Ad Widget

ರಾಮ ಮಂದಿರ ಪ್ರಾಣಪ್ರತಿಷ್ಟೆ ಮುಜರಾಯಿ ದೇವಾಲಯಗಳಲ್ಲಿ ಪೂಜೆಗೆ ಆದೇಶ ಸ್ವಾಗತಾರ್ಹ – ಬ್ಲಾಕ್ ಕಾಂಗ್ರೆಸ್

ಬ್ಯಾನರ್ ಹರಿದ ಪ್ರಕರಣ ಕಳ್ಳತನ ಪ್ರಕರಣಗಳ ಸತ್ಯ ತಿಳಿಸದ ಪೋಲೀಸರ ಮೇಲೆ ಅಸಮಾಧಾನ, ಉಸ್ತುವಾರಿ ಸಚಿವರಿಗೆ ದೂರು ನೀಡಲು ಬ್ಲಾಕ್ ಕಾಂಗ್ರೆಸ್ ತೀರ್ಮಾನ

. . . . .

ಸುಳ್ಯ ತಾಲೂಕಿನ ನಾನ ಭಾಗದಲ್ಲಿ ನಡೆಯತ್ತಿರುವ ಕಳ್ಳತನ ಹಾಗೂ ಇತರೆ ವಿಚಾರಗಳ ಕುರಿತಾಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯು ಇಂದು ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಯನ್ ಜಯಪ್ರಕಾಶ್ ರೈ ಮಾತನಾಡುತ್ತ ದೇಶ ಎಂದರೆ ಮುಂದಿನ ದಿನಗಳಲ್ಲಿ ರಾಮ ಮಂದಿರದ ಹೆಸರಿನಲ್ಲಿ ಹೆಗ್ಗಳಿಕೆ ಕೊಡಲಿದೆ. ಸಂವಿಧಾನದ ಅಡಿಯಲ್ಲಿ ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಕಾಲದಲ್ಲಿ ಮಂದಿರ ನಿರ್ಮಾಣವಾಗಿದೆ ಅಲ್ಲದೆ ಈ ಹಿಂದೆ ಬಾಗಿಲು ತೆಗೆಯಲು ಮತ್ತು ಪೂಜೆಗೆ ರಾಜೀವ ಗಾಂಧಿಯವರು ಅವಕಾಶ ಕಲ್ಪಿಸಿದ್ದರು ಎಂದು ಹೇಳಿದರು . ಅಲ್ಲದೆ ರಾಜ್ಯದ ಸಿದ್ದರಾಮಯ್ಯ ಸರಕಾರವು ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲು ಆದೇಶ ಹೊರಡಿಸಿರುವುದು ಸ್ವಾಗತಾರ್ಹ ನಿಲುವು ಆಗಿದೆ ಎಂದು ಹೇಳಿದರು. ಬ್ಯಾನರ್ ಹರಿದ ಪ್ರಕರಣಗಳಲ್ಲಿ ಪೋಲೀಸ್ ಇಲಾಖೆ ಇಲ್ಲಿಯ ತನಕ ಸ್ಪಸ್ಟವಾದ ಆರೋಪಿಗಳನ್ನು ಪತ್ತೆ ಹಚ್ಚಿ ಸಮಾಜಕ್ಕೆ ತೋರಿಸದೇ ಇರುವುದು ಸರಿಯಲ್ಲ ಕೂಡಲೇ ತಿಳಿಸಬೇಕು ಅಲ್ಲದೆ ಬಿಜೆಪಿ ಗಡುವು ನೀಡಿ ಇದೀಗ ಸೈಲೆಂಟ್ ಆಗಿರುವುದು ಸಂಶಯ ಮೂಡಿಸುತ್ತಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ ಮಾತನಾಡುತ್ತಾ ಪೋಲೀಸ್ ಇಲಾಖೆಯು ಈ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ ಇದರ ಕುರಿತಾಗಿ ನಾವು ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿಳಿಸುತ್ತೇವೆ ಮತ್ತು ಇದರ ಕುರಿತಾಗಿ ಇಂದು ಪೋಲೀಸ್ ಇಲಾಖೆಗೆ ನಿಯೋಗ ತೆರಳಿ ಪತ್ತೆ ಹಚ್ಚುವಂತೆ ತಿಳಿಸುತ್ತೆವೆ ಎಂದು ಹೇಳಿದರು .

ಎಂ ವೆಂಕಪ್ಪ ಗೌಡ ಮಾತನಾಡುತ್ತಾ ರಾಜ್ಯದ ಸಿದ್ದರಾಮಯ್ಯ ಸರಕಾರ ಪೂಜೆಗೆ ಅವಕಾಶ ನೀಡಿರುವುದು ಸ್ವಾಗತಾರ್ಹ ಅಲ್ಲದೆ ಇದರಲ್ಲಿ ರಾಜಕೀಯ ಉಪಯೋಗ ಪಡೆಯುವುದು ಸರಿಯಲ್ಲ ಎಂದು ಹೇಳಿದರು . ಬರ್ಮದಿಂದ ಕಳ್ಳ ದಾರಿಯಲ್ಲಿ ಅಡಿಕೆ ಸಾಗಾಟವಾಗುತ್ತಿರುವ ವಿಚಾರವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ರೈತರ ಪರವಾಗಿ ಸರಕಾರ ಇದೆ ಎಂದು ಹೇಳಿದರು.

ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ ಮಾತನಾಡುತ್ತಾ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಅಧಿಕಾರಿಗಳು ತೆರಳಿದ್ದು ಅವರಿಗೆ ಪರಿಹಾರ ನೀಡುವ ವಿಚಾರವನ್ನು ಮಾಡುತ್ತೆವೆ ಅಲ್ಲದೆ ಬಂದಾಗ ಫೋಟೋಗಳಿಗೆ ಫೋಸ್ ಕೊಡಲು ಮಾತ್ರ ಕೆಲವರು ಆ ಸಂದರ್ಭದಲ್ಲಿ ಬರುತ್ತಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗೋಕುಲ್ ದಾಸ್, ಸತ್ಯಕುಮಾರ್ ಆಡಿಂಜ, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ನಂದರಾಜ್ ಸಂಕೇಶ ಮತ್ತಿತರರು ಉಪಸ್ಥಿತರಿದ್ದರು.

Related Posts

error: Content is protected !!