Ad Widget

ಜ. 17: ಮಂಡೆಕೋಲು ಪ್ರಾ.ಕೃ.ಪ.ಸ.ಸಂಘದ ಪೇರಾಲು – ಅಂಬ್ರೋಟಿ ನವೀಕೃತ ಶಾಖೆಯ ಉದ್ಘಾಟನೆ

ಸುಳ್ಯ : ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪೇರಾಲು – ಅಂಬ್ರೋಟಿ ಶಾಖೆಯ ಗೋದಾಮು ಕಟ್ಟಡ, ಮಲ್ಟಿ ಸರ್ವಿಸ್ ಸೆಂಟರ್ ಹಾಗೂ ನವೀಕೃತ ಶಾಖೆಯ ಉದ್ಘಾಟನಾ ಸಮಾರಂಭವು ಜ.17ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪೇರಾಲುಗುತ್ತು ರಾಮಕೃಷ್ಣ ರೈ ತಿಳಿಸಿದ್ದಾರೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಎಂ. ಎನ್. ರಾಜೇಂದ್ರ ಕುಮಾರ್ ಅವರು ನವೀಕೃತ ಶಾಖೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ದೀಪ ಪ್ರಜ್ವಲನೆ ಮಾಡಲಿದ್ದಾರೆ‌. ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು ಗೋದಾಮನ್ನು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಲ ಉದ್ದಂತಡ್ಕ, ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಸುಳ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾದ ಪ್ರಭಾಕರ ನಾಯಕ್, ಪುತ್ತೂರು ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ತ್ರಿವೇಣಿ ರಾವ್, ಮಂಡೆಕೋಲು ಪ್ರಾ. ಕೃ. ಪ. ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪಾಂಡುರಂಗ ರಾವ್ ಪುತ್ಯ, ಮಂಡೆಕೋಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ ಮಾವಜಿ, ಹಾಗೂ ತಾಂತ್ರಿಕ ಸಲಹೆಗಾರರಾದ ಶ್ರೀಪಾದ ಕನ್ಸಲ್ಟೆನ್ಸಿಯ ಮಾಲಕರಾದ ಶ್ಯಾಮ್ ಪ್ರಸಾದ್ ಅಡ್ಡಂತಡ್ಕ ಇವರು ಭಾಗವಹಿಸಲಿದ್ದಾರೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಜಿ. ತಿಳಿಸಿದ್ದಾರೆ.
ಸಂಘದ ಉಪಾಧ್ಯಕ್ಷರಾದ ಜಲಜಾ ದೇವರಗುಂಡ, ನಿರ್ದೇಶಕರಗಳಾದ ಈಶ್ವರ ಚಂದ್ರ ಕೆ. ಆರ್. ಚಂದ್ರಜಿತ್ ಮಾವಂಜಿ, ಪದ್ಮನಾಭ ಚೌಟಾಜೆ, ಭಾರತಿ ಉಗ್ರಾಣಿಮನೆ, ಮೋನಪ್ಪ ನಾಯ್ಕ್ ಬೇಂಗತ್ತಮಲೆ, ಸುರೇಶ್ ಕಣೆಮರಡ್ಕ, ಭಾಸ್ಕರ್ ಮಿತ್ತಪೇರಾಲು, ಸರಸ್ವತಿ ಕಣೆಮರಡ್ಕ, ರವಿ ಚೇರದಮೂಲೆ, ಸುನಿಲ್ ಪಾತಿಕಲ್ಲು ಹಾಗೂ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಪುತ್ಯ ಇವರು ಉಪಸ್ಥಿತರಿರುತ್ತಾರೆ.
ಈ ನವೀಕೃತ ಶಾಖೆಯಲ್ಲಿ ಪೇರಾಲು – ಅಂಬ್ರೋಟಿ ಭಾಗದ ಸದಸ್ಯರಿಗೆ ಮುಖ್ಯ ಕಚೇರಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಎಂದು ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ತಿಳಿಸಿದ್ದಾರೆ.

. . . . .

Related Posts

error: Content is protected !!