‘ಕುವೆಂಪು’ ಈ ಜಗದ ಸೋಜಿಗ. ಬಹುಷ: ಅವರ ‘ವಿಶ್ವಮಾನವತತ್ವ’ ಕುರಿತಾಗಿ ಆದಷ್ಟು ಚರ್ಚೆ ಬೇರೆ ಯಾವ ಸಾಹಿತಿಯ ಬಗ್ಗೆಯೂ ನಡೆದಿಲ್ಲ. ಕನ್ನಡಕ್ಕೆ ಪ್ರಥಮ ‘ಜ್ಙಾನಪೀಠ’ ಪ್ರಶಸ್ತಿ ತಂದುಕೊಟ್ಟ ಈ ಪ್ರಥಮ ‘ರಾಷ್ಟçಕವಿ’, ಮುದ್ರಿತ ಪುಟಗಳಲ್ಲಿ ಸುಮಾರು 40,000 ಪುಟಗಳಾಗುವಷ್ಟು ಕವನ, ಕತೆ, ಲೇಖನ, ವಿಮರ್ಷೆ, ನಾಟಕ, ಕಾದಂಬರಿಗಳನ್ನು (69 ಕೃತಿಗಳು) ಬರೆದವರು. ಅದೂ ಆಧುನಿಕ ಸೌಲಭ್ಯಗಳಾದ ಫ್ಯಾನು, ಫೋನು, ವಿದ್ಯುತ್ ಬೆಳಕು ಯಾಕೆ, ಬಾಲ್ ಪೆನ್ ಕೂಡಾ ಲಭ್ಯವಿಲ್ಲದ ಆ ಕಾಲದಲ್ಲಿ !. ಅವರ ವಿದ್ವತ್ ಜೀವನವು ಈಗಿನ ಯುವಜನಾಂಗಕ್ಕೆ ದಾರಿದೀವಾಗಿದೆ. ಎಂದು ನಿವೃತ್ತ ಸಿ.ಡಿ.ಪಿ.ಓ. ಸಾಹಿತಿ, ಸ್ವಂತಿಕಾ ಸಾಹಿತ್ಯ-ಸಾಂಸ್ಕçತಿಕ ಬಳಗ ಸುಳ್ಯ ಇದರ ಅಧ್ಯಕ್ಷ ನೀರಬಿದಿರೆ ನಾರಾಯಣ ಸುಳ್ಯ (ನೀನಾಸು) ವಿವರಿಸಿದರು.
ಅವರು ಮಡಿಕೇರಿ ತಾಲೂಕು ಪೆರಾಜೆ ಜ್ಯೋತಿ ಪ್ರೌಢಶಾಲಾ ಸಭಾಂಗಣದಲ್ಲಿ ಜರಗಿದ ‘ಕುವೆಂಪು ದಿನಾಚರಣೆ’ ಯಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.
ಶಾಲಾ ವಿದ್ಯಾರ್ಥಿನಿಯರಿಂದ ಕುವೆಂಪುರವರ ‘ಓ ನನ್ನ ಚೇತನ’ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭದ ಅಧ್ಯಕ್ಷತೆಯನ್ನು ಜ್ಯೋತಿ ವಿದ್ಯಾ ಸಂಘ (ರಿ) ಪೆರಾಜೆ ಅಧ್ಯಕ್ಷ ಡಾ. ಎನ್.ಎ.ಜ್ಞಾನೇಶ್ ವಹಿಸಿದ್ದರು. ದೀಪ ಬೆಳಗಿಸಿ ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಮಾರಂಭಕ್ಕೆ ಅವರು ಚಾಲನೆ ನೀಡಿದರು. ಶಾಲಾ ಮುಖ್ಯೋಪಾಧ್ಯಯರಾದ ಶ್ರೀ ಜಿ.ಆರ್. ನಾಗರಾಜು ಸ್ವಾಗತಿಸಿದರು.
