರುವ ಬ್ಯಾನರ್ ನಲ್ಲಿ ಹಾಕಲಾದ ಹೆಸರಿಗೆ ಮಸಿ ಬಳಿದಿರುವ ಘಟನೆ ನಡೆದಿದೆ. ಅಯೋಧ್ಯೆ ರಾಮ ಮಂದಿರಕ್ಕೆ ಶುಭಕೋರುವ ಬ್ಯಾನರ್ ಗೆ ಸುಳ್ಯ ಪೇಟೆ ಹಾಗೂ ಅಡ್ಕಾರ್ ನಲ್ಲಿ ಹಾನಿಯಾದ ಬಳಿಕ ಇದೀಗ ಸೋಣಂಗೇರಿಯಲ್ಲೂ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಬ್ಯಾನರ್ ನಲ್ಲಿ 15 ಹೆಸರುಗಳಿದ್ದು, ಒಂದು ಹೆಸರು ಬಿಟ್ಟು ಉಳಿದೆಲ್ಲಾ ಹೆಸರಿಗೆ ಮಸಿ ಬಲಿದಿರುವುದಾಗಿ ತಿಳಿದುಬಂದಿದೆ.
ಶ್ರೀರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಬ್ಯಾನರ್ ಗಳಿಗೆ ಕಿಡಿಗೇಡಿಗಳು ಹಾನಿ ಮಾಡಿ ರಾಮಭಕ್ತರ ಮನಸ್ಸಿಗೆ ನೋವುಪಡಿಸಬಹುದು ಆದರೆ ರಾಮನ ಮೇಲಿರುವ ಭಕ್ತಿಗಾಗಲಿ ಶ್ರೀರಾಮ ಮಂದಿರ ಲೋಕಾರ್ಪಣೆಯ ಕಾರ್ಯಕ್ರಮವನ್ನು ರದ್ದುಗೊಳಿಸಲು ಇಂತಹ ವಿಕೃತ ಮನಸ್ಸಿನವರಿಗೆ ಸಾಧ್ಯವಿಲ್ಲ ಎಂದು ವಿಶ್ವಹಿಂದು ಪರಿಷಧ್ ಮತ್ತು ಭಜರಂಗದಳ ಸುಳ್ಯ ನಗರ ಸಮಿತಿ ತಿಳಿಸಿದ್ದಾರೆ.