ಸುಳ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ಗಳಲ್ಲಿ ಒಂದಾದ ಸಿ ಎ ಬ್ಯಾಂಕ್ ಅಧ್ಯಕ್ಷೀಯ ಚುನಾವಣೆ ಇದೀಗ ನಡೆದು ಅವಿರೋಧ ಆಯ್ಕೆಯ ಮೂಲಕ ಅಧ್ಯಕ್ಷರಾಗಿ ವಿಕ್ರಂ ಎ ವಿ ಅಡ್ಪಂಗಾಯ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನ್ಯಾಯವಾದಿ ಚಂದ್ರಶೇಖರ ಆಯ್ಕೆಯಾದರು. ಅಲ್ಲದೇ 10 ಮಂದಿ ನಿರ್ದೇಶಕರುಗಳನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಮಾರಂಭದಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿನಯ ಕುಮಾರ್ ಕಂದಡ್ಕ ಮಾತನಾಡುತ್ತಾ ಸುಳ್ಯ ಮತ್ತು ಅಜ್ಜಾವರದ ಕೃಷಿಕರಿಗೆ ಮತ್ತು ಜನತೆಗೆ ಸಹಕಾರಿಯಾಗುವ ರೀತಿಯಲ್ಲಿ ಕೆಲಸ ನಿರ್ವಹಿಸಲಿ ಅಲ್ಲದೇ ಅಚ್ಚರಿಯ ರೀತಿಯಲ್ಲಿ ಯುವಕರಿಗೆ ಈ ಭಾರಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ನೀಡಿದ್ದು ಸಂತೋಷದ ವಿಚಾರವಾಗಿದೆ ಎಂದು ಹೇಳಿದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದ ಕು. ಭಾಗೀರಥಿ ಮುರುಳ್ಯ ಬಿಜೆಪಿಯಲ್ಲಿ ಮಾತ್ರ ಮಹಿಳೆಯರು ಮತ್ತು ಕಿರಿಯರು ಎಲ್ಲರನ್ನು ಬೆಳೆಸಬಲ್ಲ ಪಕ್ಷವಾಗಿದೆ ಕಾಲಕ್ಕೆ ತಕ್ಕಂತೆ ಯುವಕರನ್ನು ಮುಂದೆ ತರುವ ಕೆಲಸಗಳನ್ನು ಪಕ್ಷ ಮಾಡಿತ್ತಿದೆ ಎಂದು ಹೇಳುತ್ತಾ ನೂತನ ನಿರ್ದೇಶಕರು ಮತ್ತು ನಿರ್ಗಮಿತ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನವನ್ನು ನಡೆಸಿದರು.
ಕಂಜಿಪಿಲಿ ಮತನಾಡುತ್ತಾ ಅವರು ಇಲ್ಲಿಯ ತನಕ ತಂದೆಯ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಿದ್ದರು ಆದರೆ ಇಂದಿನಿಂದ ಅವರ ಹೆಸರಿನಿಂದ ತಂದೆಯನ್ನು ಹೊಗಳುವ ಕೆಲಸವಾಗುತ್ತಿತ್ತು ಇನ್ನುಮುಂದೆ ಇವರ ಹೆಸರಿನಿಂದ ತಂದೆಯ ಹೆಸರು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಅದ್ಯಕ್ಷರಾದ ವಿಕ್ರಂ ಮಾತನಾಡುತ್ತಾ ಪಕ್ಷ ನೀಡಿದ ಕೆಲಸವನ್ನು ಚಾಚು ತಪ್ಪದೇ ಮಾಡಿದ್ದು ಪಕ್ಷ ನಮ್ಮ ಮೇಲೆ ವಿಶ್ವಾಸವಿರಿಸಿ ಇದನ್ನು ನೀಡಿದ್ದಾರೆ. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತೆನೆ ಎಂದು ಹೇಳಿದರು.
ಉಪಾಧ್ಯಕ್ಷರು ಮತನಾಡುತ್ತಾ ನಮಗೆ ನೀಡಿದ ಅವಕಾಶವನ್ನು ಸದುಪಯೋಗ ಪಡಿಸಿ ಬ್ಯಾಂಕ್ ಮತ್ತು ಜನರಿಗೆ ಇನ್ನಷ್ಟು ಹತ್ತಿರವಾಗಿ ಕೆಲಸ ಮಾಡುತ್ತೆವೆ ಎಂದು ಹೇಳಿದರು. ಸಂದರ್ಭದಲ್ಲಿ ಹಿರಿಯರಾದ ಪಿಕೆ ಉಮೇಶ್ ,ನೂತನ ಉಪಾಧ್ಯಕ್ಷ ಚಂದ್ರಶೇಖರ ನಡುಮನೆ, ಬಾಲಗೋಪಾಲ ಸೇರ್ಕಜೆ, ಶೀನಪ್ಪ ಬಯಂಬು, ವೆಂಕಟ್ರಮಣ ಮುಳ್ಯ ವೇದಿಕೆಯಲ್ಲಿ ಇದ್ದರು.ವಿನಯ ಕುಮಾರ್ ಕಂದಡ್ಕ ಸ್ವಾಗತಿಸಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಹರೀಶ್ ಬೂಡುಪನ್ನೆ , ಎ ಎಸ್ ಮನ್ಮಥ , ಚಂದ್ರಶೇಖರ ಅಡ್ಪಂಗಾಯ , ವಿಜಯ ಕುಮಾರ್ ಉಬಡ್ಕ , ಚನಿಯ ಕಲ್ತಡ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.