Ad Widget

ಸುಬ್ರಹ್ಮಣ್ಯ; ರೋಟರಿ ಕ್ಲಬ್ ಇದರ ಪದಾಧಿಕಾರಿಗಳ ಸಭೆ

ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ವಿಶೇಷ ಸಭೆಯು ರೋಟರಿ ಕ್ಲಬ್ನ ಪೂರ್ವ ಅಧ್ಯಕ್ಷರಾದ ಗೋಪಾಲ್ ಎಣ್ಣೆ ಮಜಲ ಇವರ ಮನೆಯಲ್ಲಿ ದಿನಾಂಕ08/01/2024 ನಡೆಯಿತು ಸಭೆಯಲ್ಲಿ ಮುಂದಿನ 24 /25 ಸಾಲಿನ ಅಧ್ಯಕ್ಷರಾಗಿ ರೋಟೇರಿಯನ್ ಚಂದ್ರಶೇಖರ್ ನಾಯರ್ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಚಿದಾನಂದ ಕುಳ ಇವರನ್ನು ಆಯ್ಕೆ ಮಾಡಲಾಯಿತು, ಮತ್ತು ರೋಟರಿ ಕ್ಲಬ್ ನ ನಿಕಟ ಪೂರ್ವ ಕಾರ್ಯದರ್ಶಿ ಡಾ lರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ ಕಬಡ್ಡಿ ಟೂರ್ನಮೆಂಟ್ ಇದಕ್ಕೆ ರೋಟರಿ ಕ್ಲಬ್ ನಿಂದ ರೂ .30,000/= ಬಹುಮಾನವನ್ನು ಕೊಡ ಮಾಡುವುದಾಗಿ ತೀರ್ಮಾನಿಸಲಾಯಿತು.

. . . . . . .

ರೋಟರಿ ಕ್ಲಬ್ ಸುಬ್ರಮಣ್ಯ ಸುಮಾರು 21ವರ್ಷಗಳನ್ನು ಪೂರೈಸಿದ್ದು ಹಲವಾರು ಪ್ರಶಸ್ತಿಗಳನ್ನು ಜಿಲ್ಲಾಮಟ್ಟದಲ್ಲಿ ಪಡೆದುಕೊಂಡಿದೆ .ಅನೇಕ ಸರಕಾರಿ ಶಾಲೆಗಳಿಗೆ ಕಂಪ್ಯೂಟರ್, ಲೇಖನಿ ಸಾಮಗ್ರಿಗಳನ್ನು ಒದಗಿಸಿದೆ. ಸುಬ್ರಹ್ಮಣ್ಯದ ದೇವಾಲಯದ ಪರಿಸರದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಅದಲ್ಲದೆ ಈ ವರ್ಷ ಅತ್ಯುತ್ತಮ ಕೆಲಸಕ್ಕಾಗಿ ರೋಟರಿ ಅಂತರಾಷ್ಟ್ರೀಯ ಸೈಟೇಶನ್ ಅವಾರ್ಡ್ ಪಡೆದುಕೊಂಡಿದೆ . ಸಭೆಯ ವೇದಿಕೆಯಲ್ಲಿ ರೋಟರಿ ಕ್ಲಬ್ಬಿನ ಅಧ್ಯಕ್ಷ ಪ್ರಶಾಂತ್ ಕೋಡಿಬೈಲು , ಕಾರ್ಯದರ್ಶಿ ಮೋಹನ್ ದಾಸ್ ಎಣ್ಣೆ ಮಜಲು, ಪೂರ್ವ ಅಸಿಸ್ಟೆಂಟ್ ಗವರ್ನರ್ ಶಿವರಾಮ ಎನೆಕಲ್ಲು, ರಾಮಕೃಷ್ಣ ಮಲ್ಲಾರ, ಇವವರು ಉಪಸ್ಥಿತರಿದ್ದರು. ಕ್ಲಬ್ಬಿನ ಕಾರ್ಯದರ್ಶಿ ಮೋಹನ್ ದಾಸ್ ಎಣ್ಣೆ ಮಜಲು ಸ್ವಾಗತಿಸಿ ,ಪೂರ್ವಾಧ್ಯಕ್ಷ ವಿಜಯಕುಮಾರ್ ವಂದನಾರ್ಪಣೆ ಗೈದರು.

Related Posts

error: Content is protected !!