ಶ್ರೀ ಹರಿಚÀ್ಚಂದ್ರ ಮುದುಕಜೆ, ಕರ‍್ಯದರ್ಶಿ, ಜ್ಯೋತಿ ವಿದ್ಯಾಸಂಘ (ರಿ) ಪೆರಾಜೆ, ಸಂಪಾಜೆ ಹೋಬಳಿ ಘಟಕ ಕ.ಸ.ಪ. ಅಧ್ಯಕ್ಷ ಶ್ರೀ ಗೋಪಾಲ್ ಪೆರಾಜೆ, ಜ್ಯೋತಿ ವಿದ್ಯಾಸಂಘ (ರಿ) ಪೆರಾಜೆ-ಕೋಶಾಧಿಕಾರಿ ಹಾಗೂ ಅದ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ. ಸುಳ್ಯ ತಾಲೂಕು- ಶ್ರೀ ಲೋಕನಾಥ್ ಅಮೆಚೂರ್, ಮುಖ್ಯ ಅತಿಥಿಗಳಾಗಿ ಸಮಯೋಚಿತವಾಗಿ ಮಾತನಾಡಿದರು. ಶ್ರೀ ಹೊದ್ದೆಟ್ಟಿ ತೀರ್ಥರಾಮ ಇವರು ಕುವೆಂಪು ಬಗೆಗೆ ಬರೆದ ಅರೆಭಾಷೆ ಹಾಡು ಹಾಗೂ ಹಾಡಿದರು.
ಅಧ್ಯಕ್ಷರು ಬಳಿಕ ‘ನೀನಾಸು ಅವರ 15ನೇ ಹಾಗೂ ‘ಸ್ವಂತಿಕಾದ’ 62ನೇ ಕೃತಿ’ ಪ್ರಮಾಣದ (ಅಧಿಕ) ಪ್ರಸಂಗಗಳು, ಹಾಸ್ಯ ಕೃತಿಯನ್ನು ಬಿಡುಗಡೆ ಮಾಡಿ ಕೃತಿಯ ಬಗ್ಗೆ ಮಾತನಾಡಿದರು. ಈ ಸಂದರ್ಭ ‘ ಕುವೆಂಪು’ ಬದುಕು-ಬರಹದ ಬಗ್ಗೆ ಕವನ, ಗಾಯನ, ಭಾಷಣ, ಪ್ರಬಂಧಸ್ಪರ್ದೆ, ೧೦೦ ಆಂಗ್ಲಪದಗಳಿಗೆ ಸಂವಾದಿಯಾಗಿ ಕನ್ನಡ ಶಬ್ದ ಬರೆಯುವ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಪುಸ್ತಕರೂಪದಲ್ಲಿ ಬಹುಮಾನ, ಸ್ಮರಣಿಕೆ ಪ್ರಶಸ್ತಿಪತ್ರ ‘ನೀನಾಸು’ ವತಿಯಿಂದ ಪ್ರದಾನ ಮಾಡಲಾಯಿತು.
ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ನರೇಂದ್ರ, ಶಾಲಾ ಮಕ್ಕಳು. ಮಕ್ಕಳ ಪಾಲಕರು, ಕೋಟೆ ಪೆರಾಜೆ ಅಂಗನವಾಡಿ ಕರ‍್ಯಕರ್ತೆ ಶ್ರೀಮತಿ ಉಷಾ, ನೀನಾಸು ಪತ್ನಿ ಗಾಯಕಿ ಶ್ರೀಮತಿ ಗೀತಾ ಸರಸ್ವತಿ, ಶಾಲಾ ಉಪಾಧ್ಯಾಯನಿಯರು ಹಾಜರಿದ್ದರು. ಅಧ್ಯಾಪಿಕೆ ಶ್ರೀಮತಿ ಸುಮನ ವಂದಿಸಿದರು. ನಿರ್ದೇಶಕ ಶ್ರೀ ಅಶೋಕ್ ಪೀಚೆ ಕರ‍್ಯಕ್ರಮ ನಿರೂಪಣೆ ಮಾಡಿದರು. ಬಳಿಕ ಭಾಗವಹಿಸಿದ ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆಯಿತ್ತು.