ಸ್ವಾಮಿ ವಿವೇಕಾನಂದರ 162ನೇ ಜಯಂತಿ ಆಚರಣೆಯು ಜ.12ರಂದು ಸುಳ್ಯದ ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣ ಸಮಿತಿ ಇದರ ಆಶ್ರಯದಲ್ಲಿ ಸುಳ್ಯದ ಅಂಬೇಟಡ್ಕದಲ್ಲಿ ನಡೆಯಿತು.
ಸುಳ್ಯದ ಹೆಚ್.ಇ.ಎಫ್. ಅಧ್ಯಕ್ಷ ಚಿದಾನಂದ ವಿದ್ಯಾನಗರ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಹಾರಾರ್ಪಣೆಗೈದರು. ಹೆಚ್.ಇ.ಎಫ್. ಸ್ಥಾಪಕಾಧ್ಯಕ್ಷ ಕೇಶವ ನಾಯಕ್, ನ.ಪಂ. ಸದಸ್ಯರುಗಳಾದ ಶೀಲಾ ಕುರುಂಜಿ, ಕಿಶೋರಿ ಶೇಟ್ ಮುಖ್ಯ ಅತಿಥಿಗಳಾಗಿದ್ದರು. ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ಎಂ.ಬಿ.ಫೌಂಡೇಶನ್ ಅಧ್ಯಕ್ಷ ಎಂ.ಬಿ.ಸದಾಶಿವ, ನ.ಪಂ. ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಚಕ್ರಪಾಣಿ ವಾಗ್ಲೆ, ಜನಾರ್ದನ ದೋಳ, ಪ್ರತಿಮೆ ನಿರ್ಮಾಣ ಸಮಿತಿ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಮೇನಾಲ, ಕೋಶಾಧಿಕಾರಿ ಹೇಮಂತ್ ಕಾಮತ್, ಸುಬೋದ್ ಶೆಟ್ಟಿ ಮೇನಾಲ, ವಿಕ್ರಂ ಅಡ್ಪಂಗಾಯ, ಪದ್ಮನಾಭ ಪಾತಿಕಲ್ಲು, ಆನಂದ ಪಾತಿಕಲ್ಲು, ಬಾಲಕೃಷ್ಣ ಪಾತಿಕಲ್ಲು, ಪದ್ಮಕುಮಾರ್, ಯಶೋದಾ ರಾಮಚಂದ್ರ, ಶರತ್ ಅಡ್ಕಾರ್, ಸುದರ್ಶನ ಸೂರ್ತಿಲ, ನಾಗೇಶ್ ಶೆಟ್ಟಿ ಮೇನಾಲ, ಚಿದಾನಂದ ಪರಿವಾರಕಾನ, ಪ್ರಬೋಧ್ ಶೆಟ್ಟಿ ಮೇನಾಲ, ಅಶ್ವಥ್, ಹೆಚ್‌ಇಎಫ್ ಕಾರ್ಯದರ್ಶಿ ರಾಮಚಂದ್ರ ಸ್ಥಳೀಯ ಹಾಸ್ಟೆಲ್ ವಿದ್ಯಾರ್ಥಿನಿಯರು ಮೊದಲಾದವರಿದ್ದರು.